ಮಾಸ್ಕ್: ಉಕ್ರೇನ್‍ನ ಮೇಲೆ ನಡೆಯುತ್ತಿರುವ ಆಕ್ರಮಣದ ಸಮಯದಲ್ಲಿ ವಶಪಡಿಸಿಕೊಂಡ ಯುಎಸ್ ಶಸ್ತ್ರಾಸ್ತ್ರಗಳು ಮತ್ತು ಯುದ್ಧದ ಇತರ ವಸ್ತುಗಳನ್ನು ಟ್ರೋಫಿಗಳಂತೆ ರಷ್ಯಾ ವೀಡಿಯೋದಲ್ಲಿ ಪ್ರದರ್ಶಿಸುತ್ತಿದೆ.
Advertisement
ಉಕ್ರೇನಿಯನ್ ಪಡೆಗಳಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳ ಫೋಟೋಗಳನ್ನು ರಷ್ಯಾದ ರಕ್ಷಣಾ ಸಚಿವಾಲಯವು ತನ್ನ ಅಧಿಕೃತ ಚಾನೆಲ್‍ವೊಂದರಲ್ಲಿ ಶೇರ್ ಮಾಡಿಕೊಂಡಿದೆ. 2 ನಿಮಿಷ 15 ಸೆಕೆಂಡುಗಳ ಕ್ಲಿಪ್‍ನಲ್ಲಿ, ರಷ್ಯಾದ ಸೈನಿಕನು ಯುಎಸ್, ಯುಕೆ, ಪೋಲೆಂಡ್ ಮತ್ತು ಸ್ವೀಡನ್‍ನಲ್ಲಿ ತಯಾರಿಸಿದ ಟ್ಯಾಂಕ್ ವಿರೋಧಿ ಗ್ರೆನೇಡ್ ಲಾಂಚರ್‌ಗಳು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಮಾತನಾಡುವುದನ್ನು ಕಾಣಬಹುದು. ವೀಡಿಯೋದಲ್ಲಿ, ಆಯುಧಗಳನ್ನು ಸೈನಿಕರು ಟ್ರೋಫಿಗಳ ರೀತಿ ತೋರಿಸುತ್ತಿದ್ದರು. ಇದನ್ನೂ ಓದಿ: 10ರ ಮಗಳು, ತಾಯಿ ಪ್ರತ್ಯೇಕ ಕೋಣೆಯಲ್ಲಿ ನೇಣಿಗೆ ಶರಣು – ಪ್ರೀತಿಸಿ ಮದ್ವೆಯಾಗಿದ್ದ ವೈದ್ಯ ದಂಪತಿ
Advertisement
Advertisement
ವಿಶೇಷ ಮಿಲಿಟರಿ ಕಾರ್ಯಾಚರಣೆಯ ಸಮಯದಲ್ಲಿ ಪಡೆದ ಸಣ್ಣ ಪ್ರಮಾಣದ ಶಸ್ತ್ರಾಸ್ತ್ರಗಳು, ಮಷಿನ್ ಗನ್ ಮತ್ತು ಉಕ್ರೇನಿಯನ್ ಸೈನಿಕರ ಆಯುಧ, ಸೋವಿಯತ್ ಮೂಲದ ಶಸ್ತ್ರಾಸ್ತ್ರಗಳನ್ನು ಸಹ ಒಳಗೊಂಡಿದೆ.
Advertisement
ಶಸ್ತ್ರಾಸ್ತ್ರಗಳು ಮುಖ್ಯವಾಗಿ ವಿದೇಶಿ ಉತ್ಪಾದನೆಗಳಾಗಿವೆ. ಜಾವೆಲಿನ್, ಗ್ರೇಟ್ ಬ್ರಿಟನ್, ಯುಎ, ಪೋಲೆಂಡ್, ಸ್ವೀಡನ್‍ನಲ್ಲಿ ತಯಾರಿಸಿದ ಹ್ಯಾಂಡ್-ಹೆಲ್ಡ್ ಆಂಟಿ-ಟ್ಯಾಂಕ್ ಗ್ರೆನೇಡ್ ಲಾಂಚರ್‌ಗಳು, ಜೊತೆಗೆ ಹೆವಿ ಮೆಷಿನ್ ಗನ್‍ಗಳು ಮತ್ತು ಸೋವಿಯತ್ ನಿರ್ಮಿತ ಸಣ್ಣ ಶಸ್ತ್ರಾಸ್ತ್ರಗಳನ್ನು ಉಕ್ರೇನಿಯನ್ ರಾಷ್ಟ್ರೀಯವಾದಿಗಳು ಬಿಟ್ಟಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯದ ಪೋಸ್ಟ್ ತಿಳಿಸಿದೆ. ಇದನ್ನೂ ಓದಿ: ಗ್ರಾಮಕ್ಕೆ ರಸ್ತೆ, ವಿದ್ಯುತ್ ಸಂಪರ್ಕ ಕಲ್ಪಿಸಿ – ಡಿಸಿಗೆ ಮನವಿ ಮಾಡಿದ ಪುಟ್ಟ ಬಾಲಕಿ