ಮಾಸ್ಕೋ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮುಂದುವರಿದಿದೆ. ಈ ಮಧ್ಯೆ ಪಾಶ್ಚಿಮಾತ್ಯ ದೇಶಗಳು ರಷ್ಯಾ ವಿರುದ್ಧ ನಿರಂತರವಾಗಿ ನಿರ್ಬಂಧನೆಗಳನ್ನು ವಿಧಿಸುತ್ತಲೇ ಇವೆ. ಇಂತಹ ಪರಿಸ್ಥಿತಿಯಲ್ಲಿ ಮಿಂಚಿನ ವೇಗದ ಹೈಪರ್ಸಾನಿಕ್ ಪರಮಾಣು ಕ್ಷಿಪಣಿಯನ್ನು ರಷ್ಯಾ ಉಡಾಯಿಸಿದ್ದು, ದೃಶ್ಯಾವಳಿಗಳನ್ನು ರಷ್ಯಾ ಬಿಡುಗಡೆ ಮಾಡಿದೆ. ರಷ್ಯಾ ಹಂಚಿಕೊಂಡಿರುವ ಈ ಫೋಟೋ ಎದುರಾಳಿ ದೇಶಗಳ ಮೇಲೆ ಒಂದೇ ಹೊಡೆತದಲ್ಲಿ ದಾಳಿ ನಡೆಸಬಲ್ಲದು ಎಂಬುದನ್ನು ಪ್ರದರ್ಶಿಸಿದೆ.
Advertisement
ಶ್ವೇತ ಸಮುದ್ರದಿಂದ ಯುದ್ಧನೌಕೆ ಉಡಾವಣೆ: ಮ್ಯಾಕ್ 9 `ಜಿರ್ಕಾನ್’ ಅಥವಾ `ಸಿರ್ಕಾನ್’ ಹೆಸರಿನ ಈ ಕ್ಷಿಪಣಿಯನ್ನು ಬಿಳಿ ಸಮುದ್ರದಲ್ಲಿ ಅಡ್ಮಿರಲ್ ಗೋರ್ಶ್ಕೋವ್ ಯುದ್ಧನೌಕೆಯಿಂದ ಉಡಾವಣೆ ಮಾಡಲಾಗಿದೆ. ಯುದ್ಧದ ನಡುವೆಯೇ ಈ ದೃಶ್ಯಾವಳಿಗಳನ್ನು ಬಿಡುಗಡೆ ಮಾಡುವ ಉದ್ದೇಶವೆಂದರೆ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಒಂದು ವೇಳೆ ಯಾವುದೇ ದೇಶ ಹಸ್ತಕ್ಷೇಪ ಮಾಡಿದರೆ, ನಂತರ ಈ ಪರಮಾಣು ಕ್ಷಿಪಣಿಗಳನ್ನು ಬಳಸಲಾಗುವುದು ಎಂಬುದನ್ನು ರಷ್ಯಾ ತೋರಿಸಿದೆ. ಇದನ್ನೂ ಓದಿ: ಜುಲೈ – ಆಗಸ್ಟ್‌ನಲ್ಲೇ ಭಾರತಕ್ಕೆ ಎದುರಾಗಲಿದೆ ವಿದ್ಯುತ್ ಕೊರತೆ – CREA ವರದಿ ಹೇಳಿದ್ದೇನು?
Advertisement
Advertisement
ಮಿಂಚಿನ ವೇಗ: ಇತ್ತೀಚೆಗಷ್ಟೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಈ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿ ಎಂದು ಘೋಷಿಸಿದ್ದರು. ಇದೇ ವರ್ಷ ಈ ಕ್ಷಿಪಣಿಯನ್ನು ಸೇನೆಗೆ ಸೇರ್ಪಡೆ ಮಾಡಲಾಗಿದೆ. ಪಾಶ್ಚಿಮಾತ್ಯ ದೇಶಗಳ ಬಳಿ ಈ ಕ್ಷಿಪಣಿಗಳಿಗೆ ಯಾವುದೇ ಉತ್ತರವಿಲ್ಲ ಎಂದು ರಷ್ಯಾ ತಜ್ಞರು ಹೇಳುತ್ತಾರೆ. ರಷ್ಯಾದ ಜಿರ್ಕಾನ್ ಹೈಪರ್ಸಾನಿಕ್ ಕ್ಷಿಪಣಿ ಪರೀಕ್ಷೆಯ ನಂತರ ಅದರ ರಹಸ್ಯ ವೈಶಿಷ್ಟ್ಯಗಳು ಬಹಿರಂಗಗೊಂಡಿವೆ ಎಂದು ರಷ್ಯಾ ಮಾಧ್ಯಮಗಳು ಮಾಹಿತಿ ಪ್ರಸಾರ ಮಾಡಿವೆ. ಇದನ್ನೂ ಓದಿ: 4 ಭಾರತೀಯರು ಸೇರಿ 22 ಪ್ರಯಾಣಿಕರಿದ್ದ ವಿಮಾನ ನಾಪತ್ತೆ
Advertisement
ಹೀಗಿದೆ ವೇಗದ ಮಿತಿ: ಸಿರ್ಕಾನ್ ಹೈಪರ್ಸಾನಿಕ್ ಕ್ರೂಸ್ ಕ್ಷಿಪಣಿಯು ಶ್ವೇತ ಸಮುದ್ರದಲ್ಲಿ ಸುಮಾರು 1,000 ಕಿಮೀ ದೂರದಲ್ಲಿರುವ ನೌಕೆಯನ್ನು ಉಡಾಯಿಸುವ ಗುರಿ ಹೊಂದಿದೆ. ಕ್ಷಿಪಣಿಯು ಶಬ್ದದ ವೇಗಕ್ಕಿಂತ 9 ಪಟ್ಟು ವೇಗದಲ್ಲಿ ಹಾರುವ ಸಾಮರ್ಥ್ಯ ಹೊಂದಿದೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.