ಮಾಸ್ಕೋ: ಯುರೋಪಿನ ಅತಿದೊಡ್ಡ ಗ್ಯಾಸ್ ಪೈಪ್‍ಲೈನ್ ನಾರ್ಡ್ ಸ್ಟ್ರೀಮ್ 1 ಅನ್ನು ಕಾರ್ಯನಿರ್ವಹಣೆಯ ಕಾರಣ ನೀಡಿ ರಷ್ಯಾ ಸ್ಥಗಿತಗೊಳಿಸಿದೆ.
ಯುರೋಪ್ ರಾಷ್ಟ್ರಗಳಲ್ಲಿ ಸಾಮಾನ್ಯವಾಗಿ ಚಳಿಗಾಲಕ್ಕೆ ಈ ಗ್ಯಾಸ್ ಪೈಪ್‍ಲೈನ್‍ಗಳು ಹೆಚ್ಚು ಅವಶ್ಯಕತೆ ಇರುತ್ತದೆ. ಆದರೆ ಇದೀಗ ರಷ್ಯಾ ಈ ಗ್ಯಾಸ್ ಪೈಪ್‍ಲೈನ್‍ನ್ನು ಸ್ಥಗಿತಗೊಳಿಸುವುದರಿಂದ ರಷ್ಯಾ- ಉಕ್ರೇನ್ ಯುದ್ಧದ ಪರಿಣಾಮಗಳಿಂದ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಯೂರೋಪಿಯನ್ ರಾಷ್ಟ್ರಗಳಿಗೆ ಮತ್ತೊಂದು ಆಘಾತ ನೀಡಿದೆ.
Advertisement
Advertisement
ರಷ್ಯಾದಿಂದ ಜರ್ಮನಿಗೆ ಬಾಲ್ಟಿಕ್ ಸಮುದ್ರದ ಅಡಿಯಲ್ಲಿ ಪ್ರತಿವರ್ಷ ಸುಮಾರು 55 ಶತಕೋಟಿ ಘನ ಮೀ. ಇಂಧನವನ್ನು ಸಾಗಿಸುವ ನಾರ್ಡ್ ಸ್ಟ್ರೀಮ್ ಜುಲೈ 1 ರಿಂದ 21 ರವರೆಗೆ ಯಾಂತ್ರಿಕ ಮತ್ತು ಸ್ವಯಂಚಾಲಿತ ವ್ಯವಸ್ಥೆಗಳನ್ನು ಪರೀಕ್ಷಿಸಲು ಸ್ಥಗಿತಗೊಳ್ಳುತ್ತಿದೆ ಎಂದು ರಷ್ಯಾದ ಗ್ಯಾಸ್ ಕಂಪನಿ ಗಾಜ್‍ಪ್ರೊಮ್ ತಿಳಿಸಿದೆ. ಈ ಮೂಲಕ ಯೂರೋಪ್‍ಗೆ ಸಂಕಷ್ಟ ಎದುರಾದಂತಾಗಿದೆ.
Advertisement
2011ರಿಂದ ಜರ್ಮನಿಗೆ ಈ ಪೈಪ್ ಲೈನ್ ಮೂಲಕ ನೈಸರ್ಗಿಕ ಅನಿಲ ಸರಬರಾಜು ಆಗುತ್ತಿತ್ತು. ಈಗ ಸ್ಥಗಿತಗೊಳಿಸಿದ್ದರಿಂದ ಜರ್ಮನಿ ಕೆನಡಾದ ಮೊರೆ ಹೋಗಿದೆ.
Advertisement
ಇತ್ತೀಚೆಗಷ್ಟೆ ಉಕ್ರೇನ್‍ನ ಮೇಲೆ ರಷ್ಯಾ ಯುದ್ಧ ಮಾಡುತ್ತಿರುವುದನ್ನು ವಿರೋಧಿಸಿ ಅನೇಕ ಯುರೋಪ್ ರಾಷ್ಟ್ರಗಳು ರಷ್ಯಾದ ಮೇಲೆ ಆರ್ಥಿಕ ನಿರ್ಬಂಧವನ್ನು ಹೇರಿತ್ತು. ಅಷ್ಟೇ ಅಲ್ಲದೇ ಪ್ರತಿಷ್ಠಿತ ಕಂಪನಿಗಳು ರಷ್ಯಾದಲ್ಲಿರುವ ವ್ಯವಹಾರಕ್ಕೆ ಕೊನೆಗೊಳಿಸಿದ್ದವು. ಈ ಎಲ್ಲಾ ಕಾರಣದಿಂದಾಗಿ ವ್ಲಾಡಿಮಿರ್ ಪುಟಿನ್ ರಷ್ಯಾ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ಸರಿಪಡಿಸಲು ಹಾಗೂ ರಾಜಕೀಯ ದುರುದ್ದೇಶದಿಂದ ಈ ಗ್ಯಾಸ್ ಪೈಪ್‍ಲೈನ್‍ನ್ನು ಸ್ಥಗಿತಗೊಳಿಸಿದೆ ಎಂದು ಜರ್ಮನ್ ಸೇರಿದಂತೆ ಅನೇಕ ಯುರೋಪ್‍ನ ರಾಷ್ಟ್ರಗಳು ಆರೋಪಿಸಿವೆ.
ಯುರೋಪ್‍ನಲ್ಲಿ ಇದೀಗ ಚಳಿಗಾಲ ಸಮೀಪಿಸುತ್ತಿದೆ. ಈ ಪರಿಸ್ಥಿತಿಯನ್ನೆದುರಿಸಲು ಅಲ್ಲಿನ ರಾಷ್ಟ್ರಗಳು ನವೆಂಬರ್ ವೇಳೆಗೆ ಕನಿಷ್ಠ 80% ಸಾಮರ್ಥ್ಯದಷ್ಟು ನೈಸರ್ಗಿಕ ಅನಿಲ ಸಂಗ್ರಹಿಸಿಟ್ಟಿರುತ್ತವೆ. ಆದರೂ ಈ ಬಾರಿ ಅನಿಲ ಸಂಗ್ರಹಾಗಾರದಲ್ಲಿ ಅತ್ಯಂತ ಕಡಿಮೆ ಅನಿಲವಿದೆ. ಈ ಸಂದರ್ಭದಲ್ಲಿ ಗ್ಯಾಸ್ ಪೈಪ್‍ಲೈನ್‍ನ್ನು ಬಂದ್ ಮಾಡಿರುವುದರಿಂದ ಭಾರೀ ಬೆಲೆ ಏರಿಕೆ ಸಂಭವಿಸುವ ಭೀತಿಯನ್ನು ಯುರೋಪ್ ರಾಷ್ಟ್ರಗಳು ಎದುರಿಸುತ್ತವೆ.
ಜರ್ಮನಿ, ಇಟಲಿ, ಆಸ್ಟ್ರಿಯಾ ಮತ್ತು ನೆದರ್‌ಲ್ಯಾಂಡ್‍ಗಳು ಯಾವುದೇ ಹೊಸ ಅನಿಲ ಕೊರತೆಯನ್ನು ಸರಿದೂಗಿಸಲು ಕಲ್ಲಿದ್ದಲು ಸ್ಥಾವರಗಳನ್ನು ಬಳಸಲು ಸಿದ್ಧವಾಗಿವೆ ಎಂದು ಅಲ್ಲಿನ ನಾಯಕರು ಈಗಾಗಲೇ ತಿಳಿಸಿದ್ದಾರೆ. ಇದನ್ನೂ ಓದಿ: ನಟ ದಿ. ಪುನೀತ್ ಹೆಸರಲ್ಲಿ ಆಗಸ್ಟ್ 5ರಿಂದ ಲಾಲ್‍ಬಾಗ್‍ನಲ್ಲಿ ಫ್ಲವರ್ ಶೋ: ಮುನಿರತ್ನ
ಇದೀಗ ರಷ್ಯಾ ತಾನು ಭರವಸೆ ನೀಡಿದಂತೆ, ಮುಂದಿನ 10 ದಿನಗಳಲ್ಲಿ ಪೈಪ್‍ಲೈನ್ ಮತ್ತೆ ತೆರೆಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ವಾರದ ನಂತರ ಉಡುಪಿಯಲ್ಲಿ ಶಾಲೆ ಶುರು- ನೆರೆ ಲೆಕ್ಕಿಸದೇ ದೋಣಿ ಹತ್ತಿದ ವಿದ್ಯಾರ್ಥಿಗಳು