ಚಂಡೀಗಢ: ನಿಮ್ಮ ಬಳಿ ಸ್ಮಾರ್ಟ್ ಫೋನ್ (Smart Phone) ಇಲ್ವಾ ಹಾಗಾದ್ರೆ ನಿಮಗೆ ಎಕ್ಸ್-ರೇ ಪ್ರಿಂಟ್ ಕೂಡಾ ಸಿಗಲ್ಲ. ಹೀಗಂತ ಹೇಳಿ ರೋಗಿಗಳ ಸ್ಮಾರ್ಟ್ ಫೋನ್‌ಗಳಲ್ಲಿಯೇ ಎಕ್ಸ್-ರೇ (X-Ray) ಫೋಟೋವನ್ನು ಆಸ್ಪತ್ರೆ ಸಿಬ್ಬಂದಿ ಕ್ಲಿಕ್ಕಿಸಿ ಕೊಟ್ಟ ವಿಚಿತ್ರ ಘಟನೆ ಪಂಜಾಬ್‌ನ (Punjab) ಸರ್ಕಾರಿ ಆಸ್ಪತ್ರೆಯಲ್ಲಿ (Govt Hospital) ನಡೆದಿದೆ.
ಪಂಜಾಬ್‌ನ ಪಟಿಯಾಲದಲ್ಲಿ (Patiala) ಸರ್ಕಾರಿ ಮಾತಾ ಕೌಶಲ್ಯ ಆಸ್ಪತ್ರೆಯಲ್ಲಿ ಸಿಬ್ಬಂದಿ ರೋಗಿಳ ಎಕ್ಸ್-ರೇ ಫೋಟೋಗಳನ್ನು ಅವರ ಫೋನ್‌ಗಳಲ್ಲಿಯೇ ಕ್ಲಿಕ್ಕಿಸಿ ಕೊಟ್ಟಿದ್ದಾರೆ. ಎಕ್ಸ್-ರೇಯ ಪ್ರಿಂಟ್ ಕೊಡಿ ಎಂದರೆ, ಅವರು ರೋಗಿಗಳ ಬಳಿ ಎಕ್ಸ್-ರೇ ಫಿಲ್ಮ್ ಖಾಲಿಯಾಗಿದೆ ಎಂದು ಕಾರಣ ಹೇಳಿದ್ದಾರೆ. ಇದನ್ನೂ ಓದಿ: ರಾಜಸ್ಥಾನ ಕಾಂಗ್ರೆಸ್‍ನಲ್ಲಿ ರಾಜಕೀಯ ಬಿಕ್ಕಟ್ಟು – ಅಧಿಕಾರ ಹಿಡಿಯುತ್ತಾ ಬಿಜೆಪಿ?
Advertisement
Advertisement
ವಿಪರ್ಯಾಸವೆಂದರೆ ಪಂಜಾಬ್‌ನ ಆರೋಗ್ಯ ಸಚಿವ ಚೇತನ್ ಸಿಂಗ್ ಅವರ ತವರೂರು ಆಗಿರುವ ಪಟಿಯಾಲದಲ್ಲಿಯೇ ಇಂತಹ ವಿಚಿತ್ರ ಘಟನೆ ನಡೆದಿದೆ. ಮಾತ್ರವಲ್ಲದೇ ಈ ಘಟನೆ ನಡೆಯುವುದಕ್ಕೂ 2 ದಿನ ಮೊದಲು ಅವರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದರು ಎನ್ನಲಾಗಿದೆ. ಇದನ್ನೂ ಓದಿ: BBMP ಹೊಸ ಪ್ಲಾನ್ – ರಸ್ತೆ ಗುಂಡಿ ಮುಚ್ಚಲು ಆ್ಯಪ್ ಬಳಕೆ
Advertisement
ಇಷ್ಟೆಲ್ಲಾ ಅವ್ಯವಸ್ಥೆ ಇದ್ದರೂ ತಲೆಯೇ ಕೆಡಿಸಿಕೊಳ್ಳದ ಆಸ್ಪತ್ರೆಯ ಅಧಿಕಾರಿಗಳು, ನಾವು ರೋಗಿಗಳೊಂದಿಗೆ ಸಹಾನುಭೂತಿಯಿಂದಲೇ ವರ್ತಿಸುತ್ತೇವೆ. ಅವರ ಬಳಿ ಸ್ಮಾರ್ಟ್ ಫೋನ್ ಇಲ್ಲದೇ ಹೋದರೂ ನಮ್ಮ ಎಕ್ಸ್-ರೇ ವಿಭಾಗದಿಂದ ಸಿಬ್ಬಂದಿ ನೇರವಾಗಿ ಸಂಬಂಧಪಟ್ಟ ವೈದ್ಯರಿಗೆ ಎಕ್ಸ್-ರೇ ಫೋಟೋಗಳನ್ನು ಕಳುಹಿಸುತ್ತಾರೆ. ಇದು ರೋಗಿಗಳ ಹಣವನ್ನೂ ಉಳಿಸುತ್ತದೆ ಎಂದು ವೈದ್ಯಕೀಯ ಅಧೀಕ್ಷಕ ಡಾ. ಸಂದೀಪ್ ಕೌರ್ ಹೇಳಿದ್ದಾರೆ. ಆದರೆ ಆಸ್ಪತ್ರೆಯ ದುಸ್ಥಿತಿಗೆ ಜನರು ಹೈರಾಣಾಗಿದ್ದಾರೆ.