Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಆರ್‌ಬಿಐ ನಿರ್ಧಾರದಿಂದ ಏರಿಕೆಯಾಗಿ ಮತ್ತೆ ಡಾಲರ್‌ ಮುಂದೆ ಪಲ್ಟಿ – ಫಸ್ಟ್‌ ಟೈಂ 95 ರೂ.ಗೆ ಕುಸಿದ ಮೌಲ್ಯ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಆರ್‌ಬಿಐ ನಿರ್ಧಾರದಿಂದ ಏರಿಕೆಯಾಗಿ ಮತ್ತೆ ಡಾಲರ್‌ ಮುಂದೆ ಪಲ್ಟಿ – ಫಸ್ಟ್‌ ಟೈಂ 95 ರೂ.ಗೆ ಕುಸಿದ ಮೌಲ್ಯ

Latest

ಆರ್‌ಬಿಐ ನಿರ್ಧಾರದಿಂದ ಏರಿಕೆಯಾಗಿ ಮತ್ತೆ ಡಾಲರ್‌ ಮುಂದೆ ಪಲ್ಟಿ – ಫಸ್ಟ್‌ ಟೈಂ 95 ರೂ.ಗೆ ಕುಸಿದ ಮೌಲ್ಯ

Public TV
Last updated: March 30, 2026 3:41 pm
Public TV
Share
2 Min Read
Rupee hits another low Indian Rupee Hits Record Low Despite Robust Economic Growth
SHARE

ನವದೆಹಲಿ: ಮಧ್ಯಪ್ರಾಚ್ಯದಲ್ಲಿ(Middle East War) ನಡೆಯುತ್ತಿರುವ ಯುದ್ಧದಿಂದ ದಿನೇ ದಿನೇ ಡಾಲರ್‌ ಮುಂದೆ ಪಲ್ಟಿಯಾಗುತ್ತಿರುವ ರೂಪಾಯಿ ಮೌಲ್ಯವನ್ನು (Rupee Value) ವೃದ್ಧಿಸಲು ಆರ್‌ಬಿಐ (RBI) ಮಧ್ಯಪ್ರವೇಶ ಮಾಡಿದರೂ ಮತ್ತೆ ಕುಸಿದಿದೆ. ಇದೇ ಮೊದಲ ಬಾರಿಗೆ 1 ಡಾಲರ್‌ (Dollar) ಮೌಲ್ಯ 95 ರೂ.ಗಳ ಗಡಿಯನ್ನು ದಾಟಿದೆ.

ಕಳೆದ ಶುಕ್ರವಾರ(ಮಾ.27) ಎಲ್ಲಾ ಬ್ಯಾಂಕುಗಳು (Bank) ಪ್ರತಿ ವ್ಯವಹಾರದ ದಿನದ ಅಂತ್ಯಕ್ಕೆ ತಮ್ಮ Net Open Position in Rupee – NOP-INR ಗರಿಷ್ಠ 100 ಮಿಲಿಯನ್ ಡಾಲರ್‌ಗೆ ಮಿತಿಗೊಳಿಸಬೇಕು ಎಂದು ನಿರ್ದೇಶನ ನೀಡಿದೆ. ಈ ಹೊಸ ನಿಯಮವನ್ನು ಪಾಲಿಸಲು ಬ್ಯಾಂಕ್‌ಗಳಿಗೆ ಏಪ್ರಿಲ್ 10 ರವರೆಗೆ ಗಡುವು ನೀಡಲಾಗಿದೆ.

ಏರಿಕೆಯಾಗಿ ಕುಸಿದ ರೂಪಾಯಿ:
ಆರ್‌ಬಿಐ ಈ ನಿರ್ಧಾರದ ಬೆನ್ನಲ್ಲೇ ರೂಪಾಯಿ ಮೌಲ್ಯ ಇಂದು ಬೆಳಗ್ಗೆ ಸುಮಾರು 1 ರೂಪಾಯಿ 30 ಪೈಸೆ ಏರಿಕೆಯಾಗಿ 93.59 ಕ್ಕೆ ತಲುಪಿತ್ತು. ಬೆಳಗ್ಗೆ ಏರಿಕೆಯಾಗಿದ್ದರೆ ನಂತರ ರೂಪಾಯಿ ಮೌಲ್ಯ ಕುಸಿಯಲು ಆರಂಭವಾಯಿತು. ಮಧ್ಯಾಹ್ನ 3 ಗಂಟೆಯ ವೇಳೆಗೆ 1 ಡಾಲರ್‌ ಮುಂದೆ 95.13 ರೂ.ನಲ್ಲಿ ವ್ಯವಹಾರ ನಡೆಸುತ್ತಿತ್ತು. ಡಾಲರ್‌ ಮುಂದೆ ರೂಪಾಯಿ ಮೌಲ್ಯ 95 ಡಾಲರ್‌ಗೆ ಕುಸಿದಿರುವುದು ಇದೇ ಮೊದಲು. ಇದನ್ನೂ ಓದಿ: ಕುವೈತ್‌ ಮೇಲೆ ಇರಾನ್‌ ದಾಳಿ – ವಿದ್ಯುತ್‌ ಸ್ಥಾವರದಲ್ಲಿದ್ದ ಭಾರತೀಯ ಕಾರ್ಮಿಕ ಸಾವು

Rupee Value dollar down

 

ಆರ್‌ಬಿಐ ಕೈಗೊಂಡ ಕ್ರಮ ಏನು?
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಬ್ಯಾಂಕ್‌ಗಳು ಊಹಾಪೋಹದ ವಹಿವಾಟು ನಡೆಯುತ್ತಿರುತ್ತದೆ. ರೂಪಾಯಿ ಮೌಲ್ಯದ ಮೇಲೆ ನಡೆಯುವ ಊಹಾಪೋಹದ ವಹಿವಾಟುಗಳಿಗೆ (Speculation) ಕಡಿವಾಣ ಹಾಕಲಾಗಿದೆ.

ಈ ಮೊದಲು ಬ್ಯಾಂಕ್‌ಗಳ ಮಂಡಳಿಗಳೇ ತಮ್ಮ ಬಂಡವಾಳದ 25% ವರೆಗೆ ಈ ಮಿತಿಯನ್ನು ನಿಗದಿಪಡಿಸಿಕೊಳ್ಳಲು ಅವಕಾಶವಿತ್ತು. ಇದರಿಂದ ದೊಡ್ಡ ಬ್ಯಾಂಕ್‌ಗಳು ಶತಕೋಟಿ ಡಾಲರ್‌ಗಳವರೆಗೆ ವಹಿವಾಟು ನಡೆಸುತ್ತಿದ್ದವು. ಈಗ ಎಲ್ಲಾ ಬ್ಯಾಂಕ್‌ಗಳಿಗೂ ಸಮಾನವಾಗಿ 100 ದಶಲಕ್ಷ  ಡಾಲರ್‌ನ ಕಠಿಣ ಮಿತಿಯನ್ನು ಹೇರಲಾಗಿದೆ. ಇದರ ಅರ್ಥ ಒಂದು ಬ್ಯಾಂಕ್ ತನ್ನಲ್ಲಿ ಇಟ್ಟುಕೊಳ್ಳಬಹುದಾದ ಒಟ್ಟು ವಿದೇಶಿ ಕರೆನ್ಸಿಯ (ಮುಖ್ಯವಾಗಿ ಡಾಲರ್) ನಿವ್ವಳ ಮೌಲ್ಯವು ದಿನದ ಅಂತ್ಯಕ್ಕೆ 100 ಮಿಲಯನ್‌ ಡಾಲರ್‌ ದಾಟುವಂತಿಲ್ಲ.

ಈಗ ಮಿತಿಯನ್ನು ನಿಗದಿ ಪಡಿಸಿದ್ದರಿಂದ ಬ್ಯಾಂಕ್‌ಗಳು ತಮ್ಮಲ್ಲಿರುವ ಹೆಚ್ಚುವರಿ ಡಾಲರ್‌ಗಳನ್ನು ಮಾರಾಟ ಮಾಡಬೇಕಾಗುತ್ತದೆ. ಈ ನಿರ್ಧಾರದಿಂದ ಮಾರುಕಟ್ಟೆಯಲ್ಲಿ ಡಾಲರ್ ಪೂರೈಕೆ ಹೆಚ್ಚಾಗಿ ರೂಪಾಯಿ ಮೌಲ್ಯ ಸ್ಥಿರಗೊಳ್ಳಬಹುದು ಎಂಬ ಲೆಕ್ಕಾಚಾರವನ್ನು ಹಾಕಲಾಗಿದೆ.

ಈ ಹಠಾತ್ ಬದಲಾವಣೆಯಿಂದ ಬ್ಯಾಂಕ್‌ಗಳಿಗೆ ಅಲ್ಪಾವಧಿಯ ನಷ್ಟ (Mark-to-market losses) ಉಂಟಾಗಬಹುದು ಎಂದು ಆತಂಕ ವ್ಯಕ್ತವಾಗಿದೆ. ಬ್ಯಾಂಕುಗಳು ಏಪ್ರಿಲ್ 10 ರೊಳಗೆ ಈ ಮಿತಿಯನ್ನು ತಲುಪಬೇಕಾಗಿರುವುದರಿಂದ ಸುಮಾರು 18 ಶತಕೋಟಿ ಡಾಲರ್‌ನಿಂದ 30 ಶತಕೋಟಿ ಡಾಲರ್‌ವರೆಗಿನ ಹೆಚ್ಚುವರಿ ಡಾಲರ್‌ಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕಾಗುತ್ತದೆ. ಇದನ್ನೂ ಓದಿ: ಅಮೆರಿಕದ 2800 ಕೋಟಿ ಮೌಲ್ಯದ ʻಆಕಾಶದ ಕಣ್ಣʼನ್ನೇ ಕಿತ್ತ ಇರಾನ್‌ – ವಿಮಾನ 2 ಹೋಳು

ಬ್ಯಾಂಕ್‌ಗಳು ತಾವು ಹೊಂದಿರುವ ಡಾಲರ್ ಒಪ್ಪಂದಗಳನ್ನು ಅವಧಿಗೆ ಮುನ್ನವೇ ಮುಕ್ತಾಯಗೊಳಿಸಬೇಕಾದ ಕಾರಣ (Mark-to-market losses) ಸುಮಾರು 4,000 ಕೋಟಿ ರೂ. ವರೆಗೆ ನಷ್ಟ ಉಂಟಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಈ ನಿಯಮವನ್ನು ಜಾರಿಗೊಳಿಸಲು ಕನಿಷ್ಠ 3 ತಿಂಗಳ ಕಾಲಾವಕಾಶ ನೀಡಬೇಕೆಂದು ಬ್ಯಾಂಕ್‌ಗಳು ಆರ್‌ಬಿಐಗೆ ಮನವಿ ಮಾಡಿವೆ ಎಂದು ವರದಿಯಾಗಿದೆ.
TAGGED:bankDollarIran Warrbirupeeಆರ್‍ಬಿಐಇರಾನ್‌ ಯುದ್ಧಡಾಲರ್ಬ್ಯಾಂಕ್ರೂಪಾಯಿ
Share This Article
Facebook Whatsapp Whatsapp Telegram

Cinema news

Rishabh Shetty
Chandanavana Film Critics Awards 2026 | ರಿಷಬ್ ಅತ್ಯುತ್ತಮ ನಟ, ಆಶಿಕಾ ರಂಗನಾಥ್ ಅತ್ಯುತ್ತಮ ನಟಿ
Bengaluru City Cinema Latest Sandalwood Top Stories
lyari in pakistan dhurandhar
ಧುರಂಧರ್‌ ಸಿನಿಮಾದಲ್ಲಿ ನಮಗೆ 500 ಕೋಟಿ ಕೊಡಿ – ಹಿಟ್‌ ಬೆನ್ನಲ್ಲೇ ಪಾಲು ಕೇಳಿದ ಪಾಕ್‌
Cinema Latest Top Stories
Vijay Deverakonda Rashmika Mandanna
ಮದ್ವೆ ಬಳಿಕ ಬಳಿಕ ಒಟ್ಟಿಗೆ ಶೂಟಿಂಗ್‌ಗೆ ತೆರಳಿದ ವಿರೋಶ್ ಜೋಡಿಗೆ ಅದ್ಧೂರಿ ಸ್ವಾಗತ
Cinema Latest Sandalwood South cinema Top Stories
Amita Singh Tomar
ಕೌನ್ ಬನೇಗಾ ಕರೋಡ್ ಪತಿಯಲ್ಲಿ 50 ಲಕ್ಷ ಗೆದ್ದಿದ್ದ ತಹಶೀಲ್ದಾರ್ ಅರೆಸ್ಟ್‌!
Cinema Crime Latest National Top Stories TV Shows

You Might Also Like

Badravati Bus Accident
Crime

ಸೇತುವೆಯಿಂದ ಹಳ್ಳಕ್ಕೆ ಜಿಗಿದ ಬಸ್‌ – ಮೂವರ ಕೈಕಾಲು ಮುರಿತ, ಹಲವರಿಗೆ ಗಾಯ

Public TV
By Public TV
3 minutes ago
Rupee hits another low Indian Rupee Hits Record Low Despite Robust Economic Growth
Latest

ಆರ್‌ಬಿಐ ನಿರ್ಧಾರದಿಂದ ಏರಿಕೆಯಾಗಿ ಮತ್ತೆ ಡಾಲರ್‌ ಮುಂದೆ ಪಲ್ಟಿ – ಫಸ್ಟ್‌ ಟೈಂ 95 ರೂ.ಗೆ ಕುಸಿದ ಮೌಲ್ಯ

Public TV
By Public TV
5 minutes ago
Flight Seat
Latest

ಏ.20ರಿಂದ ವಿಮಾನದ 60% ಸೀಟುಗಳ ಆಯ್ಕೆ ಫ್ರೀ ಆದೇಶ ಜಾರಿ: ಡಿಜಿಸಿಎ

Public TV
By Public TV
7 minutes ago
A young man committed suicide in Tarikere Chikkamagaluru
Chikkamagaluru

ಕೌಟುಂಬಿಕ ಕಲಹ – ಆಂಧ್ರ ಮೂಲದ ಯುವಕ ತರೀಕೆರೆಯಲ್ಲಿ ಆತ್ಮಹತ್ಯೆ

Public TV
By Public TV
28 minutes ago
Raichuru Dowry Death
Crime

ಗೃಹಿಣಿ ಅನುಮಾನಾಸ್ಪದ ಸಾವು – ಪತಿ ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ

Public TV
By Public TV
54 minutes ago
Mysuru Child Death After Eating Hibiscus Flower
Crime

ಒಣಗಿದ ದಾಸವಾಳ ನುಂಗಿ 6 ತಿಂಗಳ ಮಗು ಸಾವು

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?