ಜಾಗತಿಕ ರಾಷ್ಟ್ರಗಳ ನಿರ್ಬಂಧಕ್ಕೆ ರಷ್ಯಾ ಸೆಡ್ಡು- ಇಂಟರ್‌ನೆಟ್‌ ಸ್ವಾವಲಂಬನೆಯತ್ತ ಹೆಜ್ಜೆ

Public TV
1 Min Read
Malaysia Internet

ಮಾಸ್ಕೋ: ಉಕ್ರೇನ್‌ ವಿರುದ್ಧ ಯುದ್ಧ ನಡೆಸುತ್ತಿರುವ ಕಾರಣ ಅಮೆರಿಕ ಸೇರಿದಂತೆ ಐರೋಪ್ಯ ರಾಷ್ಟ್ರಗಳ ಒಕ್ಕೂಟದಿಂದ ಹಲವು ನಿರ್ಬಂಧಗಳ ಪರಿಣಾಮವನ್ನು ಎದುರಿಸುತ್ತಿರುವ ರಷ್ಯಾ ಈಗ ಇಂಟರ್‌ನೆಟ್‌ ವಲಯದಲ್ಲಿ ಸ್ವಾವಲಂಬಿಯಾಗುವತ್ತ ಹೆಜ್ಜೆ ಇಟ್ಟಿದೆ.

ಯೂರೋಪ್‌ ರಾಷ್ಟ್ರಗಳ ವಿವಿಧ ಕಂಪನಿಗಳು ರಷ್ಯಾ ವಿರುದ್ಧ ಇಂಟರ್‌ನೆಟ್‌ ನಿರ್ಬಂಧ ಹೇರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಮಾ.11ರ ಹೊತ್ತಿಗೆ ಜಾಗತಿಕ ಇಂಟರ್‌ನೆಟ್‌ ಸಂಪರ್ಕದಿಂದ ದೂರ ಉಳಿಯಲು ರಷ್ಯಾ ಮುಂದಾಗಿದೆ. ಇದನ್ನೂ ಓದಿ: ರಷ್ಯಾ, ಉಕ್ರೇನ್ ಯುದ್ಧ – 14 ವರ್ಷದ ಬಳಿಕ ಕಚ್ಚಾತೈಲ ಬೆಲೆ ಭಾರೀ ಏರಿಕೆ

internet main

ಮಾ.11ರ ನಂತರ ಎಲ್ಲಾ ಸರ್ವರ್‌ ಮತ್ತು ಡೊಮೈನ್‌ಗಳನ್ನು ರಷ್ಯಾ ವಲಯಕ್ಕೆ ವರ್ಗಾಯಿಸಿಕೊಳ್ಳಲು ಕ್ರಮವಹಿಸಲಾಗಿದೆ. ಸೈಟ್‌ಗಳ ನೆಟ್‌ವರ್ಕ್‌ ಮೂಲಸೌಕರ್ಯದ ವಿವರವಾದ ಡೇಟಾವನ್ನು ಸಂಗ್ರಹಿಸಲಾಗುತ್ತಿದೆ. ಅಗತ್ಯ ದತ್ತಾಂಶಗಳ ಸುರಕ್ಷತೆ ಹಾಗೂ ನಿರ್ವಹಣೆಗಾಗಿ ರಷ್ಯಾ ಕ್ರಮಕೈಗೊಂಡಿದೆ.

ರಷ್ಯಾದ ಈ ಕ್ರಮದಿಂದ ಯೂರೋಪ್‌ ರಾಷ್ಟ್ರಗಳು ವಿಧಿಸಿರುವ ನಿರ್ಬಂಧದಿಂದ ಯಾವುದೇ ಗಂಭೀರ ಸಮಸ್ಯೆಯಾಗುವುದಿಲ್ಲ. ಸ್ವತಃ ರಷ್ಯಾ, ಸರ್ವರ್‌ ಮತ್ತು ಡೊಮೈನ್‌ಗಳನ್ನು ವರ್ಗಾಯಿಸಿಕೊಳ್ಳುತ್ತಿರುವುದು ಮುಂದೆ ಎದುರಾಗಬಹುದಾದ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರವಾಗಲಿದೆ. ಇದನ್ನೂ ಓದಿ: ರಷ್ಯಾ- ಉಕ್ರೇನ್‌ ಯುದ್ಧ: ಕಚ್ಚಾ ತೈಲ ಬೆಲೆ ಭಾರೀ ಏರಿಕೆ

russia putin

ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧ ವಿರೋಧಿಸಿ ಅಮೆರಿಕ ಅನೇಕ ನಿರ್ಬಂಧಗಳನ್ನು ವಿಧಿಸಿದೆ. ಆರ್ಥಿಕ ನಿರ್ಬಂಧವನ್ನೂ ಹೇರಲಾಗಿದೆ. ಇದಕ್ಕೆ ಅನೇಕ ರಾಷ್ಟ್ರಗಳು ಬೆಂಬಲ ಸೂಚಿಸಿವೆ. ಇದರಿಂದ ರಷ್ಯಾ ಸೇರಿದಂತೆ ಆ ದೇಶವನ್ನು ಅವಲಂಬಿಸಿರುವ ಅನೇಕ ರಾಷ್ಟ್ರಗಳು ತೊಂದರೆ ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ರಷ್ಯಾ ಸ್ವಾವಲಂಬನೆಯತ್ತ ಹೆಜ್ಜೆ ಇರಿಸಿದೆ.

Share This Article
Leave a Comment

Leave a Reply

Your email address will not be published. Required fields are marked *