‘ಸಪ್ತಸಾಗರದಾಚೆ ಎಲ್ಲೋ’ ನಟಿ ರುಕ್ಮಿಣಿ ವಸಂತ್ (Rukmini Vasanth) ಅವರು ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ತಮಿಳು ನಟ ಶಿವಕಾರ್ತಿಕೇಯನ್ (Sivakarthikeyan) ನಟನೆಯ ಸಿನಿಮಾಗೆ ಕನ್ನಡದ ನಟಿ ರುಕ್ಮಿಣಿ ಹೀರೋಯಿನ್ ಆಗಿ ಆಯ್ಕೆ ಆಗಿದ್ದಾರೆ. ಸಿನಿಮಾ ಮಾಡುವ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕಿರುತೆರೆ ಲೋಕದಲ್ಲಿ ಮತ್ತೊಂದು ಹೊಸ ಧಾರಾವಾಹಿ: ಕಿರಿಮಗಳ ಹಿರಿ ಜವಾಬ್ದಾರಿ ಕಥೆ ಮೈನಾ
Advertisement
ಬೆಂಗಳೂರಿನ ಬೆಡಗಿ ರುಕ್ಮಿಣಿಗೆ ಪರಭಾಷೆಗಳಿಂದ ಬಂಪರ್ ಅವಕಾಶಗಳು ಅರಸಿ ಬರುತ್ತಿವೆ. ವಿಜಯ್ ಸೇತುಪತಿ ಚಿತ್ರದಲ್ಲಿ ರುಕ್ಮಿಣಿ ನಾಯಕಿಯಾಗಿ ನಟಿಸುತ್ತಿರುವಾಗಲೇ ಮತ್ತೊಂದು ಗೋಲ್ಡನ್ ಚಾನ್ಸ್ ಕನ್ನಡದ ನಟಿಗೆ ಸಿಕ್ಕಿದೆ. ಖ್ಯಾತ ನಿರ್ದೇಶಕ ಎ.ಆರ್ ಮುರುಗದಾಸ್ ಮತ್ತು ಶಿವಕಾರ್ತಿಕೇಯನ್ ಕಾಂಬಿನೇಷನ್ ಸಿನಿಮಾದಲ್ಲಿ ನಟಿ ಕಾಣಿಸಿಕೊಳ್ಳಲಿದ್ದಾರೆ.
Advertisement
Advertisement
ಶಿವಕಾರ್ತಿಕೇಯನ್ ನಟನೆಯ 23ನೇ ಚಿತ್ರಕ್ಕೆ ಅದ್ಧೂರಿಯಾಗಿ ಮುಹೂರ್ತ ಸಮಾರಂಭ ನಡೆದಿದೆ. ರುಕ್ಮಿಣಿ ವಸಂತ್, ‘ಜೈಲರ್’ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ. ಈ ಅದ್ಭುತ ತಂಡದಲ್ಲಿ ನಾನು ಭಾಗಿಯಾಗಿರುವುದಕ್ಕೆ ಖುಷಿಯಾಗಿದೆ. ಆತ್ಮೀಯ ಸ್ವಾಗತಕ್ಕಾಗಿ ಧನ್ಯವಾದಗಳು. ಶೂಟಿಂಗ್‌ಗಾಗಿ ಎದುರು ನೋಡುತ್ತಿದ್ದೇನೆ ಎಂದು ನಟಿ ಸೋಶಿಯಲ್ ಮೀಡಿಯಾದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
Advertisement
View this post on Instagram
ಇದೊಂದು ಆ್ಯಕ್ಷನ್ ಸಿನಿಮಾವಾಗಿದ್ದು, ಈ ಚಿತ್ರಕ್ಕೆ ಎ.ಆರ್ ಮುರುಗದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಶಿವಕಾರ್ತಿಕೇಯನ್ ಮತ್ತು ರುಕ್ಮಿಣಿ ಮೊದಲ ಬಾರಿಗೆ ಜೊತೆಯಾಗಿ ನಟಿಸುತ್ತಿರುವ ಕಾರಣ, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಕೆಲದಿನಗಳ ಹಿಂದೆ ಮೃಣಾಲ್ ಠಾಕೂರ್ ನಾಯಕಿ ಎನ್ನಲಾಗಿತ್ತು. ಆದರೆ ನಾಯಕಿ ಸ್ಥಾನಕ್ಕೆ ಕನ್ನಡದ ನಟಿಗೆ ಚಿತ್ರತಂಡ ಮಣೆ ಹಾಕಿರುವುದಕ್ಕೆ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಇದನ್ನೂ ಓದಿ:‘ರಾಜಧಾನಿ ಎಕ್ಸ್ ಪ್ರೆಸ್’ ಚಿತ್ರದಲ್ಲಿ ಸಿಎಂ ಜಗನ್ ವಿಲನ್?: ಕೋರ್ಟ್ ಮೆಟ್ಟಿಲೇರಿದ ವಿವಾದ
ಶ್ರೀಮುರಳಿ ಜೊತೆ ‘ಬಘೀರ’, ಶಿವಣ್ಣ ಜೊತೆ ‘ಭೈರತಿ ರಣಗಲ್’, ವಿಜಯ್ ಸೇತುಪತಿ ಜೊತೆಗಿನ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ರುಕ್ಮಿಣಿ ಕೈಯಲ್ಲಿವೆ.