ಬೆಂಗಳೂರು: ವಿ. ಸೋಮಣ್ಣ (V Somanna) ಅವರು ಕಾಂಗ್ರೆಸ್ ಎಂಟ್ರಿ ವದಂತಿ ಬೆನ್ನಲ್ಲೇ ಕಾಂಗ್ರೆಸ್‍ನಲ್ಲಿ ಚಟುವಟಿಕೆಗಳು ಗರಿಗೆದರಿವೆ.
ಕಾಂಗ್ರೆಸ್ ನಾಯಕರಿಗೆ ಶಾಸಕರಾದ ಕೃಷ್ಣಪ್ಪ (Krishnappa) ಹಾಗೂ ಪ್ರಿಯಕೃಷ್ಣ (Priya Krishna) ಸಂದೇಶ ರವಾನೆ ಮಾಡಿದ್ದಾರೆ. ಬರುವುದಕ್ಕೆ ನಮ್ಮ ಸಮ್ಮತಿ ಇಲ್ಲ, ಬಂದರೆ ವಿರೋಧವೂ ಇಲ್ಲಾ. ಪಕ್ಷಕ್ಕೆ ಬರುವುದಾದರೆ ವಿಜಯನಗರಕ್ಕೂ, ಗೋವಿಂದರಾಜ ನಗರಕ್ಕೂ ಸೋಮಣ್ಣಗೂ ಕಾಂಗ್ರೆಸ್‍ನಲ್ಲಿ (Congress) ಸಂಬಂಧ ಇರಬಾರದು. ಇದನ್ನು ಮೀರಿದರೆ ನಮ್ಮ ನಿರ್ಧಾರ ಬೇರೆ ಇರುತ್ತದೆ ಎಂದು ಅಪ್ಪ-ಮಗ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸೋಮಣ್ಣ ಕಾಂಗ್ರೆಸ್ ಎಂಟ್ರಿ ವದಂತಿ ಬೆನ್ನಲ್ಲೆ ಕಾಂಗ್ರೆಸ್‍ನಲ್ಲಿ ಅಸಮಧಾನವೂ ವ್ಯಕ್ತವಾಗಿದೆ ಎನ್ನಲಾಗಿದೆ. ಸೋಮಣ್ಣ ಬರುವುದಕ್ಕೆ ನಮ್ಮ ಸಮ್ಮತಿ ಇಲ್ಲ. ಒಂದು ವೇಳೆ ಅವರು ಬಂದರೆ ವಿರೋಧವೂ ಇಲ್ಲ ಎಂದು ಹೇಳಿಕೆ ನಿಡಿವ ಮೂಲಕ ಕೈ ನಾಯಕರನ್ನೇ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬೆಂಗಳೂರು ಕಂಬಳದಲ್ಲಿ ಜೈ ತುಳುನಾಡು ಪುತ್ತೂರು ಬೊಟ್ಯಾಡಿ ಕಿಶೋರ್ ಭಂಡಾರಿ ಕೋಣಗಳು ಜಯ
ನಮ್ಮ ಕ್ಷೇತ್ರಕ್ಕೂ ಅವರಿಗೂ ಯಾವುದೇ ಸಂಬಂಧ ಇರಬಾರದು. ಇದನ್ನ ಮೀರಿದ್ರೆ ನಮ್ಮ ನಿರ್ಧಾರ ಬೇರೆಯೇ ಇರುತ್ತದೆ ಎಂದು ಎಚ್ಚರಿಸಿದ್ದಾರೆ. ಒಟ್ಟಾರೆ ಸೋಮಣ್ಣ ಎಪಿಸೋಡ್ ರಾಜ್ಯ ಕಾಂಗ್ರೆಸ್‍ನಲ್ಲಿ ಹೊಸ ವಿವಾದವೊಂದನ್ನ ಹುಟ್ಟು ಹಾಕುವ ಎಲ್ಲಾ ಲಕ್ಷಣಗಳು ಕಾಣತೊಡಗಿವೆ.