ನವದೆಹಲಿ: ಭಾರತದ ಧ್ವಜ ಇದ್ದ ಕಾರಣ ನಾವು ಎಲ್ಲೂ ನಿಲ್ಲದೇ ಸುಲಭವಾಗಿ ಗಡಿಯನ್ನು ತಲುಪಿ ಸ್ವದೇಶವನ್ನು ತಲುಪಿದ್ದೇವೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ರೂಮೇನಿಯಾದಿಂದ ಇಂದು ಬೆಳಗ್ಗೆ ದೆಹಲಿಗೆ ಏರ್ ಇಂಡಿಯಾ ವಿಮಾನದ ಮೂಲಕ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಈ ವೇಳೆ ಬಿಹಾರ ವಿದ್ಯಾರ್ಥಿಗಳು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಬೈಡನ್ ದೌರ್ಬಲ್ಯದಿಂದಲೇ ಈ ಅನಾಹುತವಾಗಿದೆ: ಟ್ರಂಪ್
Advertisement
Yahi Badla hai pichhale 7 saal me!????
Pahle to bhaga dete the..✌️
PROUD INDIAN????????????https://t.co/jFT5Lgezh7 pic.twitter.com/gW1lLhcq0O
— ADV. ASHUTOSH J. DUBEY ???????? (@AdvAshutoshBJP) February 27, 2022
Advertisement
ರಾಷ್ಟ್ರಧ್ವಜ ನೋಡಿ ಉಕ್ರೇನ್ ಮತ್ತು ರಷ್ಯಾದವರು ಯಾರೂ ನಮ್ಮನ್ನು ತಡೆಯಲಿಲ್ಲ ನಡೆಯಲಿಲ್ಲ. ಸುಲಭವಾಗಿ ನಾವು ಗಡಿಯನ್ನು ತಲುಪಿದ್ದೇವೆ ಎಂದು ತಿಳಿಸಿದ್ದಾರೆ.
Advertisement
"Seeing the Indian Flag, neither the Ukrainians nor Russians stopped us", say the stranded Students who returned to India from Ukraine.
This is the power of #NewIndia under PM @narendramodi.
Jai Hind ????????
— C T Ravi ???????? ಸಿ ಟಿ ರವಿ (@CTRavi_BJP) February 27, 2022
Advertisement
ಉಕ್ರೇನ್ ಮೂಲಕ ಭಾರತಕ್ಕೆ ಬರುತ್ತಿರುವ ವಿದ್ಯಾರ್ಥಿಯೊಬ್ಬನ ವೀಡಿಯೋ ವೈರಲ್ ಆಗಿದೆ. ಈ ವೀಡಿಯೋದಲ್ಲಿ ನಾವು ಮೂರು ರಾಜ್ಯವನ್ನು ದಾಟಿ ಬರುತ್ತಿದ್ದೇವೆ. ಗಡಿಯಲ್ಲಿ ಸೈನಿಕರು ಪೊಲೀಸರು ಎಲ್ಲರೂ ಇದ್ದಾರೆ. ಆದರೆ ನಮ್ಮ ರಾಷ್ಟ್ರಧ್ವಜವನ್ನು ನೋಡಿ ತಪಾಸಣೆ ಮಾಡದೇ ಬಿಟ್ಟುಬಿಟ್ಟಿದ್ದಾರೆ ಎಂದು ಹೇಳಿದ್ದಾನೆ.
Bihar students stranded in Ukraine amid crisis, arrive in their home state. "Happy to be back. Seeing the Indian flag, neither Ukrainians nor Russians would say anything, so it was a relief. The situation is grave there, some of our friends are living in bunkers," they said pic.twitter.com/Kpp7LSZWEf
— The Times Of India (@timesofindia) February 27, 2022
ಉಕ್ರೇನ್‌ನಿಂದ ಭಾರತಕ್ಕೆ ಬರುತ್ತಿರುವ ವಿದ್ಯಾರ್ಥಿಗಳಿಗೆ ಮತ್ತು ಪ್ರಜೆಗಳಿಗೆ ರಾಷ್ಟ್ರಧ್ವಜದೊಂದಿಗೆ ಬರುವಂತೆ ರಾಯಭಾರ ಕಚೇರಿ ಸೂಚಿಸಿತ್ತು. ಅದರಂತೆ ವಿದ್ಯಾರ್ಥಿಗಳು ರಾಷ್ಟ್ರಧ್ವಜವನ್ನು ಬ್ಯಾಗಿನ ಮುಂಭಾಗ ಸಿಕ್ಕಿಸಿಕೊಂಡು ಗಡಿಯನ್ನು ದಾಟಿ ಏರ್ ಇಂಡಿಯಾ ವಿಮಾನವನ್ನು ಹತ್ತುತ್ತಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿರುವ ಕಟ್ಟ ಕಡೆಯ ವಿದ್ಯಾರ್ಥಿಯನ್ನು ಸುರಕ್ಷಿತವಾಗಿ ಕರೆತರುವ ತನಕ ಆಪರೇಷನ್ ನಿಲ್ಲದು: ಆರ್.ಅಶೋಕ್
ಉಕ್ರೇನ್ ಮತ್ತು ರಷ್ಯಾದ ಮಧ್ಯೆ ಭಾರತದ ಸಂಬಂಧ ಉತ್ತಮವಾಗಿದೆ. ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ವೊಲೊಡಿಮಿರ್ ಝೆಲೆನ್ಸ್ಕಿಜೊತೆ ದೂರವಾಣಿ ಕರೆ ಮಾಡಿ ನಮ್ಮ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಯನ್ನು ತಿಳಿಸಿದ್ದರು.
#OperationGanga continues.
The second flight from Bucharest has taken off for Delhi with 250 Indian nationals. pic.twitter.com/zml6OPNirN
— Dr. S. Jaishankar (@DrSJaishankar) February 26, 2022
ಎರಡು ರಾಷ್ಟ್ರಗಳ ಮಧ್ಯೆ ಯುದ್ಧ ನಡೆಯುತ್ತಿರುವಾಗ ಸಂಚಾರ ಮಾಡುವುದು ಬಹಳ ಕಷ್ಟ. ಗಡಿಯಲ್ಲಿ ಸೈನಿಕರು ತಪಾಸಣೆ ಮಾಡಿಯೇ ಬಿಡುತ್ತಾರೆ. ಹೀಗಿರುವಾಗ ಭಾರತದ ಧ್ವಜ ನೋಡಿ ಸೈನಿಕರು ಸುಲಭವಾಗಿ ನಮ್ಮನ್ನು ಬಿಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಳ್ಳುತ್ತಿದ್ದಾರೆ.