ಕೀವ್: ರಷ್ಯಾ, ಉಕ್ರೇನ್ ಮೇಲೆ ದಾಳಿ ನಡೆಸಿ ಇಂಟರ್‌ನೆಟ್ ಸೇವೆಗಳನ್ನು ಕಡಿತಗೊಳಿಸುತ್ತಿದ್ದಂತೆ ಎಲೆಕ್ಟ್ರಿಕ್ ಕಾರು ಕಂಪನಿ ಟೆಸ್ಲಾದ ಸ್ಥಾಪಕ ಶ್ರೀಮಂತ ಉದ್ಯಮಿ ಎಲೋನ್ ಮಸ್ಕ್ ಉಕ್ರೇನ್ ನೆರವಿಗೆ ಧಾವಿಸಿದ್ದಾರೆ.
Advertisement
ಸ್ಟಾರ್ ಲಿಂಕ್ ಸ್ಯಾಟಲೈಟ್ ಮೂಲಕ ಉಕ್ರೇನ್‍ನಲ್ಲಿ ಬ್ರಾಡ್‍ಬ್ಯಾಂಡ್ ಸೇವೆಗಳನ್ನು ಆರಂಭಿಸಿ, ಇಂಟರ್‌ನೆಟ್ ಸೇವೆಗಳನ್ನು ಮರಳಿಸಿದೆ. ಟೆರ್ಮಿನಲ್ ಸಹ ಶುರುಮಾಡುವುದಾಗಿ ಎಲೋನ್ ಮಸ್ಕ್ ಘೋಷಿಸಿದ್ದಾರೆ. ಇದರಿಂದ ಉಕ್ರೇನ್ ದೇಶದಲ್ಲಿ ಸಂವಹನ ವ್ಯವಸ್ಥೆ ಮತ್ತೆ ಸಹಜ ಸ್ಥಿತಿಗೆ ಬಂದಿದೆ. ಇದಲ್ಲದೆ ರಷ್ಯಾಗೆ ಹೆದರಿ ಉಕ್ರೇನ್ ಬೆಂಬಲಕ್ಕೆ ನೇರವಾಗಿ ಧಾವಿಸಲು ಹೆದರುತ್ತಿರುವ ದೇಶಗಳ ಮಧ್ಯೆ ಹ್ಯಾಕರ್‌ಗಳ ಗುಂಪೊಂದು ಉಕ್ರೇನ್ ನಾಗರಿಕರ ಬೆಂಬಲಕ್ಕೆ ಧಾವಿಸಿದೆ. ರಷ್ಯಾ ಮೇಲೆ ಸೈಬರ್ ಯುದ್ಧವನ್ನು ಪ್ರಕಟಿಸಿದೆ. ರಷ್ಯಾದ ನೂರಾರು ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿದೆ. ಚೆಚನ್ಯ ಸರ್ಕಾರದ ವೆಬ್‍ಸೈಟ್ ಹ್ಯಾಕ್ ಮಾಡಿರುವ ಅಪರಿಚಿತ ಹ್ಯಾಕರ್‌ಗಳ ಗುಂಪು, 12 ಗಂಟೆಗಳ ಕಾಲ ರಷ್ಯಾವನ್ನು ಆಟ ಆಡಿಸಿದೆ. ಇದನ್ನೂ ಓದಿ: ಮಸ್ಕ್ ಸ್ಟಾರ್‌ಲಿಂಕ್ ಇಂಟರ್‌ನೆಟ್ ಬಳಸಿದರೆ ರಷ್ಯಾದಲ್ಲಿ ದಂಡ
Advertisement
Advertisement
ಇತ್ತ ಭಾರತ ಸೇರಿದಂತೆ ಇತರ ದೇಶಗಳಲ್ಲಿ ಉಕ್ರೇನ್ ಮೇಲಿನ ರಷ್ಯಾ ದಾಳಿ ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ದಾಳಿಯನ್ನು ಖಂಡಿಸ್ತಿದ್ದಾರೆ. ಮತ್ತೆ ಕೆಲವರು ರಷ್ಯಾದ ಪುಟಿನ್ ನಡೆಯನ್ನು ಸ್ವಾಗತಿಸಿದ್ದಾರೆ. ಇನ್ನೊಂದಿಷ್ಟು ಮಂದಿ ಪುಟಿನ್ ಹಾದಿಯಲ್ಲಿಯೇ ಪ್ರಧಾನಿ ನರೇಂದ್ರ ಮೋದಿಯೂ ನಡೆಯಬೇಕೆಂದು ಬಯಸ್ತಿದ್ದಾರೆ. ಪಾಕಿಸ್ತಾನದ ಅಧೀನದಲ್ಲಿರುವ ಪಾಕ್ ಆಕ್ರಮಿತ ಕಾಶ್ಮೀರವನ್ನು, ಚೀನಾ ಅಧೀನದಲ್ಲಿರುವ ಅಕ್ಸಾಯ್‍ಚಿನ್ ಪ್ರದೇಶಗಳನ್ನು ಭಾರತ ಸರ್ಕಾರ ಸೈನಿಕ ದಾಳಿ ನಡೆಸುವ ಮೂಲಕ ವಶಕ್ಕೆ ಪಡೆಯಬೇಕೆಂದು ಒತ್ತಾಯಿಸುತ್ತಿದ್ದಾರೆ. ಇದನ್ನೂ ಓದಿ: ಮಸ್ಕ್‌ಗೆ ಅಂಬಾನಿ ಸೆಡ್ಡು – ಜಿಯೋದಿಂದ ಬರಲಿದೆ ಸ್ಯಾಟಲೈಟ್ ಇಂಟರ್‌ನೆಟ್
Advertisement
Starlink service is now active in Ukraine. More terminals en route.
— Elon Musk (@elonmusk) February 26, 2022
While whole world is in fear of world war 3, India is keeping close watch on Russia Ukraine crisis and its effects on geopolitics. Narendra Modi have Ajit Doval and S Jayshankar like intelligent people to tackle this situation.#Ukraina #RussiaUkraineConflict #Russia #Putin pic.twitter.com/ikcqJUyudh
— Satellite Shankar Fauji Fan Club (@ShivRan63297666) February 24, 2022
ಪುಟಿನ್ ಅಖಂಡ ರಷ್ಯಾಗಾಗಿ ಈ ದಾಳಿ ನಡೆಸಿದ್ದು, ಮೋದಿ ಕೂಡ ಅಖಂಡ ಭಾರತಕ್ಕಾಗಿ ಹೋರಾಟ ಶುರು ಮಾಡಬೇಕು ಎನ್ನುತ್ತಿದ್ದಾರೆ. ಅಖಂಡ ಭಾರತ ಅಂದ್ರೆ ಚೀನಾ, ಪಾಕಿಸ್ತಾನದಲ್ಲಿರುವ ವಿವಾದಾತ್ಮಕ ಪ್ರಾಂತ್ಯಗಳನ್ನು ಭಾರತ ಮತ್ತೆ ವಶಕ್ಕೆ ಪಡೆಯುವುದಾಗಿದೆ. ಈ ಬೇಡಿಕೆಯನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಹಲವರು ಆಗಾಗ ಮುಂದಿಡುತ್ತಲೇ ಬರುತ್ತಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.