ಧಾರವಾಡ: ಯುದ್ಧ ಮನುಕುಲದ ಶತ್ರು, ಸದ್ಯ ಯುದ್ಧ ನಡೆಯುತ್ತಿರುವದು ದುರದೃಷ್ಟಕರ ಸಂಗತಿ ಎಂದು ಧಾರವಾಡದ ಮಹಾಮನೆ ಮಠದ ಬಸವಾನಂದ ಶ್ರೀ ಅಭಿಪ್ರಾಯಪಟ್ಟಿದ್ದಾರೆ.
ರಷ್ಯಾ, ಉಕ್ರೇನ್ ಯುದ್ಧ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮನುಷ್ಯನಲ್ಲಿ ಹಣ, ಶಸಾಸ್ತ್ರ ಜಾಸ್ತಿ ಆದಾಗ ಯುದ್ಧ ಆಗಿಯೇ ಆಗುತ್ತವೆ, ಯುದ್ಧಗಳು ನಡೆಯಬಾರದು ಎನ್ನುವುದು ಎಲ್ಲರ ಅಪೇಕ್ಷೆ. ಯಾವ ಯಾವುದೋ ನೆಪದಲ್ಲಿ ಯುದ್ಧಗಳು ನಡೆಯುತ್ತಲೇ ಇರುತ್ತವೆ, ಇದೀಗ ರಷ್ಯಾ, ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ಆದಷ್ಟು ಬೇಗ ನಿಲ್ಲಲಿ. ವಿಶ್ವ ಸಂಸ್ಥೆ ಯುದ್ಧದ ವಿಚಾರವಾಗಿ ಮಧ್ಯಪ್ರವೇಶಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ ಎಂದರು. ಇದನ್ನೂ ಓದಿ: ನಮ್ಮ ಮಕ್ಕಳು ಎಲ್ಲಿದ್ದಾರೆಂಬ ಮಾಹಿತಿಯಾದರೂ ಕೊಡಿ: ಐಡಾ ಮೆಲ್ವಿನ್ ಕಣ್ಣೀರು
ಉಕ್ರೇನ್‍ನಲ್ಲಿ ಅನೇಕ ವಿದ್ಯಾರ್ಥಿಗಳು ಸಿಳುಕಿಕೊಂಡಿದ್ದಾರೆ, ಅವರನ್ನು ಮತ್ತೆ ತಾಯ್ನಾಡಿಗೆ ಮತ್ತೆ ಕರೆ ತರಲು ಭಾರತ ಸರ್ಕಾರ ಒಳ್ಳೆ ವ್ಯವಸ್ಥೆ ಮಾಡಿದೆ. ಕೆಲದಿನಗಳ ಹಿಂದೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಲು ಸರ್ಕಾರ ಸಿದ್ಧವಿತ್ತು, ಆದರೆ ಯುದ್ಧ ಆಗುತ್ತೋ, ಇಲ್ಲವೋ ಅನ್ನೋ ಗೊಂದಲವಿತ್ತು. ಹಾಗಾಗಿ ಸ್ವಲ್ಪ ಹಿಂಜರಿದು ಬಿಟ್ಟರು. ಅಲ್ಲಿ ಓದಲು ಹೋದ ಕರ್ನಾಟಕದ ಹುಡುಗ ಜೀವ ಕಳೆದುಕೊಂಡಿದ್ದಾನೆ ಇದು ನೋವಿನ ಸಂಗತಿ. ಇದೀಗ ಉಕ್ರೇನ್‍ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಆದಷ್ಟು ಬೇಗ ಕರೆ ತರಲಿ. ಈ ನಷ್ಟ, ಜೀವ ಹಾನಿ ಬೇಗ ನಿಲ್ಲುವಂತಾಗಲಿ ಎಂದು ನುಡಿದರು. ಇದನ್ನೂ ಓದಿ: ಹೂ ತಗೊಂಡು ನಾವೇನು ಮಾಡ್ಬೇಕು- ಕೇಂದ್ರದ ವಿರುದ್ಧ ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳು ಗರಂ