ನವದೆಹಲಿ: ಭಾರತದ ಮಾಜಿ ಟೆನ್ನಿಸ್ (Tennis) ತಾರೆ ಸಾನಿಯಾ ಮಿರ್ಜಾ (Sania Mirza) ಹಾಗೂ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ (Shoaib Malik) ಎರಡೂ ದೇಶಗಳಲ್ಲಿ ಅತಿ ಹೆಚ್ಚು ಚರ್ಚೆಗೊಳಗಾದ ಜೋಡಿ ಎಂದರೆ ತಪ್ಪಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ದಂಪತಿ ದೂರವಾಗುತ್ತಿರುವ ಬಗ್ಗೆ ಭಾರೀ ಅನುಮಾನ ಹುಟ್ಟಿಕೊಂಡಿದೆ. ಸಾನಿಯಾ ಮಿರ್ಜಾ ಇತ್ತೀಚೆಗೆ ಹಂಚಿಕೊಂಡ ಪೋಸ್ಟ್ ಒಂದು ಅವರಿಬ್ಬರ ವಿಚ್ಛೇದನದ (Divorce) ಬಗ್ಗೆ ಭಾರೀ ಚರ್ಚೆಗೆ ಕಾರಣವಾಗಿದೆ.
Advertisement
ಹೌದು, ಸಾನಿಯಾ ಹಾಗೂ ಶೋಯೆಬ್ 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಆದರೆ ಸಾನಿಯಾ ಭಾರತೀಯಳಾಗಿದ್ದು (Indian), ಶೋಯೇಬ್ ಪಾಕಿಸ್ತಾನಿ (Pakistani) ಎಂಬ ವಿಚಾರಕ್ಕೆ ವಿವಾದವೂ ಉಂಟಾಗಿತ್ತು. 12 ವರ್ಷಗಳ ದಾಂಪತ್ಯ ಜೀವನದ ಬಳಿಕ ಇದೀಗ ಅವರಿಬ್ಬರ ನಡುವೆ ಬಿರುಕು ಬಿದ್ದಿರುವ ಬಗ್ಗೆ ವರದಿಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾನಿಯಾ ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ಒಗಟಿನ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ‘ಒಡೆದ ಹೃದಯಗಳು ಎತ್ತ ಸಾಗುತ್ತಿವೆ? ಅಲ್ಲನನ್ನು ಹುಡುಕಲು’ ಎಂದು ಬರೆದಿದ್ದಾರೆ.
Advertisement
Advertisement
12 ವರ್ಷಗಳ ಹಿಂದೆ ಜೋಡಿಗಳು ತಮ್ಮ ನಿಶ್ಚಿತಾರ್ಥದ ಬಗ್ಗೆ ಘೋಷಣೆ ಮಾಡಿದಾಗ ಭಾರೀ ಚರ್ಚೆಗೆ ಕಾರಣರಾಗಿದ್ದರು. ಭಾರತವನ್ನು ಪ್ರತಿನಿಧಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಟೆನ್ನಿಸ್ ತಾರೆ ಪಾಕಿಸ್ತಾನಿಯನ್ನು ಯಾಕೆ ಮದುವೆಯಾಗಬೇಕೆಂಬ ಟೀಕೆಗಳೂ ಹರಿದಿತ್ತು. ಆದರೆ ಇದೀಗ ಇವರಿಬ್ಬರ ವಿಚ್ಛೇದನದ ಬಗ್ಗೆ ವರದಿಯಾಗಿದ್ದು, ಮತ್ತೆ ಟೀಕೆಗೊಳಗಾಗುತ್ತಿದ್ದಾರೆ. ಇದನ್ನೂ ಓದಿ: ಈಗಿನ ಶಿಕ್ಷಣದ ಹೊಸ ಟ್ರೆಂಡ್ ಏನು? – ಪಬ್ಲಿಕ್ ಟಿವಿ ‘ವಿದ್ಯಾ ಮಂದಿರ’ಕ್ಕೆ ಬನ್ನಿ ಮಾಹಿತಿ ಪಡೆಯಿರಿ
Advertisement
ಸಾನಿಯಾ ಹಾಗೂ ಶೋಯೆಬ್ ಬೇರ್ಪಡುತ್ತಿರುವ ಬಗ್ಗೆ ಪಾಕಿಸ್ತಾನದಲ್ಲೂ ವದಂತಿಗಳು ಹಬ್ಬಿವೆ. ಆದರೆ ಈ ಬಗ್ಗೆ ದಂಪತಿ ಸಾರ್ವಜನಿಕವಾಗಿ ಎಲ್ಲಿಯೂ ಮಾತನಾಡಿಲ್ಲ. ಒಂದು ವೇಳೆ ದಂಪತಿ ನಿಜವಾಗಿಯೂ ಬೇರ್ಪಟ್ಟರೆ ಮತ್ತೆ ಟೀಕೆಗೆ ಗುರಿಯಾಗುವ ಸಾಧ್ಯತೆಯಿದೆ.
ಸಾನಿಯಾ ಭಾರತದ ಮಾಜಿ ಟೆನಿಸ್ ಆಟಗಾರ್ತಿಯಾಗಿದ್ದು, ಗಮನಾರ್ಹ ಪುರಸ್ಕಾರಗಳನ್ನು ಗೆದ್ದಿದ್ದಲ್ಲದೇ ದೇಶಕ್ಕೆ ಗೌರವವನ್ನು ತಂದುಕೊಟ್ಟಿದ್ದಾರೆ. ಭಾರತದ ಅತ್ಯಂತ ಪ್ರಸಿದ್ಧ ಕ್ರೀಡಾಪಟುಗಳಲ್ಲೊಬ್ಬರಾಗಿರುವ ಇವರು ಇಂದಿಗೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಇದನ್ನೂ ಓದಿ: ಕೆಜಿಎಫ್ ಮ್ಯೂಸಿಕ್ ಬಳಕೆ – ಕಾಂಗ್ರೆಸ್ ಟ್ವಿಟ್ಟರ್ ಖಾತೆ ಬ್ಲಾಕ್ ಮಾಡುವಂತೆ ಕೋರ್ಟ್ ಆದೇಶ