– ವೈದ್ಯಕೀಯ ವಿಜ್ಞಾನದಲ್ಲಿ ರಷ್ಯಾ ಸಾಧನೆ
ಮಾಸ್ಕೋ: ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ರಷ್ಯಾ ಮಹತ್ತರ ಸಾಧನೆ ಮಾಡಿದೆ. ರಷ್ಯಾದ ಆರೋಗ್ಯ ಸಚಿವಾಲಯವು (Russian Ministry of Health) ಕ್ಯಾನ್ಸರ್ ಲಸಿಕೆ ಅಭಿವೃದ್ಧಿಪಡಿಸಿರುವುದಾಗಿ ಘೋಷಿಸಿದ್ದು, ತನ್ನ ದೇಶದ ನಾಗರಿಕರಿಗೆ ಉಚಿತವಾಗಿ ಸಿಗಲಿದೆ ಎಂಬುದಾಗಿ ಹೇಳಿಕೊಂಡಿದೆ.
ಹೌದು. ಕ್ಯಾನ್ಸರ್ ಲಸಿಕೆ (mRNA ಲಸಿಕೆ) ತಯಾರಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ರಷ್ಯಾದ ಆರೋಗ್ಯ ಸಚಿವಾಲಯದ ವಿಕಿರಣಶಾಸ್ತ್ರ ವೈದ್ಯಕೀಯ ಸಂಶೋಧನಾ ಕೇಂದ್ರದ ನಿರ್ದೇಶಕ ಆಂಡ್ರೇ ಕಪ್ರಿನ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅವರು ತೆರಿಗೆ ವಿಧಿಸಿದ್ರೆ ನಾವು ಅವರ ಮೇಲೆ ಅಷ್ಟೇ ತೆರಿಗೆ ಹಾಕ್ತೀವಿ: ಭಾರತಕ್ಕೆ ಟ್ರಂಪ್ ಸಂದೇಶ
Advertisement
Advertisement
ಮುಂದಿನ ವರ್ಷದಿಂದಲೇ ರಷ್ಯಾದ ನಾಗರಿಕರಿಗೆ ಈ ಕ್ಯಾನ್ಸರ್ ಲಸಿಕೆಯನ್ನು (Cancer Vaccine) ಉಚಿತವಾಗಿ ನೀಡಲಾಗುವುದು ಎಂದಿರುವ ಆಂಡ್ರೇ, ರಷ್ಯಾದ ಈ ಆವಿಷ್ಕಾರ ಶತಮಾನದ ಅತಿದೊಡ್ಡ ಆವಿಷ್ಕಾರವೆಂದು ಬಣ್ಣಿಸಿದ್ದಾರೆ. ಅಲ್ಲದೇ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ಇದು ಗೆಡ್ಡೆಯ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ತೋರಿಸಿದೆ ಎಂದು ವಿವರಿಸಿದ್ದಾರೆ.
Advertisement
ಈ ವರ್ಷಾರಂಭದಲ್ಲೇ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ಕ್ಯಾನ್ಸರ್ ಲಸಿಕೆ ತಯಾರಿಸಲು ರಷ್ಯಾ ಬಹಳ ಸಮೀಪದಲ್ಲಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಎರಡೇ ವರ್ಷದಲ್ಲಿ ವಿಶ್ವದ ಅತಿದೊಡ್ಡ ಕಾರು ರಫ್ತುದಾರನಾಗಿ ಹೊರಹೊಮ್ಮಿದ ಚೀನಾ!
Advertisement
mRNA ಲಸಿಕೆ ಅಂದ್ರೆ ಏನು?
mRNA ಅಥವಾ ಮೆಸೆಂಜರ್ ಆರ್‌ಎನ್‌ಎ ಎಂಬುದು ಮಾನವನ ಆನುವಂಶಿಕ ಸಂಕೇತದ ಒಂದು ಸಣ್ಣ ಭಾಗವಾಗಿದೆ. ಇದು ನಮ್ಮ ಜೀವಕೋಶಗಳಲ್ಲಿ ಪ್ರೋಟೀನ್‌ಗಳನ್ನು ಉತ್ಪಾದಿಸುತ್ತದೆ. ವೈರಸ್ ಅಥವಾ ಬ್ಯಾಕ್ಟೀರಿಯಾವು ನಮ್ಮ ದೇಹವನ್ನು ಆಕ್ರಮಿಸಿದಾಗ, ಅದರ ವಿರುದ್ಧ ಹೋರಾಡಲು ಸಹಾಯಕವಾಗುವ ಪ್ರೋಟೀನ್‌ಗಳನ್ನು ಉತ್ಪಾದಿಸಲು mRNA ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಈ ಲಸಿಕೆಯಿಂದ ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಅಗತ್ಯವಾದ ಪ್ರೋಟೀನ್‌ಗಳನ್ನು ಪಡೆಯುತ್ತವೆ, ಪ್ರತಿಕಾಯ (ಆಂಟಿಬಾಡಿ) ರೂಪುಗೊಳ್ಳುತ್ತವೆ. ಇದರೊಂದಿಗೆ ರೋಗನಿರೋಧಕ ಶಕ್ತಿತಯೂ ಬಲಗೊಳ್ಳುತ್ತದೆ. ಕ್ಯಾನ್ಸರ್ ಲಸಿಕೆಯು mRNA ತಂತ್ರಜ್ಞಾನ ಆಧರಿಸಿದ ಮೊದಲ ಲಸಿಕೆಯಾಗಿದೆ. ಇದನ್ನೂ ಓದಿ: ಸ್ಪೇಸ್‌ನಲ್ಲೇ ಕ್ರಿಸ್ಮಸ್ ಸಂಭ್ರಮ – ಸಾಂತಾಕ್ಲಾಸ್ ಆದ ಸುನಿತಾ ವಿಲಿಯಮ್ಸ್!
ಭಾರತದಲ್ಲಿ ಕ್ಯಾನ್ಸರ್ ಸ್ಥಿತಿ ಹೇಗಿದೆ?
2022ರಲ್ಲಿ ಭಾರತದಲ್ಲಿ 14.13 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿತ್ತು. ಈ ಪೈಕಿ 7.22 ಲಕ್ಷ ಮಹಿಳೆಯರು, 6.91 ಲಕ್ಷ ಪುರುಷರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರು. 2022ರಲ್ಲಿ 9.16 ಲಕ್ಷ ರೋಗಿಗಳು ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದರು. ಬಳಿಕ ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಶೇ.12 ರಷ್ಟು ಹೆಚ್ಚಾಗಲಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅಂದಾಜಿಸಿರುವುದಾಗಿ ವರದಿಯಾಗಿತ್ತು.
ಗ್ಲೋಬಲ್ ಕ್ಯಾನ್ಸರ್ ಅಬ್ಸರ್ವೇಟರಿಯ ಮಾಹಿತಿ ಪ್ರಕಾರ, ಸ್ತನ, ಪ್ರಾಸ್ಟೇಟ್ ಮತ್ತು ಥೈರಾಯ್ಡ್ ಕ್ಯಾನ್ಸರ್ ಕಾಯಿಲೆಯು 50ಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಭಾರತದಲ್ಲಿ ಅತಿ ಹೆಚ್ಚು ಸ್ತನ, ಬಾಯಿ, ಗರ್ಭಕೋಶ ಮತ್ತು ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ ಎಂದು ವರದಿ ಹೇಳಿದೆ.