ಕೀವ್/ನವದೆಹಲಿ: ಉಕ್ರೇನ್‍ನಿಂದ ಜೀವ ಉಳಿಸಿಕೊಂಡು ಬಂದ ವಿದ್ಯಾರ್ಥಿಗಳಿಗೆ ಹೊಸ ಟೆನ್ಶನ್ ಶುರುವಾಗಿದೆ. ಮುಂದಿನ ವಿದ್ಯಾಭ್ಯಾಸದ ಬಗ್ಗೆ ಇದೀಗ ವಿದ್ಯಾರ್ಥಿಗಳು ತಲೆಕೆಡಿಸಿಕೊಂಡಿದ್ದಾರೆ. ಈ ಮಕ್ಕಳಿಗೆ ಸದ್ಯಕ್ಕೆ ಭಾರತದಲ್ಲಿ ಶಿಕ್ಷಣ ಮುಂದುವರಿಸಲು ಅವಕಾಶ ಸಿಗಲ್ಲ. ಹೀಗಾಗಿ ಭಾರತದ ವಿದ್ಯಾರ್ಥಿಗಳ ಭವಿಷ್ಯ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.
Advertisement
ಭಾರತದ ಸದ್ಯದ ನಿಯಮದಲ್ಲಿ ಶಿಕ್ಷಣ ಮುಂದುವರಿಕೆಗೆ ಅವಕಾಶ ಇಲ್ಲ. ಕೇಂದ್ರ ಸರ್ಕಾರಕ್ಕೆ ಮಾತ್ರ ಈ ಅವಕಾಶ ಕೊಡಲು ಅಧಿಕಾರ ಇದೆಯೇ ಹೊರತು, ಏಕಾಏಕಿ ಅನುಮತಿ ಕೊಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಇದಕ್ಕಾಗಿ ಕೇಂದ್ರ ಸರ್ಕಾರ ವಿಶೇಷ ಕಾನೂನು ಜಾರಿ ಮಾಡಬೇಕು. ಇದನ್ನೂ ಓದಿ: ತಲೆಕೆಳಗಾದ ರಷ್ಯಾದ ಲೆಕ್ಕಾಚಾರ – ರಾಜಧಾನಿ ಕಿವ್ ಇನ್ನೂ ಕೈವಶವಾಗಿಲ್ಲ ಯಾಕೆ?
Advertisement
Advertisement
ಭಾರತದಲ್ಲಿ ವ್ಯಾಸಂಗ ಮುಂದುವರಿಸೋ ವಿದ್ಯಾರ್ಥಿಗಳಿಗೆ ವಿಶೇಷ ಕೋಟಾದಡಿ ಸೀಟು ನೀಡಬೇಕಾಗುತ್ತೆ. ಈ ಪ್ರಕ್ರಿಯೆ ಸಂಪೂರ್ಣ ಕೇಂದ್ರ ಸರ್ಕಾರವೇ ನಡೆಸಿ ರಾಜ್ಯಗಳಿಗೆ ಸೂಚನೆ ಕೊಡಬೇಕು. ವೈದ್ಯಕೀಯ ಬಗ್ಗೆ ಉಕ್ರೇನ್ ಶೈಕ್ಷಣಿಕ ವ್ಯವಸ್ಥೆ ಮತ್ತು ಭಾರತ ವ್ಯವಸ್ಥೆ ವಿಭಿನ್ನವಾಗಿರುತ್ತದೆ. ಇದನ್ನೂ ಓದಿ: ಉಕ್ರೇನ್ ನೆರವಿಗೆನಿಂತ ಎಲೋನ್ ಮಸ್ಕ್ – ಸ್ಟಾರ್ ಲಿಂಕ್ ಸ್ಯಾಟಲೈಟ್ ಮೂಲಕ ಬ್ರಾಡ್‍ಬ್ಯಾಂಡ್ ಸೇವೆ
Advertisement
ಭಾರತಕ್ಕೆ ಬಂದಿರೋ ವಿದ್ಯಾರ್ಥಿಗಳು ವಿವಿಧ ವರ್ಷದ ಕೋರ್ಸ್‍ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಹೀಗಾಗಿ ಇವರಿಗಾಗಿ ಕೇಂದ್ರ ಸರ್ಕಾರ ನಿಯಮ ರೂಪಿಸಿ ಅವಕಾಶ ಮಾಡಿಕೊಡಬಹುದು. ಯುದ್ಧ ಮುಗಿದ ಬಳಿಕ ಉಕ್ರೇನ್‍ನಲ್ಲಿಯೇ ಶಿಕ್ಷಣ ಮುಂದುವರಿಕೆ ಬಗ್ಗೆ ರಾಜತಾಂತ್ರಿಕ ಮಾತುಕತೆ ನಡೆಸುವ ಸಾಧ್ಯತೆಗಳಿವೆ. ಇದನ್ನೂ ಓದಿ: ಉಕ್ರೇನ್ ದಾಳಿಗೆ 4,300 ರಷ್ಯಾ ಸೈನಿಕರ ಸಾವು – ಸುಕೋಯ್ ಫೈಟರ್ ಜೆಟ್ ಧ್ವಂಸ
https://www.youtube.com/watch?v=riX3zrQuZLg