ಕೀವ್: ಮರಿಯುಪೋಲ್ ನಗರದಲ್ಲಿ ರಷ್ಯಾ ಸೇನೆ ಥಿಯೇಟರ್ ಮೇಲೆ ಬಾಂಬ್ ದಾಳಿ ನಡೆಸಿದೆ. ಥಿಯೇಟರ್‌ನಲ್ಲಿದ್ದ ಜನರ ರಕ್ಷಣಾ ಕಾರ್ಯ ನಡೆಯುತ್ತಿದೆ.
Advertisement
ಉಕ್ರೇನ್‍ನ ಹಲವು ಜನ ಈ ಥಿಯೇಟರ್‌ನ ಅಂಡರ್ ಗ್ರೌಂಡ್‍ನಲ್ಲಿ ಆಶ್ರಯ ಪಡೆದಿದ್ದರು. ಇದನ್ನು ಗುರಿಯಾಗಿಸಿ ರಷ್ಯಾ ಸೇನೆ ದಾಳಿ ನಡೆಸಿದೆ. ಈಗಾಗಲೇ ಥಿಯೇಟರ್‌ನಲ್ಲಿದ್ದ 130 ಮಂದಿಯನ್ನು ರಕ್ಷಣೆ ಮಾಡಲಾಗಿದ್ದು, ಇನ್ನುಳಿದವರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಥಿಯೇಟರ್ ಮೇಲೆ ಬಾಂಬ್ ದಾಳಿಯಾಗುತ್ತಿದ್ದಂತೆ ದಟ್ಟ ಹೊಗೆ ಬರಲಾರಂಭಿಸಿದೆ. ಇದರಿಂದ ಸಾಕಷ್ಟು ಜನ ಮರಣ ಹೊಂದಿರುವ ಬಗ್ಗೆ ವರದಿಯಾಗಿದೆ. ಇದನ್ನೂ ಓದಿ: ಶೆಲ್ ದಾಳಿಗೊಳಗಾದ ಯುವತಿ ನೋಡಲು ಆಸ್ಪತ್ರೆಗೆ ಭೇಟಿಕೊಟ್ಟ ಉಕ್ರೆನ್ ಅಧ್ಯಕ್ಷ
Advertisement
Advertisement
ಯುದ್ಧ ಪ್ರಾರಂಭವಾದಗಿನಿಂದ ಕೀವ್‍ನಗರದಲ್ಲಿ 60 ನಾಗರೀಕರು ಸೇರಿ ಒಟ್ಟು 222 ಜನ ಮೃತಪಟ್ಟಿರುವ ಬಗ್ಗೆ ಉಕ್ರೇನ್ ಸರ್ಕಾರ ಸ್ಪಷ್ಟಪಡಿಸಿದೆ. ಇನ್ನುಳಿದಂತೆ 241 ನಾಗರೀಕರು ಸೇರಿ ಒಟ್ಟು 889 ಜನ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಯುದ್ಧ ಆರಂಭವಾಗಿ 23 ದಿನಕ್ಕೆ ಕಾಲಿಟ್ಟರು ಯುದ್ಧ ನಿಲ್ಲುವ ಸನ್ನಿವೇಶ ಕಾಣಿಸುತ್ತಿಲ್ಲ. ರಷ್ಯಾ ನಾಗರೀಕರು ಮತ್ತು ಜನವಸತಿ ಪ್ರದೇಶ, ಆಸ್ಪತ್ರೆ, ಶಾಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಮಡಿದ ನವೀನ್ ಪಾರ್ಥೀವ ಶರೀರ ಕೊನೆಗೂ ತಾಯ್ನಾಡಿಗೆ
Advertisement
https://twitter.com/pokopok54/status/1504758665668341761
ಉಕ್ರೇನ್ ಸೇನೆ ನೀಡಿರುವ ಮಾಹಿತಿ ಪ್ರಕಾರ ಈವರೆಗೆ ರಷ್ಯಾದ 14,200 ಸೈನಿಕರು, 93 ಯುದ್ಧ ವಿಮಾನ, 112 ಹೆಲಿಕಾಪ್ಟರ್, 450 ಟ್ಯಾಂಕ್, 205 ಮಿಲಿಟರಿ ಶಸ್ತ್ರಸಜ್ಜಿತ ವಾಹನ, 1,448 ಯುದ್ದೋಪಕರಣ ಸಾಗಾಟ ವಾಹನ, 72 ಎಮ್‍ಎಲ್‍ಆರ್‌ಎಸ್, 3 ಬೋಟ್, 879 ವಾಹನ, 60 ಇಂಧನ ಟ್ಯಾಂಕರ್, 12 ಡ್ರೋನ್‍ಗಳನ್ನು ಹೊಡೆದುರುಳಿಸಿರುವುದಾಗಿ ಉಕ್ರೇನ್ ತಿಳಿಸಿರುವ ಮಾಹಿತಿಯೊಂದನ್ನು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.