ಉಕ್ರೇನ್‌ಗೆ ಆರ್ಥಿಕ ನೆರವು ನೀಡಲು ಸಿದ್ಧ: ವಿಶ್ವ ಬ್ಯಾಂಕ್‌

Public TV
1 Min Read
world bank 1

ವಾಷಿಂಗ್ಟನ್: ರಷ್ಯಾದ ಆಕ್ರಮಣಕ್ಕೆ ತುತ್ತಾಗಿರುವ ಉಕ್ರೇನ್‌ಗೆ ಅಗತ್ಯ ಆರ್ಥಿಕ ನೆರವು ನೀಡುವುದಾಗಿ ವಿಶ್ವ ಬ್ಯಾಂಕ್‌ ಭರವಸೆ ನೀಡಿದೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ನಿರ್ಧಾರಕ್ಕೆ ಕಳವಳ ವ್ಯಕ್ತಪಡಿಸಿರುವ ವಿಶ್ವ ಬ್ಯಾಂಕ್‌, ನಾವು ಉಕ್ರೇನ್‌ಗೆ ತಕ್ಷಣದ ಬೆಂಬಲವನ್ನು ಒದಗಿಸಲು ಸಿದ್ಧರಿದ್ದೇವೆ. ಹಣಕಾಸು ಹಂಚಿಕೆ ಸೇರಿದಂತೆ ಇತರೆ ಬೆಂಬಲಕ್ಕಾಗಿ ಕ್ರಮಕೈಗೊಂಡಿದ್ದೇವೆ. ಇದಕ್ಕಾಗಿ ನಮ್ಮ ಎಲ್ಲಾ ಹಣಕಾಸು ಮತ್ತು ತಾಂತ್ರಿಕ ಬೆಂಬಲ ಸಾಧನಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದೆ. ಇದನ್ನೂ ಓದಿ: Russia Ukraine War – ಯಾವ ರಾಷ್ಟ್ರದ ಬೆಂಬಲ ಯಾರಿಗೆ?

ukraine 3

ವಿಶ್ವ ಬ್ಯಾಂಕ್‌ ಗ್ರೂಪ್‌ನ ಅಧ್ಯಕ್ಷ ಡೇವಿಡ್‌ ಮಾಲ್ಪಾಸ್‌ ಮಾತನಾಡಿ, ಉಕ್ರೇನ್‌ನಲ್ಲಿ ನಡೆಯುತ್ತಿರುವ ಘಟನೆಗಳ ಪರಿಣಾಮವಾಗಿ ಉಂಟಾಗಿರುವ ಹಿಂಸಾಚಾರ, ಜೀವಹಾನಿಯಿಂದ ವಿಶ್ವ ಬ್ಯಾಂಕ್‌ ಕಳವಳಗೊಂಡಿದೆ. ನಾವು ಉಕ್ರೇನ್‌ನ ದೀರ್ಘಕಾಲದ ಪಾಲುದಾರರಾಗಿದ್ದೇವೆ. ಇಂತಹ ನಿರ್ಣಾಯಕ ಕ್ಷಣದಲ್ಲಿ ದೇಶದ ಜನತೆಯ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೆಟ್ರೋ ಸುರಂಗದಲ್ಲಿ ಅವಿತಿದ್ದಾರೆ ಕನ್ನಡಿಗರು!

ಉಕ್ರೇನ್‌ನಲ್ಲಿನ ವಿನಾಶಕಾರಿ ಬೆಳವಣಿಗೆಗಳು ದೂರಗಾಮಿ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳನ್ನು ಬೀರುತ್ತವೆ. ಈ ವೆಚ್ಚಗಳನ್ನು ನಿರ್ಣಯಿಸಲು ನಾವು ಐಎಂಎಫ್‌ನೊಂದಿಗೆ ನಿಕಟವಾಗಿ ಸಮನ್ವಯ ಸಾಧಿಸುತ್ತೇವೆ ಎಂದು ವಿಶ್ವ ಬ್ಯಾಂಕ್‌ ತಿಳಿಸಿದೆ.

ukraine russia

ಮಾಲ್ಪಾಸ್‌ ಅವರು ಶಾನಿವಾರದಂದೇ ಮ್ಯೂನಿಚ್‌ನಲ್ಲಿ ಉಕ್ರೇನಿಯನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಅವರನ್ನು ಭೇಟಿಯಾಗಿದ್ದರು. ಉಕ್ರೇನ್‌ ಪ್ರದೇಶದ ಜನರಿಗೆ ವಿಶ್ವ ಬ್ಯಾಂಕ್‌ನ ಬೆಂಬಲ ಮತ್ತು ಸಹಾಯ ಒದಗಿಸುವ ಕುರಿತು ಆಶಯ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ರಷ್ಯಾ ವಿರುದ್ಧ ಹೋರಾಡಲು ನಾಗರಿಕರಿಗೂ ಶಸ್ತ್ರಾಸ್ತ್ರ ನೀಡಿದ ಉಕ್ರೇನ್

Share This Article
Leave a Comment

Leave a Reply

Your email address will not be published. Required fields are marked *