ಕೀವ್: ನೀವು ನಮ್ಮೊಂದಿಗಿದ್ದೇವೆ ಎಂಬುದನ್ನು ಸಾಬೀತುಪಡಿಸಿ, ಕತ್ತಲಿನ ವಿರುದ್ಧ ಬೆಳಕು ಜಯ ಸಾಧಿಸುತ್ತೆ ಎಂದು ಯೂರೋಪ್ ರಾಷ್ಟ್ರಗಳ ನಾಯಕರಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಭಾವಾವೇಷದಲ್ಲಿ ಕರೆ ನೀಡಿದ್ದಾರೆ.
ಯೂರೋಪ್ ನಾಯಕರೊಂದಿಗೆ ವೀಡಿಯೋ ಕರೆಯಲ್ಲಿ ಮಾತನಾಡಿದ ಅವರು, ನಾವು ನಮ್ಮ ನೆಲಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದೇವೆ. ನಮ್ಮ ದೇಶದ ಎಲ್ಲಾ ದೊಡ್ಡ ನಗರಗಳನ್ನು ಈಗ ನಿರ್ಬಂಧಿಸಲಾಗಿದೆ. ನೀವು ನಮ್ಮೊಂದಿಗಿದ್ದೀರಿ ಎಂಬುದನ್ನು ಸಾಬೀತುಪಡಿಸಿ. ನಮ್ಮನ್ನು ಇಲ್ಲಿಂದ ಹೋಗಲು ಬಿಡುವುದಿಲ್ಲ ಎಂದು ನೀವು ಸಾಬೀತುಪಡಿಸಿ. ನೀವು ನಿಜವಾಗಿಯೂ ಯುರೋಪಿಯನ್ನರು ಎಂದು ತೋರಿಸಿ. ಜೀವನವು ಸಾವಿನ ವಿರುದ್ಧ ಹಾಗೂ ಬೆಳಕು ಕತ್ತಲೆಯ ವಿರುದ್ಧ ಗೆಲ್ಲುತ್ತದೆ ಎಂದು ಭಾವುಕವಾಗಿ ನುಡಿದಿದ್ದಾರೆ. ಇದನ್ನೂ ಓದಿ: ರಷ್ಯಾ ಹಣಕಾಸು ಸಂಸ್ಥೆಗಳಿಗೆ ವೀಸಾ, ಮಾಸ್ಟರ್ ಕಾರ್ಡ್ ಬ್ಲಾಕ್ – ATMಗಳ ಮುಂದೆ ರಷ್ಯನ್ನರ ದಂಡು
ಇಂದು ನಾವು ನಿಮ್ಮೆಲ್ಲರನ್ನೂ, ಯೂರೋಪಿಯನ್ ಒಕ್ಕೂಟದ ದೇಶಗಳನ್ನು ಒಗ್ಗೂಡಿಸಿದ್ದೇವೆ. ಇದು ನನಗೆ ಖುಷಿಯ ವಿಚಾರ. ಆದರೆ ಇದಕ್ಕಾಗಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಲೆ ತೆರಬೇಕು ಎಂದು ನನಗೆ ತಿಳಿದಿರಲಿಲ್ಲ. ರಷ್ಯಾ ಆಕ್ರಮಣ ನನಗೆ, ಪ್ರತಿಯೊಬ್ಬ ಉಕ್ರೇನಿಯನ್ನರಿಗೆ ಮತ್ತು ದೇಶಕ್ಕೆ ದೊಡ್ಡ ದುರಂತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಂದು ನಾವು ಮೌಲ್ಯಗಳಿಗಾಗಿ, ಹಕ್ಕುಗಳಿಗಾಗಿ, ಸ್ವಾತಂತ್ರ್ಯಕ್ಕಾಗಿ, ಸಮಾನವಾಗಿರಬೇಕೆಂಬ ಬಯಕೆಗಾಗಿ ಹೋರಾಡುತ್ತಿದ್ದೇವೆ. ರಷ್ಯಾ ಭಯೋತ್ಪಾದಕ ರಾಷ್ಟ್ರವಾಗಿದೆ. ಇದನ್ನು ಯಾರೂ ಕ್ಷಮಿಸುವುದಿಲ್ಲ, ಮರೆಯುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ವ್ಯಾಕ್ಯೂಮ್ ಬಾಂಬ್ ಪ್ರಯೋಗ ಆರೋಪ – ಏನಿದರ ವಿಶೇಷ?
ಉಕ್ರೇನ್ ಮೇಲೆ ಕಳೆದ ವಾರ ರಷ್ಯಾ ಯುದ್ಧವನ್ನು ಘೋಷಿಸಿತು. ರಷ್ಯಾ ಸೇನಾ ಪಡೆ ನಿರಂತರವಾಗಿ ದಾಳಿಗಳನ್ನು ನಡೆಸುತ್ತಿದ್ದು, ಹಂತಹಂತವಾಗಿ ಉಕ್ರೇನ್ ಅನ್ನು ಅತಿಕ್ರಮಿಸುತ್ತಿದೆ. ಇದರಿಂದ ನೂರಾರು ಸಂಖ್ಯೆಯಲ್ಲಿ ಜನರು, ಸೈನಿಕರು ಸಾಯುತ್ತಿದ್ದಾರೆ. ಇದನ್ನೂ ಓದಿ: ಊಟ ತರಲು ನನ್ನ ಬಳಿ ದುಡ್ಡಿಲ್ಲ, ಸ್ವಲ್ಪ ಹಣ ಹಾಕು ಅಂದ ಅದೇ ನವೀನ್‍ನ ಕೊನೆ ಮಾತು: ಶ್ರೀಕಾಂತ್