ಬೆಂಗಳೂರು/ಮೈಸೂರು: ಕಳೆದ ಮೂರು ದಿನಗಳ ಹಿಂದೆಯಷ್ಟೇ ಸಿಟಿ ಸಿವಿಲ್ ಕೋರ್ಟ್ (City Civil Court) ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ವಿರುದ್ಧ ಮಾತನಾಡದಂತೆ ಎಚ್ಚರಿಕೆ ಕೊಟ್ಟಿತ್ತು. ಇದಾದ ಬಳಿಕವೂ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ (D Roopa), ಸಿಂಧೂರಿ ವಿರುದ್ಧ ಗುಡುಗಿದ್ದಾರೆ.
ರೋಹಿಣಿ ವಿರುದ್ಧ ಸಾಲು ಸಾಲು ಆರೋಪಗಳನ್ನ ಮಾಡಿ ಮತ್ತೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರೋಹಿಣಿ ವಿರುದ್ಧ ರೂಪಾ ಮಾತನಾಡಬಾರದು- ಕೋರ್ಟ್ ಆದೇಶ
ರೂಪಾ ಫೇಸ್‌ಬುಕ್ ಪುಟದಲ್ಲೇನಿದೆ?
ಮಾನ್ಯ ಎಂಪಿ ಅವರ ಪ್ರಕಾರ ಡಿಸಿಯಾಗಿದ್ದ ರೋಹಿಣಿ ಸಿಂಧೂರಿ ಕೋವಿಡ್ ಸಮಯದಲ್ಲಿ ಮರಣದ ಸಂಖ್ಯೆ ಮುಚ್ಚಿಟ್ಟವರು ಯಾರು? ಯಾಕೆ? ಮತ್ತೆ ಇದರ ಮೇಲೆ ಕ್ರಮ ಆಯಿತೇ? ಇದನ್ನೂ ಓದಿ: ಕ್ಷಮೆ ಕೇಳದಿದ್ದರೆ 1 ಕೋಟಿ ರೂ. ಮಾನನಷ್ಟ ಕೇಸ್ – ರೂಪಾಗೆ ರೋಹಿಣಿ ಎಚ್ಚರಿಕೆ
ಮೈಸೂರು ಎಟಿಐ (Mysuru ATI) ನಿಂದ ರೋಹಿಣಿ ಸಿಂಧೂರಿ ಅವರು ಸರ್ಕಾರಿ ಸಾಮಾನುಗಳನ್ನ ತಗೆದುಕೊಂಡು ಹೋದದ್ದು, ಅವುಗಳು ಡಿಸಿ ಮನೆಯಲ್ಲಿ ಕೂಡ ಇಲ್ಲ ಎಲ್ಲಿ ಹೋದವು? ಸಿಂಧೂರಿ ಅವರಿಗೆ ನೋಟಿಸ್ ಜಾರಿ ಮಾಡಿದ್ದು ವರದಿಯಾಗಿದೆ. ಇದರ ಮೇಲೆ ಕ್ರಮ ಆಯಿತೇ? ಸರ್ಕಾರಿ ವಸ್ತು 50 ರೂಪಾಯಿ ಇರಲಿ 50 ಕೋಟಿ ಇರಲಿ ತಪ್ಪು ತಪ್ಪೇ. 1,000 ರೂ. ಲಂಚ ತಗೆದುಕೊಂಡವರೂ ಕೂಡ ಲೋಕಾಯುಕ್ತ ವಿಚಾರಣೆಗೆ ಒಳಗಾಗಿದ್ದಾರೆ. ಕಾನೂನು ಡಿಸಿಗೂ ಗುಮಾಸ್ತನಿಗೂ ಒಂದೇ ಎಂದು ಬರೆದುಕೊಂಡಿದ್ದಾರೆ.