ಕೀವ್: ರಷ್ಯಾ ದಾಳಿಗೆ ಉಕ್ರೇನ್ ತತ್ತರಿಸಿದ್ದು, ಇಂದು ಖಾರ್ಕಿವ್‍ನ ಸೆಂಟ್ರಲ್ ಸ್ಕ್ವೇರ್ ಮೇಲೆ ರಷ್ಯಾ ದಾಳಿ ನಡೆಸಿದ್ದು, ಕಟ್ಟಡ ಸಂಪೂರ್ಣ ನಾಶವಾಗಿದೆ.
ನಿನ್ನೆ ರಾತ್ರಿಯಿಡೀ ಕೀವ್ ಮೇಲೆ ರಷ್ಯಾ ದಾಳಿ ನಡೆಸಿದೆ. ರಷ್ಯಾ ದಾಳಿಗೆ ಉಕ್ರೇನ್‍ನ ಬೃಹತ್ ಕಟ್ಟಗಳು ಧ್ವಂಸವಾಗಿದೆ. ರಷ್ಯಾ ಜನವಸತಿ ಕೇಂದ್ರಗಳ ಮೇಲೂ ದಾಳಿ ಮಾಡುತ್ತಿದ್ದು, ಈಗ ಖಾರ್ಕಿವ್‍ನ ಕೇಂದ್ರದ ಮೇಲೆ ಬಾಂಬ್ ದಾಳಿ ಮಾಡಿದೆ. ಇದು ಸ್ಥಳೀಯ ಆಡಳಿತ ಕಚೇರಿ ಮೇಲೆ ರಷ್ಯಾ ದಾಳಿ ನಡೆಸಿದೆ. ಕೀವ್ ಮತ್ತು ಖಾರ್ಕಿವ್‍ನಲ್ಲಿ ಪರಿಸ್ಥಿತಿ ಶೋಚನೀಯವಾಗಿದೆ.
Advertisement
Videos of an attack on the city centre of Kharkiv, its regional administration building.
(Unverified, from @ truexanewsua on Telegram) pic.twitter.com/sxZeL8SCsL
— Polina Ivanova (@polinaivanovva) March 1, 2022
Advertisement
ರಷ್ಯಾದಿಂದ ಉಕ್ರೇನ್‍ನ ಮೇಲೆ ವ್ಯಾಕ್ಯೂಮ್ ಬಾಂಬ್ ಪ್ರಯೋಗವಾಗುತ್ತಿದೆ. ನಿನ್ನೆ ರಾತ್ರಿಯಿಡೀ ದಾಳಿ ನಡೆಸಿದೆ. ಉಕ್ರೇನ್‍ನಲ್ಲಿ ಕ್ಷಿಪಣಿ ದಾಳಿ ನಿರಂತರವಾಗಿ ನಡೆಸುತ್ತಿದ್ದು, ಜನರು ಕ್ಷಣ ಕ್ಷಣಕ್ಕೂ ಭಯದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ರಷ್ಯಾ ಪಡೆಗಳು ನಗರಗಳ ಮೇಲೆ ಫಿರಂಗಿಗಳನ್ನು ಬಳಸುತ್ತಿವೆ. ಇದನ್ನೂ ಓದಿ: ಜಾರ್ಖಂಡ್ ದೋಣಿ ದುರಂತದಲ್ಲಿ 14 ಮಂದಿ ಸಾವು – ಸಿಎಂನಿಂದ 4 ಲಕ್ಷ ಪರಿಹಾರ ಘೋಷಣೆ
Advertisement
ವ್ಯಾಕ್ಯೂಮ್ ಬಾಂಬ್ ಅಪ್ಪಳಿಸಿದರೆ ವಾತಾವರಣದ ಆಮ್ಲಜನಕ ಗ್ರಹಿಸಿ ಹೆಚ್ಚಿನ ಅನಾಹುತವಾಗುತ್ತದೆ. 300ಮೀ ದೂರಕ್ಕೆ ಭಾರೀ ಹಾನಿ ಉಂಟು ಮಾಡಬಲ್ಲದು. ಇದನ್ನು ಕೀವ್ ಮೇಲೆ ಪ್ರಯೋಗಿಸಲಾಗಿದೆ ಜೊತೆಗೆ ರಷ್ಯಾದಿಂದ ಪರಮಾಣು ರಹಿತ ಅತ್ಯಾಧುನಿಕ ಬಾಂಬ್‍ಗಳನ್ನು ಪ್ರಯೋಗ ಮಾಡಲಾಗುತ್ತಿದೆ ಎಂದು ಉಕ್ರೇನ್ ಆರೋಪಿಸಿದೆ.
Advertisement
ಉಕ್ರೇನ್ ಮೇಲೆ 6ನೇ ದಿನ ಇನ್ನಷ್ಟು ಭೀಕರ ದಾಳಿಗೆ ರಷ್ಯಾ ಸನ್ನದ್ಧವಾಗಿದೆ. ರಾಜಧಾನಿ ಕೀವ್ ಹೊರಭಾಗದಲ್ಲಿ 40 ಮೈಲಿಯಷ್ಟು ಮಿಲಿಟರಿ ವಾಹನಗಳ ಸಾಲು ನಿಂತಿವೆ. 40 ಮೈಲಿ ದೂರದಷ್ಟು ಮಿಲಿಟರಿ ವಾಹನಗಳನ್ನು ರಷ್ಯಾ ಸನ್ನದ್ಧಗೊಳಿಸಿದೆ. ಯಾವುದೇ ಕ್ಷಣದಲ್ಲಾದರೂ ಉಕ್ರೇನ್ ಮೇಲೆ ಇನ್ನಷ್ಟು ಭೀಕರ ದಾಳಿ ನಿರೀಕ್ಷೆಯಿದೆ. ಇದನ್ನೂ ಓದಿ: ರಷ್ಯಾ ಅಧ್ಯಕ್ಷನಿಂದ ಬ್ಲ್ಯಾಕ್ ಬೆಲ್ಟ್ ವಾಪಸ್ ಪಡೆದ ವಿಶ್ವ ಟೇಕ್ವಾಂಡೋ