ಕೀವ್: ಉಕ್ರೇನ್‍ನ ಕೀವ್‍ನಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿಗೆ ಗುಂಡು ತಗುಲಿದೆ ಎಂದು ಕೇಂದ್ರ ಸಚಿವ ವಿ.ಕೆ ಸಿಂಗ್ ಮಾಹಿತಿ ನೀಡಿದ್ದಾರೆ.
Advertisement
ಕೀವ್‍ನಲ್ಲಿ ಮತ್ತೊಬ್ಬ ವಿದ್ಯಾರ್ಥಿಗೆ ಗುಂಡು ತಗುಲಿದೆ ಎನ್ನುವ ಮಾಹಿತಿ ಸಿಕ್ಕಿದೆ. ಕೂಡಲೆ ಆತನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡುವ ಕೆಲಸ ನಡೆಯುತ್ತಿದೆ. ಗಾಯಾಗೊಂಡಿರುವ ವಿದ್ಯಾರ್ಥಿ ಯಾರು? ಎನ್ನುವ ಮಾಹಿತಿ ಇಲ್ಲ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ. ಇದನ್ನೂ ಓದಿ: ನಾನೇನು ಕಚ್ಚುವುದಿಲ್ಲ, ಮತ್ತೇಕೆ ನಿಮಗೆ ಭಯ? – ಪುಟೀನ್‍ಗೆ ವ್ಯಂಗ್ಯ ಮಾಡಿದ ಉಕ್ರೇನ್ ಅಧ್ಯಕ್ಷ
Advertisement
Advertisement
ಪ್ರತಿಯೊಬ್ಬರೂ ಕೀವ್ ತೊರೆಯಬೇಕು ಎಂಬ ಆದ್ಯತೆಯ ಮೇಲೆ ಭಾರತೀಯ ರಾಯಭಾರ ಕಚೇರಿ ಈ ಹಿಂದೆಯೇ ತೆರವುಗೊಳಿಸಿತ್ತು. ಕೆಲವು ದಿನಗಳ ಹಿಂದೆ ರಷ್ಯಾ, ಉಕ್ರೇನ್ ಮೇಲೆ ನಡೆಸಿದ ಶೆಲ್ ದಾಳಿಗೆ ಕರ್ನಾಟಕದ ವಿದ್ಯಾರ್ಥಿ ನವೀನ್ ಸದಾವನ್ನಪ್ಪಿದ್ದಾರೆ. ಇದೀಗ ಒಬ್ಬ ವಿದ್ಯಾರ್ಥಿಗೆ ಗುಂಡು ತಗುಲಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ಮಾಹಿತಿ ಸಿಕ್ಕಿದೆ. ಇದನ್ನೂ ಓದಿ: ಗಡಿಗಳಲ್ಲಿ ಹೆಣ್ಮಕ್ಕಳ ಮೇಲೆ ಸೈನಿಕರಿಂದ ಹಲ್ಲೆ – ಕರಾಳತೆ ಬಿಚ್ಚಿಟ್ಟ ವಿದ್ಯಾರ್ಥಿನಿಯರು
Advertisement
Glad I could help.
Credit goes to everyone in the team who are working tirelessly to help out our fellow countrymen. Safety of our compatriots is their reward.
Gratitude also to our foreigner friends on both sides of the border who came good at the right time.#OperationGanga https://t.co/G3FxIXBZps
— General Vijay Kumar Singh (@Gen_VKSingh) March 4, 2022
ನಾಗರಿಕ ವಿಮಾನಯಾನ ಸಚಿವಾಲಯದ (ಮೊಸಿಎ) ರಾಜ್ಯ ಸಚಿವ (ಎಂಒಎಸ್) ಜನರಲ್ ವಿ.ಕೆ ಸಿಂಗ್ ಪೋಲೆಂಡ್‍ನ ರ್ಜೆಸ್ಜೋವ್ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿದರು. ಯುದ್ಧದ ಸಂದರ್ಭದಲ್ಲಿ, ಗನ್‍ನಲ್ಲಿರುವ ಬುಲೆಟ್ ಎದುರಿರುವ ಯಾರು, ಧರ್ಮ, ರಾಷ್ಟ್ರೀಯತೆಯನ್ನು ನೋಡುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿರುವ ಅತೀ ದೊಡ್ಡ ಅಣುಸ್ಥಾವರದ ಮೇಲೆ ರಷ್ಯಾ ದಾಳಿ
I received info today that a student coming from Kyiv got shot and was taken back midway. We’re trying for maximum evacuation in minimum loss: MoS Civil Aviation Gen (Retd) VK Singh, in Poland#RussiaUkraine pic.twitter.com/cggVEsqfEj
— ANI (@ANI) March 4, 2022
ವಿದ್ಯಾರ್ಥಿಗಳು ಪ್ರಸ್ತುತ ಯುದ್ಧ ಪೀಡಿತ ದೇಶ ಉಕ್ರೇನ್‍ನಿಂದ ಪಲಾಯನ ಮಾಡುತ್ತಿದ್ದಾರೆ. ಭಾರತಕ್ಕೆ ಸುರಕ್ಷಿತವಾಗಿ ಮರಳಲು ಪೋಲೆಂಡ್‍ನ ಗಡಿಯನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ. ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಜ್ಯೋತಿರಾದಿತ್ಯ ಎಂ ಸಿಂಧಿಯಾ, ಕಿರಣ್ ರಿಜಿಜು ಮತ್ತು ಜನರಲ್ (ನಿವೃತ್ತ) ವಿಕೆ ಸಿಂಗ್ ಉಕ್ರೇನ್‍ಗೆ ಹೊಂದಿಕೊಂಡಿರುವ ದೇಶಗಳಲ್ಲಿರುವ ಭಾರತೀಯರನ್ನು ಸ್ಥಳಾಂತರಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದನ್ನೂ ಓದಿ: ರಷ್ಯಾ ದಾಳಿಗೆ ಮೃತಪಟ್ಟ ಕನ್ನಡಿಗ ನವೀನ್ ಮೃತದೇಹ ಪತ್ತೆ