ವಾಷಿಂಗ್ಟನ್: ಇರಾನ್ (Iran) ವಿರುದ್ಧ ಅಮೆರಿಕ ನಡೆಸುತ್ತಿರುವ ಯುದ್ಧದಲ್ಲಿ ಈಗ ರಷ್ಯಾ (Russia) ಪರೋಕ್ಷವಾಗಿ ಪ್ರವೇಶಿಸಿದ್ಯಾ ಎಂಬ ಪ್ರಶ್ನೆ ಎದ್ದಿದೆ.
ಅಮೆರಿಕದ ಯುದ್ಧ ನೌಕೆಗಳು, ವಿಮಾನ ಮತ್ತು ಅಮೆರಿಕದ ನೆಲೆಗಳ ಮೇಲೆ ನಿಖರ ದಾಳಿ ನಡೆಸಲು ರಷ್ಯಾ ತನ್ನ ಮಿತ್ರ ಇರಾನ್‌ಗೆ ಗುಪ್ತಚರ ಮಾಹಿತಿಯನ್ನು ಒದಗಿಸಿದೆ ಅಮೆರಿಕದ ಗುಪ್ತಚರ ಇಲಾಖೆಯೊಂದಿಗೆ ಸಂಪರ್ಕ ಹೊಂದಿರುವ ಇಬ್ಬರು ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇರಾನ್ ಕೆಲವೇ ಮಿಲಿಟರಿ ದರ್ಜೆಯ ಉಪಗ್ರಹಗಳನ್ನು (Military Satellite) ಹೊಂದಿದೆ ಮತ್ತು ತನ್ನದೇ ಆದ ಉಪಗ್ರಹ ಸಮೂಹವನ್ನು ಹೊಂದಿಲ್ಲ. ಹೀಗಿದ್ದರೂ ಅಮೆರಿಕ ಗುರಿಗಳ ಮೇಲೆ ನಿಖರವಾಗಿ ದಾಳಿ ನಡೆಸಲು ರಷ್ಯಾದ ಉಪಗ್ರಹಗಳ ಸಹಾಯ ಪಡೆಯುತ್ತಿದೆ ಎಂಬ ಚರ್ಚೆ ಬೆನ್ನಲ್ಲೇ ರಷ್ಯಾದ ಪಾತ್ರ ಈಗ ಮುನ್ನೆಲೆಗೆ ಬಂದಿದೆ. ಇದನ್ನೂ ಓದಿ: ದೇನಾ ಮುಳುಗುವ ಮೊದಲೇ ಇರಾನಿನ ಮತ್ತೊಂದು ನೌಕಾ ಹಡಗಿಗೆ ಆಶ್ರಯ ನೀಡಿತ್ತು ಭಾರತ
ಇನ್ನೊಂದು ಕಡೆ ಇರಾನ್ ಯುದ್ಧಕ್ಕೆ ನಾವು ಯಾವುದೇ ಸಹಾಯ ಮಾಡುತ್ತಿಲ್ಲ ಎಂದು ರಷ್ಯಾ ಹೇಳಿದೆ. ಇರಾನ್‌ಗೆ ಶಸ್ತ್ರಾಸ್ತ್ರ ವಿತರಣೆ ಸೇರಿದಂತೆ ಇತರೇ ಸಹಾಯವನ್ನು ನೀಡಲು ಉದ್ದೇಶಿಸಿದೆಯೇ ಎಂಬ ಪ್ರಶ್ನೆಗೆ ರಷ್ಯಾದ ವಕ್ತಾರ ಡಿಮಿಟ್ರಿ ಪೆಸ್ಕೋವ್ ಪ್ರತಿಕ್ರಿಯಿಸಿ, ಈ ಸಂದರ್ಭದಲ್ಲಿ ಇರಾನ್ ಕಡೆಯಿಂದ ಯಾವುದೇ ವಿನಂತಿ ಬಂದಿಲ್ಲ. ನಮ್ಮ ಸ್ಥಿರ ನಿಲುವು ಎಲ್ಲರಿಗೂ ತಿಳಿದಿದೆ ಮತ್ತು ಈ ವಿಷಯದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಗುರುವಾರ ಹೇಳಿದ್ದರು. ಇದನ್ನೂ ಓದಿ: Iran Israel War | ಯುದ್ಧದಿಂದ ಬಂದರುಗಳಲ್ಲೇ ಉಳಿದ ಭಾರತದ 4 ಲಕ್ಷ ಟನ್ ಬಾಸ್ಮತಿ ಅಕ್ಕಿ
ಇರಾನ್ ಜೊತೆ ಮಿತ್ರತ್ವ ಹೊಂದಿರುವ ಕೆಲವೇ ದೇಶಗಳಲ್ಲಿ ರಷ್ಯಾವೂ ಒಂದು. ಕಳೆದ ವರ್ಷ ಇರಾನ್ ಮಾಸ್ಕೋ ಜೊತೆ 20 ವರ್ಷಗಳ ಕಾರ್ಯತಂತ್ರದ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿದೆ. ರಷ್ಯಾ ಇರಾನ್‌ನ ಏಕೈಕ ಪರಮಾಣು ವಿದ್ಯುತ್ ಸ್ಥಾವರವಿರುವ ಬುಶೆಹರ್‌ನಲ್ಲಿ ಎರಡು ಹೊಸ ಪರಮಾಣು ಘಟಕಗಳನ್ನು ನಿರ್ಮಿಸುತ್ತಿದೆ ಮತ್ತು ಉಕ್ರೇನ್ ವಿರುದ್ಧ ಬಳಸಲು ಇರಾನ್ ರಷ್ಯಾಕ್ಕೆ ಶಹೀದ್ ಡ್ರೋನ್‌ಗಳನ್ನು ಮತ್ತು ಕ್ಷಿಪಣಿಗಳನ್ನು ನೀಡಿತ್ತು.

