ಬಿಗ್ ಬಾಸ್ (Bigg Boss Season 9) ಮನೆಯ ಪ್ರಣಯ ಪಕ್ಷಿಗಳಲ್ಲಿ ಮುಂಚೂಣಿಯಲ್ಲಿದ್ದವರು ರೂಪೇಶ್ ಶೆಟ್ಟಿ (Rupesh Shetty) ಹಾಗೂ ಸಾನ್ಯ ಅಯ್ಯರ್. ಈ ಜೋಡಿಯ ಬಗ್ಗೆ ಪ್ರೇಕ್ಷಕರು ಕೂಡ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೂ ಈ ಜೋಡಿ ಹೀಗೆಯೇ ನಗ್ತಾ ಇರಲಿ ಎಂದು ಹಾರೈಸಿದ್ದರು. ಹಾಗಂತ ರೂಪೇಶ್ ಶೆಟ್ಟಿ ಆಗಲಿ, ಸಾನ್ಯ ಅಯ್ಯರ್ ಆಗಲಿ ನೋಡುಗರಿಗೆ ಮುಜುಗರ ಪಡುವಂತೆ ಯಾವತ್ತೂ ನಡೆದುಕೊಂಡವರಲ್ಲ. ಆದರೆ, ಮೊನ್ನೆ ಹಾಗಾಗಲಿಲ್ಲ. ಅವರ ಉದ್ದೇಶ ಅದಾಗದೇ ಇರಬಹುದು. ಅದೇ ಇರಬಹುದು ಎನ್ನುವ ಕಾರಣಕ್ಕಾಗಿ ಸುದೀಪ್ ಸಿಡಿದೆದ್ದರು.
Advertisement
ಬಿಗ್ ಬಾಸ್ ಮನೆಯ ಕ್ಯಾಪ್ಟೆನ್ಸಿ ರೂಮ್ ನಲ್ಲಿ ರೂಪೇಶ್ ಶೆಟ್ಟಿ ಮೈಮೇಲೆ ಸಾನ್ಯ ಅಯ್ಯರ್ (Sanya Iyer) ಮಲಗಿಕೊಂಡಿದ್ದರು. ರೂಪೇಶ್ ಶೆಟ್ಟಿ ತಮ್ಮ ತೊಳಿನಿಂದ ಸಾನ್ಯ ಅಯ್ಯರ್ ಅನ್ನು ಬಿಗಿದಪ್ಪಿದ್ದರು. ಇವರ ಎದುರು ಆರ್ಯವರ್ಧನ್ (Aryavardhan Guruji) ಮಲಗಿದ್ದರು. ಮೂವರು ಮಲಗಿಕೊಂಡೇ ಹರಟೆ ಹೊಡೆಯುತ್ತಿದ್ದರು. ತಾವು ಮಲಗಿದ ರೀತಿ ಸರಿ ಇಲ್ಲ ಅಂತ ರೂಪೇಶ್ ಗಾಗಲಿ, ಸಾನ್ಯ ಅಯ್ಯರ್ ಗಾಗಲೇ ಅನಿಸದೇ ಇರಬಹುದು. ಆದರೆ, ಅದನ್ನು ಬಿಗ್ ಬಾಸ್ ನೋಟಿಸ್ ಮಾಡಿದ್ದಾರೆ. ಆ ರೀತಿ ವರ್ತಿಸೋದು ತಪ್ಪು ಎಂದು ಸುದೀಪ್ ಮೂಲಕ ಹೇಳಿಸಿದ್ದಾರೆ. ಇದನ್ನೂ ಓದಿ:ಕೊಟ್ಟ ಮಾತಿನಂತೆ ದಾವಣಗೆರೆ ಬೆಣ್ಣೆದೋಸೆ ಸವಿದ ಸ್ಯಾಂಡಲ್ ವುಡ್ ಕ್ವೀನ್
Advertisement
Advertisement
ರೂಪೇಶ್ ಮತ್ತು ಸಾನ್ಯ ಆ ರೀತಿ ಮಾಡಿದ್ದಕ್ಕೆ ಗರಂ ಆದ ಸುದೀಪ್ (Kichcha Sudeep) ‘ಕ್ಯಾಪ್ಟೆನ್ಸಿ ರೂಮ್ ನಲ್ಲಾಗಿದ್ದು ನಾಟ್ ಆಕ್ಸೆಪ್ಟಬಲ್. ಇದರಿಂದ ಕಂಟೆಂಟ್ ಸಿಗುತ್ತದೆ ಅಂದುಕೊಂಡಿದ್ದರೆ, ದಿಸ್ ಈಸ್ ನಾಟ್ ಎ ಶೋ ಫಾರ್ ದಟ್. ಈ ಮನೆ ಅದಕ್ಕಲ್ಲ’ ಎಂದು ಕಿಚ್ಚ ಖಡಕ್ಕಾಗಿಯೇ ವಾರ್ನಿಂಗ್ ಕೊಟ್ಟರು. ಸುದೀಪ್ ಅವರ ಮಾತಿನಿಂದ ಶಾಕ್ ಗೆ ಒಳಗಾದ ಈ ಜೋಡಿಗೆ ನಂತರ ಸಮಾಧಾನ ಮಾಡ್ತಾ, ‘ಯಾವುದೂ ಏನೂ ಹೊರಗೆ ಡ್ಯಾಮೇಜ್ ಆಗಿಲ್ಲ. ನೆಕ್ಸ್ಟ್ ಆಗೋದನ್ನ ತಡೆಯೋ ಪ್ರಯತ್ನ. ಫೋಕಸ್ ಮಿಸ್ ಮಾಡಬೇಡಿ’ ಎಂದು ಎಚ್ಚರಿಕೆ ನೀಡಿದರು.
Advertisement
ಈ ಎಚ್ಚರಿಕೆಯನ್ನು ರೂಪೇಶ್ ಶೆಟ್ಟಿ ತುಂಬಾ ಸೀರಿಯಸ್ ಆಗಿ ತಗೆದುಕೊಂಡಿದ್ದಾರೆ. ಈ ಘಟನೆಯಿಂದ ನೊಂದುಕೊಂಡಿದ್ದ ರೂಪೇಶ್ ಮೊದಲು ಕಣ್ಣೀರು ಹಾಕಿದರು. ಇದೀಗ ಸಾನ್ಯರಿಂದ ದೂರ ಉಳಿಯುತ್ತಿದ್ದಾರೆ. ರೂಪೇಶ್ ಜೊತೆ ಊಟ ಮಾಡಲು ಸಾನ್ಯ ಕಾಯುತ್ತಿದ್ದರೂ, ಹೋಗಲಿಲ್ಲ. ಅಲ್ಲದೇ, ಸಾನ್ಯ ಜೊತೆ ಸರಿಯಾಗಿಯೂ ಅವರು ಮಾತನಾಡುತ್ತಿಲ್ಲ. ಪ್ರತಿ ನಿತ್ಯ ಸಾನ್ಯ ಜೊತೆನೇ ಕೂತು ಊಟ ಮಾಡುತ್ತಿದ್ದ ರೂಪೇಶ್, ಕಿಚ್ಚನ ಎಚ್ಚರಿಕೆಯ ಮಾತುಗಳ ನಂತರ ಸಾನ್ಯ ಜೊತೆ ಅಂತರವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ‘ಈ ರೀತಿ ನೀನು ಮಾಡಬೇಡ’ ಎಂದು ಸಾನ್ಯ ಹೇಳಿದರೂ, ರೂಪೇಶ್ ಈವರೆಗೂ ಬದಲಾಗಿಲ್ಲ.
ರೂಪೇಶ್ ಈ ನಡೆಯಿಂದ ಸಾನ್ಯ ಕೂಡ ಅಪ್ ಸೆಟ್ ಆಗಿದ್ದಾರೆ. ನೇರವಾಗಿಯೇ ರೂಪೇಶ್ ಬಳಿ ಬಂದು ‘ಮೊದಲಿನ ಹಾಗೆ ನೀನು ಇಲ್ಲ. ತುಂಬಾ ಚೇಂಜ್ ಆಗಿದ್ದೀಯಾ. ನಿನಗೆ ಅಪ್ ಸೆಟ್ ಆಗಿದೆ ಅಂತಾನೇ ನಿನ್ನ ಜೊತೆ ನಾನು ಇರಬೇಕು ಅಂತ ಬರ್ತಿರೋದು. ಆದರೆ, ನೀನು ಅವೈಡ್ ಮಾಡ್ತಿದ್ದೀಯಾ’ ಎಂದು ಹಲವು ಪ್ರಶ್ನೆಗಳನ್ನು ಬೇಸರದಿಂದಲೇ ಕೇಳಿದರು ಸಾನ್ಯ. ‘ನನ್ನ ಬಗ್ಗೆ ಸದ್ಯ ನೀನೇ ಏನೇ ಅಂದುಕೊಂಡಿದ್ದರೂ, ನಿನ್ನ ಮೇಲಿನ ಕಾಳಜಿ ಬದಲಾಗಲ್ಲ’ ಎನ್ನುವ ಮೂಲಕ ರೂಪೇಶ್ ಆಕೆಗೆ ಸಮಾಧಾನ ಮಾಡಿದ್ದಾರೆ. ಆದರೆ, ಈ ಪ್ರೀತಿ ಹಾಗೆಯೇ ಉಳಿಯತ್ತಾ? ಅಥವಾ ಸುದೀಪ್ ಅವರ ಮಾತಿನ ಕಾರಣದಿಂದಾಗಿ ಬ್ರೇಕ್ ಅಪ್ ಆಗತ್ತಾ ಕಾದು ನೋಡಬೇಕು.