ಬೆಂಗಳೂರು: ಸದಾ ಒಂದಿಲ್ಲೊಂದು ವಿಷಯಗಳ ಬಗ್ಗೆ ಮಾತಾಡಿ ವಿವಾದ ಸೃಷ್ಟಿ ಮಾಡೋ ಸಚಿವ ಪ್ರಿಯಾಂಕ್ (Priyank Kharge) ಇಲಾಖೆ ಅಭಿವೃದ್ದಿ ವಿಚಾರದಲ್ಲಿ ಮಾತ್ರ ಹಿಂದೆ ಬಿದ್ದಂತೆ ಕಾಣ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ತಮ್ಮ ಇಲಾಖೆ ವ್ಯಾಪ್ತಿಯ ಗ್ರಾಮ ಪಂಚಾಯತಿಗಳ (Gram Panchayat) ತೆರಿಗೆ ಸಂಗ್ರಹದಲ್ಲಿ ಇಲಾಖೆ ಹಿಂದೆ ಬಿದ್ದಿದೆ.
ಗ್ರಾಮೀಣಾಭಿವೃದ್ಧಿ ಇಲಾಖೆಯ ಅಂಕಿ ಅಂಶಗಳ ಪ್ರಕಾರವೇ ಕಳೆದ 3 ವರ್ಷಗಳಿಂದ ತೆರಿಗೆ ಸಂಗ್ರಹದಲ್ಲಿ ಇಲಾಖೆ ಹಿಂದೆ ಬಿದ್ದಿದೆ. ಈ ಆರ್ಥಿಕ ವರ್ಷ ಅಂದರೆ 2025-26ನೇ ಸಾಲಿನ ವರ್ಷ ಮುಕ್ತಾಯ ಆಗೋಕೆ ಒಂದು ತಿಂಗಳು ಬಾಕಿಯಿದ್ದರೂ 71% ಮಾತ್ರ ತೆರಿಗೆ ಸಂಗ್ರಹ ಮಾಡಿದೆ. ಇದು ಕೇವಲ ಈ ವರ್ಷದ ಕಥೆಯಲ್ಲ, ಕಳೆದ 3 ವರ್ಷಗಳ ಅಂಕಿ ಅಂಶಗಳನ್ನ ನೋಡಿದ್ರೆ ಬರೋಬ್ಬರಿ 1,389 ಕೋಟಿ ರೂ. ತೆರಿಗೆ ಸಂಗ್ರಹದಲ್ಲಿ ಹಿಂದೆ ಬಿದ್ದಿದೆ. ಸಚಿವ ಪ್ರಿಯಾಂಕ್ ಅವರು ಬೇರೆ ವಿಷಯದಲ್ಲಿ ತೋರಿಸಿದ್ದ ಆಸಕ್ತಿ ತೆರಿಗೆ ಸಂಗ್ರಹದಲ್ಲಿ ಮತ್ತಷ್ಟು ಪ್ರಗತಿ ಸಾಧಿಸಬಹುದಿತ್ತಿನೋ ಎನ್ನುವಂತಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಎಐ ದಿಗ್ಗಜರು – ಏನಿದು ಮೋದಿಯ MANAV ವಿಷನ್?
ಯಾವ ಯಾವ ವರ್ಷ ತೆರಿಗೆ ಸಂಗ್ರಹ ಬಾಕಿ?
- 2023-24ರಲ್ಲಿ
ಬೇಡಿಕೆ- 1,377.10 ಕೋಟಿ ರೂ.
ವಸೂಲಾತಿ- 764.20 ಕೋಟಿ ರೂ.
ಬಾಕಿ- 612.90 ಕೋಟಿ ರೂ.
ಸಂಗ್ರಹ-55.49% - 2024-25ರಲ್ಲಿ
ಬೇಡಿಕೆ- 1,582.50 ಕೋಟಿ ರೂ.
ವಸೂಲಾತಿ- 1,270.50 ಕೋಟಿ ರೂ.
ಬಾಕಿ- 312 ಕೋಟಿ ರೂ.
ಸಂಗ್ರಹ-80.28% - 2025-26ರಲ್ಲಿ (2026 ಫೆಬ್ರವರಿ 16ವರೆಗೆ)
ಬೇಡಿಕೆ- 1,623.50 ಕೋಟಿ ರೂ.
ವಸೂಲಾತಿ- 1,159.10 ಕೋಟಿ ರೂ.
ಬಾಕಿ- 464.30 ಕೋಟಿ ರೂ.
ಸಂಗ್ರಹ-71.39%

