ಕೀವ್: ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದ್ದ ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರಿಸಿದೆ. ಉಕ್ರೇನ್‍ನ ರೈಲ್ವೇ ನಿಲ್ದಾಣದ ಮೇಲೆ ನಡೆದ ರಾಕೆಟ್ ದಾಳಿಗೆ 22ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.
Advertisement
ಕಳೆದ 6 ತಿಂಗಳ ಹಿಂದೆ ಉಕ್ರೇನ್ ಮೇಲೆ ಯುದ್ಧ ಸಾರಿದ ರಷ್ಯಾ ಈಗಾಗಲೇ ಬಹುತೇಕ ಪ್ರದೇಶಗಳನ್ನು ವಶಕ್ಕೆ ಪಡೆದಿದೆ. ಉಕ್ರೇನ್‍ನ ಪ್ರತಿಹೋರಾಟದ ನಡುವೆ ಕೀವ್ ಸೇರಿದಂತೆ ಕೆಲ ನಗರಗಳು ಉಳಿದುಕೊಂಡಿದ್ದು, ರಷ್ಯಾ ಸೈನ್ಯ ಆಗಾಗ ಸಣ್ಣಪುಟ್ಟ ದಾಳಿ ಮಾಡುತ್ತಿವೆ. ಇದನ್ನೂ ಓದಿ: ಆತ್ಮಹತ್ಯಾ ದಾಳಿಗೆ ಪಾಕ್ ಸೇನೆ 30 ಸಾವಿರ ನೀಡಿದೆ: ಸತ್ಯ ಬಾಯ್ಬಿಟ್ಟ ಬಂಧಿತ ಟೆರರಿಸ್ಟ್
Advertisement
Advertisement
ಸೋವಿಯತ್ ಅಳ್ವಿಕೆಯಿಂದ ಹೊರಬಂದು ಸ್ವಾತಂತ್ರ್ಯ ಪಡೆದ ಉಕ್ರೇನ್‍ಗೆ ನಿನ್ನೆ ಸ್ವಾತಂತ್ರೋತ್ಸವದ ಸಂಭ್ರಮ. ಈ ಸಂಭ್ರಮದಲ್ಲಿದ್ದಾಗ ರೈಲ್ವೇ ನಿಲ್ದಾಣದ ಮೇಲೆ ರಷ್ಯಾ ಸೈನ್ಯ ದಾಳಿ ನಡೆಸಿ 22ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದೆ. ಘಟನೆಯಲ್ಲಿ 50ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತಕ್ಕೆ 9 ಮಂದಿ ಬಲಿ
Advertisement
It’s already 22 killed. Attacks on the railway when people try to escape are the cruelest. It’s just near Donetsk region where it’s advised not to stay. More people are wounded. Among the dead 11 year old https://t.co/3B4EKY4rmN
— Nataliya Gumenyuk (@ngumenyuk) August 24, 2022
ಚಾಪ್ಲಿನ್ ಎಂಬ ಸಣ್ಣ ನಗರದ ರೈಲ್ವೇ ನಿಲ್ದಾಣದ ಮೇಲೆ ರಷ್ಯಾ ರಾಕೆಟ್ ದಾಳಿ ನಡೆಸಿದೆ. ಚಾಪ್ಲಿನ್ ದಾಳಿಯ ಹೊಣೆಯನ್ನು ರಷ್ಯಾ ಹೊರಬೇಕಿದೆ. ನಮ್ಮ ಜನರ ರಕ್ಷಣೆಗೆ ನಾವು ಸದಾ ಸಿದ್ಧರಿದ್ದೇವೆ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ. ಆ ಬಳಿಕ ಉಕ್ರೇನ್ ಸ್ವಾತಂತ್ರ್ಯೋತ್ಸವ ಆಚರಣೆಯನ್ನು ರದ್ದುಪಡಿಸಿದೆ.