ವಾಷಿಂಗ್ಟನ್: ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಲು ಪ್ರಾರಂಭಿಸಿದಾಗಿನಿಂದಲೂ ಎಲ್ಲೆಡೆ ಉಕ್ರೇನ್ ಮೇಲೆ ಅನುಕಂಪ ಹೆಚ್ಚಾಗಿದ್ದು, ರಷ್ಯಾ ಮೇಲಿನ ಕೋಪದ ಕಿಚ್ಚು ಹೆಚ್ಚಾಗಿದೆ.
ಇದೀಗ ಅಮೆರಿಕ ರಷ್ಯಾ ಮೇಲೆ ಸೇಡು ತೀರಿಸಿಕೊಳ್ಳಲು ವಿಚಿತ್ರವಾಗಿ ಪ್ರತಿಭಟಿಸಲು ಮುಂದಾಗಿದೆ. ರಷ್ಯಾದಿಂದ ತರಿಸಲಾಗಿದ್ದ ವೋಡ್ಕಾ ಬಾಟಲಿಗಳನ್ನು ಅಲ್ಲಿನ ಜನರು ಒಡೆದು ಚರಂಡಿಗೆ ಸುರಿಯುತ್ತಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಂ ಸೆಬಿಗೆ ಮಹಿಳೆ ಬಾಸ್
Advertisement
VODKA REBELLION: Bars, liquor stores in US, Canada say no to Russia’s famous export. https://t.co/STBUJkIOpp pic.twitter.com/V0OFhkO12e
— Fox News (@FoxNews) February 26, 2022
Advertisement
ಅಮೆರಿಕದ ಲಾಸ್ ವೆಗಾಸ್‍ನಲ್ಲಿ ಮದ್ಯ ಪ್ರಿಯರು ರಷ್ಯಾದ ಎಲ್ಲಾ ರೀತಿಯ ಮದ್ಯಗಳನ್ನೂ ನಿರಾಕರಿಸುತ್ತಿದ್ದಾರೆ. ಕೆಲವರು ದುಬಾರಿ ರಷ್ಯನ್ ವೋಡ್ಕಾ ಖರಿದಿಸಿ, ಅವುಗಳನ್ನು ಚರಂಡಿಗೆ ಚೆಲ್ಲುತ್ತಿದ್ದಾರೆ. ವ್ಯಕ್ತಿಯೊಬ್ಬ ವೋಡ್ಕಾವನ್ನು ಚೆಲ್ಲಿ ಬಾಟಲಿ ಖಾಲಿ ಮಾಡುತ್ತಿರುವ ವೀಡಿಯೋ ವೈರಲ್ ಆಗುತ್ತಿದೆ. ಇದನ್ನೂ ಓದಿ: ಮಿಲಿಟರಿ ಅನುಭವ ಹೊಂದಿರುವ ಕೈದಿಗಳನ್ನು ಬಿಡುಗಡೆ ಮಾಡುತ್ತೇವೆ: ವೊಲೊಡಿಮಿರ್ ಝೆಲೆನ್ಸ್ಕಿ
Advertisement
ದುಬಾರಿ ಮದ್ಯ ಖರೀದಿಯಿಂದ ಬಂದ ಹಣವನ್ನು ರೆಡ್ ಕ್ರಾಸ್ ವತಿಯಿಂದ ಉಕ್ರೇನ್‍ಗೆ ಮಾನವೀಯ ನೆರವು ಕಳುಹಿಸಲು ಬಳಸಲಾಗುವುದು ಎಂದು ವರದಿಗಳು ತಿಳಿಸಿವೆ. ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ನಡೆಸಿರುವುದನ್ನು ಕೆನಡಾ ಕೂಡಾ ಖಂಡಿಸಿದ್ದು, ರಷ್ಯಾದ ವೋಡ್ಕಾ ಖರೀದಿಸುವುದಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ.