ಇತ್ತೀಚೆಗಷ್ಟೇ ಪತಿಯನ್ನು ಕಳೆದುಕೊಂಡಿರುವ ನಟಿ ಮೀನಾಗೆ ವದಂತಿಗಳ ಮೇಲೆ ವದಂತಿಗಳು ಕಾಡುತ್ತಿವೆ. ಅವರು ಪತಿಯನ್ನು ಕಳೆದುಕೊಂಡಿದ್ದು ಪಾರಿವಾಳದಿಂದ ಉಂಟಾದ ಸೋಂಕಿನಿಂದ ಅಂತಾಯಿತು. ಕೋವಿಡ್ ಅವರನ್ನು ತುಂಬಾ ಬಾಧಿಸಿತು ಎಂದೂ ಹೇಳಲಾಯಿತು. ಇದೀಗ ಮೀನಾ ಮತ್ತು ದಂಪತಿಯ ಕುರಿತು ಮತ್ತೊಂದು ಸುದ್ದಿ ಹರಿದಾಡುತ್ತಿದೆ. ನೂರಾರು ಕೋಟಿ ಆಸ್ತಿ ಹೊಂದಿದ್ದ ಮೀನಾ ಪತಿ ವಿದ್ಯಾ ಸಾಗರ್ ಹೆಂಡತಿಗಾಗಿ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ ಎಂದು ಹೇಳಲಾಗುತ್ತಿದೆ.
ತಮಿಳಿನ ಅನೇಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ವಿದ್ಯಾಸಾಗರ್ ಅವರು 250 ಕೋಟಿಗೂ ಅಧಿಕ ಆಸ್ತಿಯನ್ನು ಮಗಳ ಹೆಸರಿನಲ್ಲಿ ವಿಲ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ವಿಲ್ ನಲ್ಲಿ ಮಗಳು ನೀನಿಕಾ ಹೆಸರು ಉಲ್ಲೇಖಿಸಿ, ವಯಸ್ಸಿನ ನಂತರ ಈ ಆಸ್ತಿಯನ್ನು ಮಗಳು ಮತ್ತು ಅವಳ ಪತಿಯು ಹೊಂದತಕ್ಕದ್ದು ಎಂದು ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಆಗಸ್ಟ್ ಮೂರನೇ ವಾರದಲ್ಲಿ ರವಿಚಂದ್ರನ್ ಪುತ್ರನ ಮದುವೆ: ಹಸೆಮಣೆ ಏರಲು ಮನೋರಂಜನ್ ಸಿದ್ಧತೆ
ಆದರೆ, ಕೆಲವರು ಈ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ. ವಿದ್ಯಾ ಸಾಗರ್ ಅವರು ಪತ್ನಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಹಾಗಾಗಿ ಅವರು ಹಾಗೆ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಲು ಮೀನಾ ಶಕ್ತರಾಗಿಲ್ಲ. ಪತಿಯನ್ನು ಕಳೆದುಕೊಂಡ ನೋವಿನಲ್ಲಿರುವ ಅವರು ಮೊನ್ನೆಯಷ್ಟೇ ನನ್ನ ಖಾಸಗಿ ಬದುಕನ್ನೂ ಗೌರವಿಸಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿದ್ದರು. ಆದರೂ, ವದಂತಿಗಳೂ ಮಾತ್ರ ಇನ್ನೂ ನಿಂತಿಲ್ಲ.