ವಾಷಿಂಗ್ಟನ್: ಉಕ್ರೇನ್ ಮೇಲಿನ ದಾಳಿ ಖಂಡಿಸಿ ರಷ್ಯಾ ಮೇಲೆ ಆರ್ಥಿಕ ಯುದ್ಧ ಸಾರಿರುವ ಅಮೆರಿಕಾ ಮತ್ತೊಂದು ಪ್ರಮುಖ ನಿರ್ಣಯ ತೆಗೆದುಕೊಂಡಿದೆ. ರಷ್ಯಾ ಸರ್ಕಾರದ ವಿರುದ್ಧ ದಿಗ್ಬಂಧನದ ಅಸ್ತ್ರ ಝಳಪಿಸಿದ್ದ ಅಮೆರಿಕಾ ಈಗ ನೇರವಾಗಿ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಮತ್ತು ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್ ಮೇಲೆ ವೈಯಕ್ತಿಕ ನಿರ್ಬಂಧಗಳ ಹೇರಿ ಶಾಕ್ ನೀಡಲು ಮುಂದಾಗಿದೆ.
Advertisement
ಪುಟಿನ್, ಲಾವ್ರೋವ್ ಆಸ್ತಿಗಳನ್ನು ಫ್ರೀಜ್ ಮಾಡುವ ಐರೋಪ್ಯ ಒಕ್ಕೂಟದ ನಿರ್ಧಾರವನ್ನು ಬೆಂಬಲಿಸಿದೆ. ಈ ಹಿಂದೆ ಉತ್ತರ ಕೋರಿಯಾದ ಕಿಮ್ ಜಾಂಗ್ ಉನ್, ಬೆಲಾರಸ್‍ನ ಲುಕಷೆಂಕೋ, ಸಿರಿಯಾದ ಬಷರ್ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸಿದ ಮಾದರಿಯಲ್ಲೇ ಪುಟಿನ್, ಲಾವ್ರೋವ್ ಸೇರಿ 11 ಪ್ರಮುಖರ ಮೇಲೆ ಮೇಲೆ ನಿರ್ಬಂಧಗಳನ್ನು ಹೇರಲಾಗಿದೆ. ಈ ದಿಗ್ಬಂಧನದಿಂದಾಗಿ ಅವರ ಪ್ರಯಾಣಕ್ಕೆ, ಆರ್ಥಿಕ ಚಟುವಟಿಕೆಗೆ ಬ್ರೇಕ್ ಬಿದ್ದಂತಾಗಿದೆ. ಇದನ್ನೂ ಓದಿ: ಪುಟಿನ್ ನಡೆಗೆ ರಷ್ಯಾ ಪ್ರಜೆಗಳಿಂದಲೇ ಖಂಡನೆ – ಉಕ್ರೇನ್‍ನಲ್ಲಿ ರಷ್ಯಾದ ಬಾವುಟ ಹಾರಾಟ
Advertisement
Advertisement
ಆದರೆ ಇದರ ಪ್ರಭಾವ ಪುಟಿನ್ ಮೇಲೆ ಬೀಳುವ ಸಾಧ್ಯತೆ ಕಡಿಮೆ. ಯಾಕೆಂದರೆ ಈ ಬಗ್ಗೆ ಮೊದಲೇ ಚಿಂತಿಸಿರುವ 200 ಬಿಲಿಯನ್‍ಗಳ ಒಡೆಯ ಪುಟಿನ್ ಸಾಕಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಎಲ್ಲದರ ನಡುವೆ ಅಂತರಾಷ್ಟ್ರೀಯ ನಗದು ವ್ಯವಹಾರಗಳ ಸಂಸ್ಥೆ ಸ್ವಿಫ್ಟ್ ಪೇಮೆಂಟ್ ನೆಟ್‍ವರ್ಕ್‍ನಿಂದ ರಷ್ಯಾವನ್ನು ಹೊರಗಿಡಲು ಬ್ರಿಟನ್ ಪ್ರಯತ್ನ ಆರಂಭಿಸಿದೆ. ಜೊತೆಗೆ ನಿಮ್ಮ ಇಷ್ಟಾನುಸಾರ ನಿರ್ಬಂಧಗಳನ್ನು ಹೇರತೊಡಗಿದ್ರೆ ಸುಮ್ಮನಿರಲ್ಲ ಎಂದು ರಷ್ಯಾ ಎಚ್ಚರಿಸಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಅಮೆರಿಕಾ, ಯುರೋಪ್ ದೇಶಗಳ ಮೇಲೆ ಬೀಳಿಸೋದಾಗಿ ಧಮ್ಕಿ ಹಾಕಿದೆ. ಇದನ್ನೂ ಓದಿ: ನಿನ್ನೆ ಮದುವೆಯಾಗಿ ಇಂದು ದೇಶ ಸೇವೆಗೆ ಗನ್ ಹಿಡಿದ ದಂಪತಿ
Advertisement