ಕೀವ್: ಉಕ್ರೇನ್‍ನ 2 ನಗರಗಳಲ್ಲಿ ರಷ್ಯಾ ಕದನ ವಿರಾಮ ಘೋಷಿಸಿದ್ದು, ಈ ಅವಧಿಯಲ್ಲಿ ಉಕ್ರೇನ್ ಬಿಟ್ಟು ತೆರಳುವಂತೆ ನಾಗರಿಕರಿಗೆ ಸೂಚಿಸಲಾಗಿದೆ.
ಈಗಾಗಲೇ ರಷ್ಯಾ ದಾಳಿಗೆ ಉಕ್ರೇನ್ ನಲುಗಿ ಹೋಗಿದೆ. ಆದರೆ ರಷ್ಯಾ ಮುಂದಿನ 6 ಗಂಟೆಗಳ ಕಾಲ ಕದನ ವಿರಾಮ ಘೋಷಣೆ ಮಾಡಿದೆ. ಮರಿಯುಪೋಲ್, ವೋಲ್‍ನೋವಾಕ ನಗರಗಳಲ್ಲಿ ಕದನ ವಿರಾಮ ಘೋಷಿಸಲಾಗಿದೆ. ಕದನ ವಿರಾಮದ ನಂತರ ಮತ್ತಷ್ಟು ದಾಳಿ ನಡೆಯಲಿದೆ. ಭಾರತೀಯ ಕಾಲಮಾನಕ್ಕೆ ಅನ್ವಯವಾಗುವಂತೆ ಇಂದು ಸಂಜೆ 7:30ಕ್ಕೆ ಕದನ ವಿರಾಮ ಅಂತ್ಯವಾಗಲಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.
ಇಂದು ರಾತ್ರಿ ಕ್ಷಿಪಣಿ ದಾಳಿ ಇನ್ನಷ್ಟು ತೀವ್ರವಾಗುವ ಸಾಧ್ಯತೆಯಿದೆ. ಖಾರ್ಕಿವ್, ಕೀವ್ ಸುಮಿ ಮೇಲೆ ಬಾಂಬ್ ದಾಳಿ ನಡೆಯುವ ಸಾಧ್ಯತೆಯಿದೆ. ಮರಿಯುಪೋಲ್‌ಗೆ ಮುತ್ತಿಗೆ ಹಾಕುತ್ತಿರುವಾಗ, ರಷ್ಯಾದ ಪಡೆಗಳು ಅದರ ವಿದ್ಯುತ್, ಆಹಾರ, ನೀರು ಮತ್ತು ಸಾರಿಗೆಯನ್ನು ಕಡಿತಗೊಳಿಸಿದ್ದವು. ಇದರಿಂದ ನಾಗರಿಕ ಪ್ರದೇಶಗಳ ಮೇಲೆ ರಷ್ಯಾ ಬಾಂಬ್ ದಾಳಿ ಮಾಡುತ್ತಿದೆ ಎಂದು ಟೀಕಿಸುತ್ತಿರುವ ಬೆನ್ನಲ್ಲೆ ರಷ್ಯಾ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಅಲ್ಪ ಅವಧಿಯವರೆಗೆ ಕದನ ವಿರಾಮ ಘೋಷಿಸಿದೆ. ಇದನ್ನೂ ಓದಿ: ಭಾರತದ ಗೋಧಿ ಚೆನ್ನಾಗಿದೆ, ನಿಮ್ಮದು ಕಳಪೆಯಾಗಿದೆ: ಪಾಕಿಸ್ತಾನ ವಿರುದ್ಧ ತಾಲಿಬಾನ್ ಕಿಡಿ
ಉಕ್ರೇನ್ ಹಾಗೂ ರಷ್ಯಾ ಕದನ ವಿರಾಮ ಘೋಷಿಸುವಂತೆ ಭಾರತ ಕೋರಿತ್ತು. ಅಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಎರಡೂ ದೇಶಗಳು ಕದನ ವಿರಾಮವನ್ನು ಅನುಷ್ಠಾನಗೊಳಿಸಬೇಕಿದೆ. ಐರೋಪ್ಯ ಒಕ್ಕೂಟಗಳು ಕದನ ವಿರಾಮ ಘೋಷಿಸಲು ಹಲವು ದಿನಗಳಿಂದಲೇ ರಷ್ಯಾ ಹಾಗೂ ಉಕ್ರೇನ್‍ಗೆ ಮನವಿ ಮಾಡಿದ್ದವು. ಭಾರತ ಶುಕ್ರವಾರ ಕದನ ವಿರಾಮ ಘೋಷಿಸುವಂತೆ ಮನವಿ ಮಾಡಿತ್ತು. ಇದನ್ನೂ ಓದಿ: ಕದನ ವಿರಾಮ ಘೋಷಿಸಿ: ರಷ್ಯಾ, ಉಕ್ರೇನ್‌ಗೆ ಭಾರತ ಮನವಿ