ವಾಷಿಂಗ್ಟನ್: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಕರೆ ಮಾಡಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ಗಂಟೆಗೂ ಹೆಚ್ಚು ಸಂಭಾಷಣೆ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ `ಟ್ರುಥ್’ನಲ್ಲಿ ಡೊನಾಲ್ಡ್ ಟ್ರಂಪ್ ಮಾಹಿತಿ ಹಂಚಿಕೊಂಡಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕೀ ಅವರ ಭೇಟಿಗೂ ಮುನ್ನ ಪುಟಿನ್ ಜೊತೆ ಟ್ರಂಪ್ ಮಾತುಕತೆ ನಡೆಸಿದ್ದು, ಎರಡು ತಾಸಿಗೂ ಅಧಿಕ ಕಾಲ ಮಾತುಕತೆ ನಡೆದಿದೆ ಎಂದು ಶ್ವೇತಭವನ ತಿಳಿಸಿದೆ.ಇದನ್ನೂ ಓದಿ: ಭಾರತದ ಆರ್ಥಿಕತೆಗೆ ರಷ್ಯಾದ ತೈಲ ಮುಖ್ಯ, ನಮ್ಮ ಸಂಬಂಧ ನಂಬಿಕೆ ಮೇಲೆ ಕಟ್ಟಿರುವ ಸೇತುವೆ: ರಷ್ಯಾ
ಪುಟಿನ್ ಜೊತೆ ಮಾತನಾಡಿದ್ದು ಫಲಪ್ರದವಾಗಿತ್ತು. ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆ ಆಗುವುದು ಅವರ ಶತಮಾನಗಳ ಕನಸಾಗಿತ್ತು. ಹೀಗಾಗಿ ನನ್ನನ್ನು ಹಾಗೂ ಅಮೆರಿಕವನ್ನು ಅಭಿನಂದಿಸಿದ್ದಾರೆ. ಈ ಶಾಂತಿ ಸ್ಥಾಪನೆ ಮೂಲಕ ರಷ್ಯಾ ಹಾಗೂ ಉಕ್ರೇನ್ ನಡುವಿನ ಸಂಘರ್ಷವನ್ನು ಕೊನೆಗೊಳಿಸಲು ಸಹಾಯಕವಾಗಲಿದೆ ಎಂಬ ನಂಬಿಕೆ ನನಗಿದೆ ಎಂದು ತಿಳಿಸಿದ್ದಾರೆ.
ಉಕ್ರೇನ್ ವಿರುದ್ಧದ ಯುದ್ಧ ಕೊನೆಗೊಂಡ ಬಳಿಕ ಅಮೆರಿಕ-ರಷ್ಯಾ ವ್ಯಾಪಾರ ಒಪ್ಪಂದದ ಸಾಧ್ಯತೆಯ ಬಗ್ಗೆಯೂ ನಾವು ಚರ್ಚಿಸಿದ್ದೇವೆ. ಮುಂದಿನ ವಾರ ಉನ್ನತ ಮಟ್ಟದ ಸಲಹೆಗಾರರ ಸಭೆ ನಡೆಯಲಿದೆ. ಉಕ್ರೇನ್ ಯುದ್ಧ ಕೊನೆಗಾಣಿಸಲು ನಾನು ಹಾಗೂ ಪುಟಿನ್ ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಭೇಟಿಯಾಗಲು ಒಪ್ಪಿಕೊಂಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕೀ ಅವರನ್ನು ನಾನು ನಾಳೆ ಓವಲ್ ಕಚೇರಿಯಲ್ಲಿ ಭೇಟಿಯಾಗಲಿದ್ದೇನೆ. ಅಲ್ಲಿ ಪುಟಿನ್ ಜೊತೆ ಸಂಭಾಷಣೆ ಕುರಿತಾಗಿಯೂ ಚರ್ಚಿಸಲಿದ್ದೇವೆ ಎಂದಿದ್ದಾರೆ.ಇದನ್ನೂ ಓದಿ: ಸರ್ಕಾರದ ಸಭೆ, ಸಮಾರಂಭಗಳಲ್ಲಿ ಜನಪ್ರತಿನಿಧಿಗಳ ಆಹ್ವಾನಕ್ಕೆ ಹೊಸ ಮಾರ್ಗಸೂಚಿ – ಶಿಷ್ಟಾಚಾರ ಪಾಲನೆಗೆ ಸೂಚನೆ