ನವದೆಹಲಿ: ಇದೇ ಮೊದಲ ಬಾರಿಗೆ ಅಮೆರಿಕದ ಡಾಲರ್ ಎದುರು ರೂಪಾಯಿಯ ಮೌಲ್ಯ ದಾಖಲೆಯ ಕುಸಿತ ಕಂಡಿದೆ. ಮಧ್ಯದಲ್ಲಿ ತುಸು ಚೇತರಿಕೆ ಕಂಡಿದ್ದ ರೂಪಾಯಿ ಮತ್ತೆ 80 ರೂ. ಗಡಿ ದಾಟಿದೆ. ನಿನ್ನೆ ದಿನದ ಕೊನೆಗೆ 79.98 ರೂಪಾಯಿ ಇದ್ದ ಮೌಲ್ಯ ಇಂದು 80.13 ರೂ.ಗಳಿಗೆ ಕುಸಿದಿದೆ.
ಕಚ್ಚಾ ತೈಲದ ಬೆಲೆ ಏರಿಕೆ, ವಿದೇಶಿ ಬಂಡವಾಳ ಹೂಡಿಕೆದಾರರ ಹೊರ ಹರಿವು ಮೊದಲಾದ ಕಾರಣಗಳು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ. ಇದು ಈ ವರ್ಷ ಯುಎಸ್ ಡಾಲರ್ ವಿರುದ್ಧ ಸುಮಾರು ಶೇ.7 ರಷ್ಟು ಕುಸಿದಿದೆ ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ಹಿರಿಯ ಸಂಶೋಧನಾ ವಿಶ್ಲೇಷಕ ಶ್ರೀರಾಮ್ ಅಯ್ಯರ್ ಹೇಳಿದ್ದಾರೆ. ಇದನ್ನೂ ಓದಿ: ಜೀವ ಬೆದರಿಕೆ, ಮಾನಸಿಕ ಚಿತ್ರಹಿಂಸೆ ಆರೋಪ – ಕಾಂಗ್ರೆಸ್ ನಾಯಕಿ ವಿರುದ್ಧ FIR
ವಿದೇಶಿ ಹೂಡಿಕೆದಾರರು 2022-23 ರಲ್ಲಿ ಇದುವರೆಗೆ ಭಾರತೀಯ ಈಕ್ವಿಟಿ ಮಾರುಕಟ್ಟೆಗಳಿಂದ ಸುಮಾರು 14 ಬಿಲಿಯನ್ ಡಾಲರ್ ಹಣವನ್ನು ಹಿಂತೆಗೆದುಕೊಂಡಿದ್ದಾರೆ. ವಿದೇಶಿ ಬಂಡವಾಳದ ಹೊರಹರಿವಿನಿಂದ ರೂಪಾಯಿ ಮೌಲ್ಯ ಕುಸಿತವಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ 11ರಂದು ಹೇಳಿದ್ದರು. ಇದನ್ನೂ ಓದಿ: NEET ಪರೀಕ್ಷಾರ್ಥಿಗಳಿಗೆ ಒಳಉಡುಪು ತೆಗೆಯಲು ಒತ್ತಾಯ- ತನಿಖೆ ಆರಂಭಿಸಿದ ಪೊಲೀಸರು
2014ರ ಡಿಸೆಂಬರ್ 31 ರಂದು ಡಾಲರ್ ಮುಂದೆ ರೂಪಾಯಿಯ ಬೆಲೆ 79.41 ರೂ.ಗೆ ಏರಿಕೆಯಾಗಿತ್ತು.