ಮುಂಬೈ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಸೋಮವಾರ (ಇಂದು) ನಡೆದ ವಹಿವಾಟಿನಲ್ಲಿ ಅಮೆರಿಕದ ಡಾಲರ್ (US Dollar) ಎದುರು ರೂಪಾಯಿ (Indian Rupee) ಮೌಲ್ಯ 9 ಪೈಸೆಗಳಷ್ಟು ಏರಿಕೆ ಕಂಡಿದೆ. ಹೀಗಾಗಿ ರೂಪಾಯಿ ಮೌಲ್ಯವು ಡಾಲರ್ ಎದುರು 87.93 ರೂ.ಗೆ ತಲುಪಿದೆ.
ವಿದೇಶಿ ಬಂಡವಾಳ (Foreign Fund) ಒಳಹರಿವು, ಕಚ್ಚಾತೈಲ ಬೆಲೆ ಇಳಿಕೆ ಹಾಗೂ ದೇಶಿಯ ಷೇರುಪೇಟೆ ಸೂಚ್ಯಂಕದಲ್ಲಿ ಏರಿಕೆ ಕಂಡಿರುವ ಕಾರಣಗಳ ಹಿನ್ನೆಲೆ ರೂಪಾಯಿ ಮೌಲ್ಯವು 9 ಪೈಸೆಯಷ್ಟು ಏರಿಕೆ ಕಂಡಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿ ನಿಲ್ಲಿಸದಿದ್ದರೆ ಭಾರೀ ಸುಂಕ ಹಾಕ್ತೇವೆ: ಭಾರತಕ್ಕೆ ಟ್ರಂಪ್ ಎಚ್ಚರಿಕೆ
ಶುಕ್ರವಾರದ ಅಂತ್ಯದ ವೇಳೆಗೆ ಡಾಲರ್ ಎದುರು ರೂಪಾಯಿ ಮೌಲ್ಯ 88.02 ರೂ. ಆಗಿತ್ತು. ಆದ್ರೆ ಸೋಮವಾರ ಮಾರುಕಟ್ಟೆ ಅಂತ್ಯದ ವೇಳೆಗೆ 87.93 ರೂ.ಗೆ ತಲುಪಿದೆ. ಇದನ್ನೂ ಓದಿ: PublicTv Explainer: ಬೆಳ್ಳಿಗೂ ಬಂತು ಬಂಗಾರದ ಹೊಳಪು – ದಿಢೀರ್ ಏರಿಕೆ ಯಾಕೆ?
ವಿದೇಶಿ ಬ್ಯಾಂಕ್ ಬ್ಯಾಂಕ್ ವಿನಿಮಯದಲ್ಲಿ ರೂಪಾಯಿ 87.94 ರೂ.ನಿಂದ ಶುರುವಾಗಿ, 87.74 – 87.94 ರೂ.ಗಳಲ್ಲಿ ವಹಿವಾಟು ನಡೆಸಿತು. ನಂತರ ಶುಕ್ರವಾರದ 88.02 ರೂ.ಗಿಂತ ಹೆಚ್ಚಾಗಿ 87.93 ರೂ.ಗೆ ಕೊನೆಗೊಂಡಿತು. ಇದನ್ನೂ ಓದಿ: ಮಂಡ್ಯ ಭತ್ತಕ್ಕೆ ಫಿಲಿಪೈನ್ಸ್ ನಂಟು – ಹೊಸ ತಳಿ ಸಂಶೋಧನೆಗೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ