ಬಿಗ್ ಬಾಸ್ (Bigg Boss Season 9) ಮನೆಯಲ್ಲಿ ಯಾವುದೂ ಅಂದುಕೊಂಡಂತೆ ನಡೆಯುತ್ತಿಲ್ಲ. ಮನೆಯಲ್ಲಿ ಏನು ನಡೆಯುತ್ತಿದೆ ಎಂದು ಅರಿವಿಗೆ ಬಾರದೇ ದೊಡ್ಮನೆ ಸದಸ್ಯರು ಗಲಿಬಿಲಿಗೊಂಡಿದ್ದಾರೆ. ಒಬ್ಬೊಬ್ಬರದ್ದು ಒಂದೊಂದು ನಡವಳಿಕೆ. ಮೊದಲ ವಾರ ಸೈಲೆಂಟ್ ಆಗಿದ್ದವರು, ಎರಡನೇ ವಾರಕ್ಕೆ ಅಬ್ಬರಿಸುತ್ತಿದ್ದಾರೆ. ಕಿಚ್ಚನ ಪಂಚಾಯತಿಯಲ್ಲಿ ಕೆಲವರ ಬಣ್ಣ ಬಯಲಾಗುತ್ತಿದ್ದಂತೆಯೇ ಅವರನ್ನು ಇತರರು ನೋಡುವ ರೀತಿಯೇ ಬದಲಾಗಿದೆ.
ಈ ನಡುವೆ ಎರಡನೇ ವಾರದ ನಾಮಿನೇಟ್ ಪ್ರಕ್ರಿಯೆ ಕೂಡ ನಡೆದಿದ್ದು, ಇಬ್ಬರು ಸ್ಪರ್ಧಿಗಳು ನೇರವಾಗಿ ನಾಮಿನೇಟ್ ಆಗಿದ್ದಾರೆ. ಮೊದಲನೇ ವಾರದಲ್ಲೇ ಮನೆಯಿಂದ ಹೊರ ನಡೆದ ಐಶ್ವರ್ಯ ಪಿಸ್ಸೆಗೆ (Aishwarya Pisse) ಬಿಗ್ ಬಾಸ್ ವಿಶೇಷ ಅಧಿಕಾರವನ್ನು ನೀಡಿದ್ದರು. ಮನೆಯಿಂದ ಆಚೆ ಹೋಗುವಾಗ ಒಬ್ಬರನ್ನು ನಾಮಿನೇಟ್ ಮಾಡಿ ಎಂದು ತಿಳಿಸಿದ್ದರು. ಹಾಗಾಗಿ ಆರ್ಯವರ್ಧನ್ ಗುರೂಜಿಯನ್ನು (Aryavardhan Guruji) ಐಶ್ವರ್ಯ ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಇದನ್ನೂ ಓದಿ:ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಮೂರು ದಿನದ ಗಳಿಕೆ 230 ಕೋಟಿಗೂ ಅಧಿಕ
ಇದೇ ರೀತಿಯಾಗಿಯೇ ಮತ್ತೊಂದು ವಿಶೇಷ ಅಧಿಕಾರ ಸಿಕ್ಕಿದ್ದು ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿರುವ ವಿನೋದ್ ಗೊಬ್ರಗಾಲಗೆ. ವಿನೋದ್ (Vinod Gobragala) ಕೂಡ ಒಬ್ಬರನ್ನು ನೇರವಾಗಿ ನಾಮಿನೇಟ್ ಮಾಡುವ ಅಧಿಕಾರವನ್ನು ಹೊಂದಿದ್ದರಿಂದ ಅವರು ರೂಪೇಶ್ ರಾಜಣ್ಣ ಅವರ ಹೆಸರು ಸೂಚಿಸಿದ್ದರು. ಹೀಗಾಗಿ ಗುರೂಜಿ ಜೊತೆಗೆ ನೇರವಾಗಿ ರೂಪೇಶ್ ರಾಜಣ್ಣ (Rupesh Rajanna) ಕೂಡ ನಾಮಿನೇಟ್ ಆಗಿದ್ದಾರೆ.