ಕೀವ್: ರಷ್ಯಾದ ಶೇಲ್ ದಾಳಿ ವೇಳೆ ಉಕ್ರೇನ್‍ನ ನಟ ಪಾಶಾ ಲೀ ಸಾವನ್ನಪ್ಪಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಅವರ ಕೊನೆಯ ಪೋಸ್ಟ್‍ವೊಂದು ಸದ್ದು ಮಾಡುತ್ತಿದೆ.
ಉಕ್ರೇನ್‍ನ ಮೇಲೆ ರಷ್ಯಾ ತೀವ್ರವಾಗಿ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ತನ್ನ ದೇಶವನ್ನು ರಕ್ಷಿಸಿಕೊಳ್ಳಲು ಉಕ್ರೇನ್‍ನ ನಟ ಪಾಶಾಲೀ ಸೇನೆ ಸೇರಿದ್ದರು. ಆದರೆ ಅವರು ಶೇಲ್ ದಾಳಿ ವೇಳೆ ಇರ್ಪಿನ್‍ನಲ್ಲಿ ಸಾವನ್ನಪ್ಪಿದ್ದರು.
Advertisement
ಸಾಯುವ ಮೊದಲು ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿದ್ದ ಅವರ ಕೊನೆಯ ಪೋಸ್ಟ್ ವೈರಲ್ ಆಗುತ್ತಿದೆ. ಕಳೆದ 48 ಗಂಟೆಗಳ ಕಾಲ ನಾವು ಹೇಗೆ ಬಾಂಬ್ ದಾಳಿ ಮಾಡುತ್ತಿದ್ದೇವೆ ಎಂಬುದರ ಕುರಿತು ಚಿತ್ರ ತೆಗೆಯುವ ಅವಕಾಶವಿದೆ. ನಾವು ನಮ್ಮ ದೇಶಕ್ಕಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ ಜೊತೆಗೆ ಎಲ್ಲವೂ ಉಕ್ರೇನ್ ಆಗಿರುತ್ತದೆ. ಇದರಿಂದಾಗಿ ನಾವು ನಗುತ್ತಿದ್ದೇವೆ ಎಂದು ಪೋಸ್ಟ್ ಮಾಡಿದ್ದಾರೆ.
Advertisement
View this post on Instagram
Advertisement
ಕಳೆದ ತಿಂಗಳು ಉಕ್ರೇನ್‍ನ ಮೇಲೆ ರಷ್ಯಾ ದಾಳಿ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಕ್ರೈಮಿಯಾ ಮೂಲದ ನಟ ರಷ್ಯಾದ ವಿರುದ್ಧ ಹೋರಾಡಲು ಉಕ್ರೇನ್‍ನ ರಕ್ಷಣಾ ಪಡೆಗೆ ಸೇರಿದ್ದರು. ಇದನ್ನೂ ಓದಿ: ಮಾ.11ರ 12:46 ವೇಳೆ ಸೇವ್ ಮಾಡ್ಕೊಳ್ಳಿ: ಕನ್ ಫ್ಯೂಸ್ ಮಾಡಿದ ಉಪೇಂದ್ರ
Advertisement
ಉಕ್ರೇನ್‍ನ ರಾಷ್ಟ್ರೀಯ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಸೆರ್ಗಿ ಟೊಮಿಲೆಂಕೊ ಮತ್ತು ಒಡೆಸ್ಸಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ಪಾಶಾ ಲೀ ಅವರ ಸಾವಿನ ಸುದ್ದಿಯನ್ನು ದೃಢಪಡಿಸಿದೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಇಬ್ಬರು ಮಹಿಳೆಯರಿಗೆ ಮಂಗನಕಾಯಿಲೆ ದೃಢ