ಬೀದರ್: ಟ್ರಾಫಿಕ್ ನಿಯಮಗಳ (Traffic Rules) ಕುರಿತು ಅರಿವು ಮೂಡಿಸಲು ಬೀದರ್ ಪೊಲೀಸ್ (Bidar Police) ಇಲಾಖೆಯಿಂದ ಇಂದು ರನ್ ಫಾರ್ ರೋಡ್ ಸೆಫ್ಟಿ (Run For Road Safety) ಬೃಹತ್ ಅಭಿಯಾನ ನಡೆಯಿತು.
ಎಸ್‌ಪಿ ಚೆನ್ನಬಸವಣ್ಣ ಲಂಗೋಟಿ ಹಾಗೂ ಡಿಸಿ ಗೋವಿಂದ್ ರೆಡ್ಡಿ ಅಭಿಯಾನಕ್ಕೆ ಹಸಿರು ನಿಶಾನೆ ಹಾಗೂ ಹೂ ಸುರಿಸುವ ಮೂಲಕ ಚಾಲನೆ ನೀಡಿದರು. ಇದನ್ನೂ ಓದಿ: ಆಟವಾಡುತ್ತಾ ಆಟಿಕೆಯ LED ಬಲ್ಬ್ ನುಂಗಿದ 9 ತಿಂಗಳ ಕಂದಮ್ಮ!
Advertisement
ಬೀದರ್‌ನ ಐತಿಹಾಸಿಕ ಕೋಟೆಯಲ್ಲಿ ಪ್ರಾರಂಭವಾದ ಅಭಿಯಾನ ಸಿದ್ದಾರ್ಥ ಕಾಲೇಜ್, ಮಡಿವಾಳ ವೃತ್ತ, ಹೊಸ ಬಸ್ ನಿಲ್ದಾಣ, ಬಸವೇಶ್ವರ ವೃತ್ತದ ಮೂಲಕ ಮತ್ತೆ ಕೋಟೆಯಲ್ಲಿ ಕೊನೆಯಾಯಿತು.
Advertisement
Advertisement
ಕಳೆದ ವರ್ಷ ಹೆಲ್ಮೆಟ್ ಹಾಕದೇ 332 ಜನ ಸವಾರರು ಸಾವನ್ನಪ್ಪಿದ್ದು ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ರೋಡ್ ಸೆಫ್ಟಿ ಅಭಿಯಾನ ಮಾಡಿ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದರು. ಈ ಅಭಿಯಾನದಲ್ಲಿ ವಿದ್ಯಾರ್ಥಿಗಳು, ಪೊಲೀಸರು, ಅಧಿಕಾರಿಗಳು, ಯುವಕರು, ಮಹಿಳೆಯರು ಸೇರಿದಂತೆ 5 ಸಾವಿರಕ್ಕೂ ಅಧಿಕ ಜನ ಭಾಗಿಯಾಗಿದ್ದರು.
Advertisement
Web Stories