ಮಾಸ್ಕೋ: ಜೈಲಿನಲ್ಲಿ ಉಕ್ರೇನ್ ಖೈದಿಗಳ ಸಾವಿನ ಬಗ್ಗೆ ತನಿಖೆ ನಡೆಸಲು ವಿಶ್ವಸಂಸ್ಥೆ ಮತ್ತು ರೆಡ್‍ಕ್ರಾಸ್‍ನ ತಜ್ಞರನ್ನು ರಷ್ಯಾ ಆಹ್ವಾನಿಸಿದೆ ಎಂದು ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ.
Advertisement
ಮಾಸ್ಕೋ ಬೆಂಬಲಿತ ಪ್ರತ್ಯೇಕತಾವಾದಿಗಳ ಜೈಲಿನ ಮೇಲೆ ದಾಳಿಯಾಗಿರುವ ಕುರಿತು ವಸ್ತುನಿಷ್ಠ ತನಿಖೆ ನಡೆಸುವ ಹಿತಾಸಕ್ತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ನಾವು ಕೇಳಿಕೊಂಡಿದ್ದೇವೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪಾಕ್ ಪ್ರಧಾನಿಗೆ ಸಮನ್ಸ್ ಜಾರಿ
Advertisement
Advertisement
ಜೈಲಿನಲ್ಲಿ ನಡೆದ ದಾಳಿಯಿಂದ ಮೃತರ ಸಂಖ್ಯೆ 53ಕ್ಕೆ ಏರಿದೆ. ಕೀವ್ ಜೈಲಿಗೆ ರಾಕೆಟ್‍ಗಳಿಂದ ಹೊಡೆಯಲಾಗಿದೆ. ಈ ವೇಳೆ ಉಕ್ರೇನ್‍ನ ಸಶಸ್ತ್ರ ಪಡೆ ಕಾರ್ಯ ನಿರ್ವಹಿಸಲು ವಿಫಲವಾಗಿದೆ. ರಷ್ಯಾದ ಫಿರಂಗಿದಳವು ಜೈಲನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡಿದೆ ಎಂದು ಉಕ್ರೇನ್ ಆರೋಪಿಸಿದೆ.