ಬೀದರ್: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 1 ಕೋಟಿ 65 ಲಕ್ಷ ಮೌಲ್ಯದ 165 ಕೆಜಿ ಗಾಂಜಾವನ್ನು (Marijuana) ಪೊಲೀಸರು ಜಪ್ತಿ ಮಾಡಿರುವ ಘಟನೆ ಬೀದರ್‌ನಲ್ಲಿ (Bidar) ನಡೆದಿದೆ.
ಆಂದ್ರಪ್ರದೇಶದ (Andhra Pradesh) ವಿಜಯವಾಡದಲ್ಲಿ ಗಾಂಜಾದ ಮೂಲ ಕಿಂಗ್‌ಪಿನ್ ಓರ್ವನನ್ನು ಬಂಧಿಸಲಾಗಿತ್ತು. ಆತ ನೀಡಿದ ಖಚಿತ ಮಾಹಿತಿಯ ಮೇರೆಗೆ ಹೈದರಾಬಾದ್‌ನಿಂದ (Hyderabad) ಮಹಾರಾಷ್ಟ್ರಕ್ಕೆ (Maharashtra) ಕಾರಿನಲ್ಲಿ ಸಾಗಿಸುತ್ತಿದ್ದ 156 ಕೆಜಿ ಗಾಂಜಾವನ್ನು ಬೀದರ್ ಪೊಲೀಸರು ಜಪ್ತಿ ಮಾಡಿದ್ದಾರೆ. ಜಿಲ್ಲೆಯ ಚಿಟ್ಟಗುಪ್ಪ (Chittaguppa) ತಾಲೂಕಿನ ಬೆಳಕೇರಾ ಗ್ರಾಮದ ಬಳಿ 1 ಕೋಟಿ 56 ಲಕ್ಷ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: BWSSB ಅರೆಬರೆ ಕಾಮಗಾರಿ – ಗುಂಡಿಗೆ ಬಿದ್ದ ಬಾಲಕ ಬಲಿ
ಅದೇ ರೀತಿ ಬೀದರ್ ನಗರದ ರೈಲ್ವೇ ಟ್ರ್ಯಾಕ್ (Railway Track) ಬಳಿ ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ತಲಾ 5 ಕೆಜಿಯಂತೆ ಒಟ್ಟು 10 ಕೆಜಿ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ರೈಸ್ ಪುಲ್ಲಿಂಗ್ ದಂಧೆ – ನಿವೃತ್ತ ಕಾನ್ಸ್‌ಟೇಬಲ್ ಸಹಿತ ಮೂವರ ಬಂಧನ
ಒಟ್ಟು ಮೂರು ಪ್ರಕರಣದಲ್ಲಿ 165 ಕೆಜಿ ಗಾಂಜಾ ಜಪ್ತಿ ಮಾಡಿದ ಬೀದರ್ ಪೊಲೀಸರು ಆರು ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಎಸ್ಪಿ ಚನ್ನಬಸವಣ್ಣ ಲಂಗೋಟಿಯವರ ಮಾರ್ಗದರ್ಶನದಲ್ಲಿ ಭರ್ಜರಿ ಕಾರ್ಯಾಚರಣೆ ಮಾಡಿದ್ದು, ಕಾರ್ಯಾಚರಣೆ ಮಾಡಿದ ಪೊಲೀಸರಿಗೆ ಎಸ್ಪಿ ಪ್ರಶಂಸಾ ಪತ್ರ ಹಾಗೂ 1 ಲಕ್ಷ ಬಹುಮಾನ ನೀಡಿ ಗೌರವಿಸಿದ್ದಾರೆ. ಇದನ್ನೂ ಓದಿ: ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ಹಂತಕರು ಜೈಲಿಗೆ