ಕೀವ್: ಜಗತ್ತಿನ 2ನೇ ಅತಿದೊಡ್ಡ ರಾಷ್ಟ್ರ ರಷ್ಯಾ, ಪುಟ್ಟ ಉಕ್ರೇನ್ ಮೇಲೆ ದಾಳಿ ನಡೆಸಿ ಇಂದಿಗೆ 3 ತಿಂಗಳಾಗಿದೆ. ಇನ್ನೂ ಕೂಡ ಉಕ್ರೇನ್ ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ.
ಉಕ್ರೇನ್‍ನ ಪ್ರಬಲ ಪೈಪೋಟಿಯಿಂದಾಗಿ ಇನ್ನೂ ಕೂಡ ವಶಕ್ಕೆ ಪಡೆಯಲು ರಷ್ಯಾ ತಿಣುಕಾಡುತ್ತಿದೆ. ಉಕ್ರೇನ್ ರಾಜಧಾನಿ ಕೀವ್ ನಗರದ ಮೇಲೆ ರಷ್ಯಾ ದಾಳಿ ನಡೆಸಿ, ಅಪಾರ ಸಾವು-ನೋವು ಮಾಡಿದ್ದನ್ನು ಬಿಟ್ಟರೆ ಸಣ್ಣಪುಟ್ಟ ಗೆಲವು ಸಾಧಿಸಿದೆ. ಇದನ್ನೂ ಓದಿ: ಚೀನಿ ಪ್ರಜೆಗಳಿಗೆ ವೀಸಾ ನೀಡಿದ ಪ್ರಕರಣ- ಕಾರ್ತಿ ಚಿದಂಬರಂಗೆ ಸಿಬಿಐ ಸಮನ್ಸ್
Advertisement
Advertisement
ಪಾಶ್ಚಿಮಾತ್ಯ ರಾಷ್ಟ್ರಗಳು ಕೊಟ್ಟ ಬೆಂಬಲದಿಂದಾಗಿ, ರಷ್ಯಾ ಪಡೆಯನ್ನು ಉಕ್ರೇನ್ ಸಮರ್ಥವಾಗಿ ಎದುರಿಸುತ್ತಿದೆ. ಮರಿಯುಪೋಲ್ ನಗರ ಮಾತ್ರ ರಷ್ಯಾದ ಕೈವಶವಾಗಿದ್ದು, ಕಳೆದ ತಿಂಗಳು ಕೀವ್ ಹಾಗೂ ಸುತ್ತಮುತ್ತಲ ನಗರದಿಂದ ತನ್ನ ಸೇನೆಯನ್ನು ರಷ್ಯಾ ವಾಪಸ್ ಕರೆಸಿಕೊಂಡಿದೆ. ಇದನ್ನೂ ಓದಿ: ಅಮೆರಿಕಾದ ಶಾಲೆಯಲ್ಲಿ ಶೂಟೌಟ್-18 ವಿದ್ಯಾರ್ಥಿಗಳು ಸೇರಿ 21 ಮಂದಿ ದುರ್ಮರಣ