ಕೈವ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಕನಸಿನ ಕ್ರಿಮಿಯಾ ಸಂಪರ್ಕಿಸುವ ಕ್ರಚ್ ಸೇತುವೆಯನ್ನು ಉಕ್ರೇನ್ (Ukraine) ಧ್ವಂಸಗೊಳಿಸಿದ ಬಳಿಕ ಆಕ್ರೋಶಗೊಂಡ ರಷ್ಯಾ (Russia), ಉಕ್ರೇನ್ ವಿರುದ್ಧ ಸಮರ ಸಾರಿದೆ.
ಸೋಮವಾರದಿಂದ ಸತತವಾಗಿ ಉಕ್ರೇನ್ ಮೇಲೆ ಭೀಕರ ದಾಳಿ ನಡೆಸಿದೆ. ಸೋಮವಾರ 75 ಮಿಸೆಲ್ (Cruise Missiles) ಹಾಗೂ 5 ಡೆಡ್ಲಿ ರಾಕೆಟ್‌ಗಳಿಂದ ಅಗ್ನಿಮಳೆಗರೆದಿದ್ದ ರಷ್ಯಾ ಇಂದೂ ತನ್ನ ದಾಳಿಯನ್ನೂ ಮುಂದುವರಿಸಿದೆ. ಇದನ್ನೂ ಓದಿ: ಸೇಡಿಗೆ ಸೇಡು – ಇರಾನ್ ಡ್ರೋನ್ ಬಳಸಿ ರಷ್ಯಾ, ಉಕ್ರೇನ್ ಮೇಲೆ ದಾಳಿ
Advertisement
Advertisement
ಬೆಳ್ಳಂಬೆಳಗ್ಗೆ ಉಕ್ರೇನ್ ರಾಜಧಾನಿ ಕೀವ್ (Kyiv) ಮೇಲೆ ನಡೆಸಿದ ದಾಳಿಯಲ್ಲಿ 14 ಮಂದಿ ದುರ್ಮರಣಕ್ಕೀಡಾಗಿದ್ದು, ಹತ್ತಾರು ಮಂದಿ ಗಾಯಗೊಂಡಿದ್ದಾರೆ. ಆದರೆ ಉಕ್ರೇನ್ ತನ್ನ ಮೇಲೆ ರಷ್ಯಾ 84 ಕ್ರೂಸ್ ಮಿಸೆಲ್‌ಗಳಿಂದ (Cruise Missiles) ದಾಳಿ ನಡೆಸಿದೆ ಎಂದು ಹೇಳಿದೆ. ಜೂನ್ ತಿಂಗಳ ಅಂತ್ಯದ ಬಳಿಕ ನಡೆದ ಮೊದಲ ಭೀಕರ ದಾಳಿ ಇದಾಗಿದೆ ಎಂಬುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಉಕ್ರೇನ್ ವಿರುದ್ಧ ಡೆಡ್ಲಿ ರಾಕೆಟ್ ದಾಳಿ- ಸೇತುವೆ ಉಡೀಸ್ ಮಾಡಿದ್ದಕ್ಕೆ ಸೇಡು ತೀರಿಸಿಕೊಂಡ ರಷ್ಯಾ
Advertisement
Advertisement
ಉಕ್ರೇನ್ ಪ್ರಧಾನಿ ಡೆನಿಸ್ ಶ್ಮಿಗಲ್ ಪ್ರಕಾರ, ಕೀವ್ ಮತ್ತು ಇತರ 8 ಪ್ರದೇಶಗಳಲ್ಲಿ 11 ಪ್ರಮುಖ ಮೂಲಸೌಕರ್ಯಗಳು ಹಾನಿಗೊಳಗಾಗಿವೆ. ಇದರಿಂದ ವಿದ್ಯುತ್, ನೀರು ಸಂಪರ್ಕ ತಾತ್ಕಾಲಿಕವಾಗಿ ಕಡಿತಗೊಳ್ಳಲಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪುಟಿನ್, ಮಿಸೆಲ್ ದಾಳಿಗಳು, ಉಕ್ರೇನ್‌ನ ಇಂಧನ ಮೂಲಸೌಕರ್ಯಗಳನ್ನು ಹೊಡೆದುರುಳಿಸಿವೆ. ಉಕ್ರೇನ್‌ನ ಮಿಲಿಟರಿ ಶಕ್ತಿ ಹಾಗೂ ವಾಹನ ಸೌಲಭ್ಯಗಳ ಮೇಲೆ ಹೆಚ್ಚಿನ ದಾಳಿ ನಡೆದಿದೆ ಎಂದಿದ್ದಾರೆ.
ಸೇತುವೆ ಉಡೀಸ್ ಮಾಡಿದ್ದ ಉಕ್ರೇನ್:
ಕಳೆದ ಮೂರು ದಿನಗಳ ಹಿಂದೆಯಷ್ಟೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕನಸಿನ ಕ್ರಿಮಿಯಾ – ರಷ್ಯಾ ಸಂಪರ್ಕಿಸುವ ಕ್ರಚ್ ಸೇತುವೆಯನ್ನು (Crimean Bridge) ಉಕ್ರೇನ್ ಉಡೀಸ್ ಮಾಡಿತ್ತು. ರಷ್ಯಾ ಆಕ್ರಮಿತ ಕ್ರಿಮಿಯಾ ಭಾಗದ ಮೂಲಕ ಉಕ್ರೇನ್‌ನ ಖೇರ್ಸನ್, ರ‍್ಝಿಯಾದಲ್ಲಿರುವ ಸೇನೆಗೆ ಇಂಧನ ಸರಬರಾಜು ಮಾಡುವ ರಷ್ಯಾದ ರೈಲನ್ನು (Railway) ಉಕ್ರೇನ್ ಉಡಾಯಿಸಿತ್ತು. ಸ್ಫೋಟದಲ್ಲಿ ಮೂವರು ಸಾವನ್ನಪ್ಪಿದ್ದರು.
ಇದಕ್ಕೆ ಪ್ರತಿಕಾರವಾಗಿ ರಷ್ಯಾ ಭೀಕರ ದಾಳಿ ನಡೆಸುತ್ತಿದೆ. ನಿನ್ನೆ ಇರಾನಿನ `ಶಾಹೆಡ್-136 VAV ಡ್ರೋನ್‌ಗಳನ್ನು (ಮಾನವರಹಿತ ವೈಮಾನಿಕ ವಾಹನಗಳು) (Iranian Drones) ಬಳಸಿ ದಾಳಿ ನಡೆಸಿತ್ತು. 75 ಮಿಸೆಲ್‌ಗಳಿಂದ ದಾಳಿ ನಡೆಸಿ ಹಲವು ಕಟ್ಟಡಗಳನ್ನು ಧ್ವಂಸಗೊಳಿಸಿತ್ತು.