ಶಿವಮೊಗ್ಗ: ಇರಾನ್ – ಇಸ್ರೇಲ್ ನಡುವೆ ಯುದ್ಧ (Iran-Israel War) ಮುಂದುವರಿದ ಪರಿಣಾಮ ಶಿವಮೊಗ್ಗದ (Shivamogga) ರಿಪ್ಪನ್‌ಪೇಟೆಯಲ್ಲಿ (Ripponpet) ಪೆಟ್ರೋಲ್ ಕೊರತೆ ವದಂತಿ ಹರಡಿದ್ದು, ಪೆಟ್ರೋಲ್ – ಡೀಸೆಲ್ (Petrol- Diesel) ಖರೀದಿಗೆ ಜನರು ಮುಗಿಬಿದ್ದಿದ್ದಾರೆ.
ಶಿವಮೊಗ್ಗದ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದ 3 ಪೆಟ್ರೋಲ್ ಬಂಕ್‌ನಲ್ಲಿ (Petrol Bunk) ಇಂಧನ ಖಾಲಿ ಹಿನ್ನೆಲೆ ರಿಪ್ಪನ್‌ಪೇಟೆಯಲ್ಲಿ ಪೆಟ್ರೋಲ್ ಕೊರತೆ ವದಂತಿ ಹರಡಿತ್ತು. ಈ ಹಿನ್ನೆಲೆ ಇಂದನ ಲಭ್ಯವಿದ್ದ ಹೆಚ್‌ಪಿ ಪೆಟ್ರೋಲ್ ಬಂಕ್‌ಗೆ ಜನರು ಮುಗಿಬಿದ್ದಿದ್ದಾರೆ. ವಾಹನದ ಜೊತೆಗೆ ಖಾಲಿ ಬಾಟಲ್‌ಗಳನ್ನ ಸಹ ತಂದ ಜನರು ಕ್ಯೂನಲ್ಲಿ ನಿಂತು ವಾಹನ ಹಾಗೂ ಕ್ಯಾನ್‌ಗಳಿಗೆ ಇಂಧನ ಭರ್ತಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ದಾಟಲು ಇರಾನ್ ಸಮ್ಮತಿ – ಭಾರತಕ್ಕೆ ಬರಲಿವೆ ಇನ್ನೆರಡು LPG ಟ್ಯಾಂಕರ್

ವದಂತಿ ಹರಡಿದ ಬೆನ್ನಲ್ಲೇ ಇಂಧನ ಕೊರತೆಯಿಲ್ಲ, ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಬಂಕ್ ಮಾಲೀಕರು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಯುಗಾದಿ ಕರಿ: ಹೋಳಿಯಾಡಿ ಸ್ನಾನಕ್ಕೆ ತೆರಳಿದ್ದ ಇಬ್ಬರು ನೀರುಪಾಲು

