ನವದೆಹಲಿ: ರಷ್ಯಾ(Russia) ಈಗ ಭಾರತದ(India) ಅತಿ ದೊಡ್ಡ ಕಚ್ಚಾ ತೈಲ(Crude Oil) ಪೂರೈಕೆದಾರ ದೇಶವಾಗಿ ಹೊರಹೊಮ್ಮಿದೆ.
ಅಕ್ಟೋಬರ್‌ನಲ್ಲಿ ಭಾರತಕ್ಕೆ ಪ್ರತಿದಿನ 9,46,000 ಬ್ಯಾರೆಲ್ ತೈಲವನ್ನು ರಷ್ಯಾ ರಫ್ತು ಮಾಡಿದೆ. ಸೆಪ್ಟೆಂಬರ್‌ನಲ್ಲಿ ಪ್ರತಿ ದಿನ ರಷ್ಯಾ 8,76,000 ಬ್ಯಾರೆಲ್ ತೈಲವನ್ನು ರಫ್ತು ಮಾಡಿತ್ತು
Advertisement
ಭಾರತದ ಒಟ್ಟು ಕಚ್ಚಾ ತೈಲ ಆಮದು ಪ್ರಮಾಣದಲ್ಲಿ ರಷ್ಯಾ ಶೇ.22, ಇರಾಕ್ ಶೇ.20.5, ಸೌದಿ ಅರೇಬಿಯಾ ಶೇ.16 ರಷ್ಟು ಪಾಲನ್ನು ಹೊಂದಿದೆ. ಈ ಮೂಲಕ ಮೊದಲ ಬಾರಿಗೆ ರಷ್ಯಾ ಪ್ರಥಮ ಸ್ಥಾನವನ್ನು ಪಡೆದಿದೆ. ಸೆಪ್ಟೆಂಬರ್‌ಗೆ ಹೋಲಿಸಿದರೆ ರಷ್ಯಾದಿಂದ ಆಮದಾಗುವ ರಫ್ತು ಪ್ರಮಾಣ ಶೇ.5 ರಷ್ಟು ಹೆಚ್ಚಳವಾಗಿದೆ. ಇದನ್ನೂ ಓದಿ: ರಷ್ಯಾದಿಂದ ಡಿಸ್ಕೌಂಟ್ ಬೆಲೆಯಲ್ಲಿ ತೈಲ – 35 ಸಾವಿರ ಕೋಟಿ ಗಳಿಸಿದ ಭಾರತ
Advertisement
Advertisement
ಅಕ್ಟೋಬರ್‌ನಲ್ಲಿ ಸೌದಿ ಅರೇಬಿಯಾದಿಂದ ಭಾರತಕ್ಕೆ 7,06,000 ಬಿಪಿಡಿ(ಬ್ಯಾರೆಲ್ ಪರ್ ಡೇ) ಕಚ್ಚಾ ತೈಲ ರಫ್ತು ಆಗಿದ್ದರೆ ಸೆಪ್ಟೆಂಬರ್‌ನಲ್ಲಿ 8,07,000 ಬಿಪಿಡಿ ರಫ್ತು ಆಗಿತ್ತು. ಉಕ್ರೇನ್ ಯುದ್ಧದ ಬಳಿಕ ಭಾರತ ಅಲ್ಲದೇ ಚೀನಾ, ಟರ್ಕಿ ಹೆಚ್ಚಿನ ಪ್ರಮಾಣದಲ್ಲಿ ರಷ್ಯಾದಿಂದ ತೈಲವನ್ನು ಆಮದು ಮಾಡುತ್ತಿವೆ.
Advertisement
ಈ ಹಿಂದೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್(Jaishankar) ಅವರು, ರಷ್ಯಾದಿಂದ ಭಾರತ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ಸಮರ್ಥಿಸಿಕೊಂಡು ಇದೊಂದು ʼಬೆಸ್ಟ್ ಡೀಲ್ʼ ಎಂದು ಬಣ್ಣಿಸಿದ್ದರು. ಬೆಲೆಗಳು ದುಬಾರಿಯಾಗಿರುವ ಸಮಯದಲ್ಲಿ ಪ್ರತಿಯೊಂದು ದೇಶವೂ ತನ್ನ ಪ್ರಜೆಗಳಿಗೆ ಸಾಧ್ಯವಾದಷ್ಟು ಕಡಿಮೆ ಬೆಲೆಯಲ್ಲಿ ತೈಲ ನೀಡಲು ಪ್ರಯತ್ನ ಮಾಡುತ್ತದೆ. ಈಗ ಅದನ್ನೇ ನಾವು ಮಾಡುತ್ತಿದ್ದೇವೆ ಎಂದು ಜೈಶಂಕರ್ ಸಮರ್ಥಿಸಿಕೊಂಡರು.