ನವದೆಹಲಿ: ಕುತುಬ್ ಮಿನಾರ್ ಬಳಿ ದೇವಸ್ಥಾನದ ಉತ್ಖನನ ನಡೆಸಲು ಒತ್ತಡ ಕೇಳಿ ಬಂದ ಬೆನ್ನಲೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಾಕೇತ್ ಕೋರ್ಟ್‍ಗೆ ತನ್ನ ವರದಿಯನ್ನು ಸಲ್ಲಿಕೆ ಮಾಡಿದ್ದು ತೀವ್ರ ವಿರೋಧವನ್ನು ವ್ಯಕ್ತಪಡಿಸಿದೆ.
Advertisement
ಕುತುಬ್ ಮಿನಾರ್ 1914 ರಿಂದ ಸಂರಕ್ಷಿತ ಸ್ಮಾರಕವಾಗಿದೆ. ಅದರ ರಚನೆಯನ್ನು ಈಗ ಬದಲಾಯಿಸಲಾಗುವುದಿಲ್ಲ “ಸಂರಕ್ಷಿತ” ಸ್ಥಾನಮಾನವನ್ನು ನೀಡುವ ಸಮಯದಲ್ಲಿ ಅಂತಹ ಆಚರಣೆಯು ಪ್ರಚಲಿತದಲ್ಲಿರಲಿಲ್ಲ. ಈಗ ಸ್ಮಾರಕದಲ್ಲಿ ಆರಾಧನೆಯ ಪುನರುಜ್ಜೀವನವನ್ನು ಅನುಮತಿಸಲಾಗುವುದಿಲ್ಲ ಎಂದು ವರದಿಯಲ್ಲಿ ಎಎಸ್‍ಐ ಉಲ್ಲೇಖಿಸಿದೆ.
Advertisement
Delhi | Saket Court begins hearing on an appeal regarding the restoration of 27 Hindu and Jain temples in the Qutub Minar complex in Mehrauli.
— ANI (@ANI) May 24, 2022
Advertisement
ಕೇಂದ್ರ ಸಂಸ್ಕøತಿ ಸಚಿವಾಲಯವು ತನ್ನ ಉತ್ಖನನ ವರದಿಯನ್ನು ಸಲ್ಲಿಸುವಂತೆ ಎಎಸ್‍ಐಗೆ ಈ ಹಿಂದೆ ತಿಳಿಸಿತ್ತು. ಅಲ್ಲದೇ ಮಸೀದಿಯಿಂದ 15 ಮೀಟರ್ ದೂರದಲ್ಲಿ ಮಿನಾರ್‍ನ ದಕ್ಷಿಣದಲ್ಲಿ ಉತ್ಖನನವನ್ನು ಪ್ರಾರಂಭಿಸಬಹುದು ಎಂದು ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಗೋವಿಂದ್ ಮೋಹನ್ ಅವರು ಮೇ 21 ರಂದು ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡರು. ಇದನ್ನೂ ಓದಿ: 5ರೂ. ಡಾಕ್ಟರ್ ಎಂದೇ ಫೇಮಸ್ ಆಗಿದ್ದ ಶಂಕರೇಗೌಡಗೆ ಹೃದಯಾಘಾತ
Advertisement
ASI filed an affidavit in Saket Court in an interim application related to restoration of temples in Qutub Minar complex
ASI opposes the plea&says Qutub Minar is a monument&no one can claim fundamental right over such a structure&no right to worship can be granted at this place
— ANI (@ANI) May 24, 2022
ಸಂಸ್ಕೃತಿ ಸಚಿವಾಲಯದ ಸೂಚನೆ ಮೇರೆಗೆ ವರದಿ ನೀಡಿರುವ ಎಎಸ್‍ಐ ಹಿಂದೂ ಅರ್ಜಿದಾರರ ಮನವಿಯನ್ನು ಕಾನೂನಾತ್ಮಕವಾಗಿ ನಿರ್ವಹಿಸಲಾಗುವುದಿಲ್ಲ ಎಂದು ಹೇಳಿದೆ. ಕುತುಬ್ ಮಿನಾರ್ ಸಂಕೀರ್ಣವನ್ನು ನಿರ್ಮಿಸಲು ಹಳೆಯ ದೇವಾಲಯಗಳನ್ನು ನಾಶಪಡಿಸುವುದು ಐತಿಹಾಸಿಕ ಸಂಗತಿಯಾಗಿದೆ. ಕುತುಬ್ ಮಿನಾರ್ ಸಂಕೀರ್ಣವು ಜೀವಂತ ಸ್ಮಾರಕವಾಗಿದೆ. ಇದನ್ನು 1914 ರಿಂದ ರಕ್ಷಿಸಲಾಗಿದೆ. ಸಂಕೀರ್ಣದ ಮೇಲೆ ಪೂಜೆ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ಖಡಕ್ ಆಗಿ ಉತ್ತರಿಸಿದೆ.
ಸ್ಮಾರಕವನ್ನು ರಕ್ಷಣೆಯಲ್ಲಿ ಇರಿಸುವ ಸಮಯದಲ್ಲಿ ಯಾವುದೇ ಪೂಜೆಯ ಆಚರಣೆ ಇಲ್ಲವಾದ್ದರಿಂದ ನಾವು ಸಂರಕ್ಷಿತ ಪ್ರದೇಶದ ಸ್ವರೂಪವನ್ನು ಬದಲಾಯಿಸಲು ಸಾಧ್ಯವಿಲ್ಲ. ನಾವು ಈಗ ಪೂಜೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ಎಎಸ್‍ಐ ತಿಳಿಸಿದೆ. ಇದನ್ನೂ ಓದಿ: ಪರಿಷತ್ ಚುನಾವಣೆ – ಶರವಣಗೆ ಜೆಡಿಎಸ್ ಟಿಕೆಟ್
ಈ ತಿಂಗಳ ಆರಂಭದಲ್ಲಿ, ಮಹಾಕಾಲ್ ಮಾನವ್ ಸೇವಾ ಮತ್ತು ಇತರ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಗುರುತಿಸಲ್ಪಟ್ಟ ಕುತುಬ್ ಮಿನಾರ್‍ನಲ್ಲಿ ಭಾರೀ ಪೊಲೀಸ್ ನಿಯೋಜನೆಯ ಮಧ್ಯೆ, ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದ್ದರು. ಐಕಾನಿಕ್ ಸ್ಮಾರಕ ಕುತುಬ್ ಮಿನಾರ್ ‘ವಿಷ್ಣು ಸ್ತಂಭ’ ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿದರು.