ಸ್ಯಾಂಡಲ್‌ವುಡ್ ಬ್ಯೂಟಿ ರುಕ್ಮಿಣಿ ವಸಂತ್‌ಗೆ (Rukmini Vasanth) ಟಾಲಿವುಡ್‌ನಲ್ಲಿ ಸಖತ್ ಬೇಡಿಕೆ ಶುರುವಾಗಿದೆ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ತೆಲುಗು ವರ್ಷನ್‌ನಲ್ಲಿ ರಿಲೀಸ್ ಆದ ಬಳಿಕ ರುಕ್ಮಿಣಿ ವಸಂತ್‌ಗೆ ತೆಲುಗಿನ ಪ್ರೇಕ್ಷಕರು ಕೂಡ ಫಿದಾ ಆಗಿದ್ದಾರೆ. ಈ ಬೆನ್ನಲ್ಲೇ ರುಕ್ಮಿಣಿಗೆ ಬಂಪರ್ ಆಫರ್‌ಗಳು ಅರಸಿ ಬರುತ್ತಿವೆ.

‘ಸಪ್ತ ಸಾಗರಲು ದಾಟಿ’ ಈಗ ಟಾಲಿವುಡ್ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ತೆಲುಗಿನಿಂದ ನಟಿಗೆ ಒಳ್ಳೆಯ ಸಿನಿಮಾ ಅವಕಾಶಗಳು ಅರಸಿ ಬರುತ್ತಿದೆ. ಒಳ್ಳೆಯ ಆಫರ್ ಸಿಕ್ಕರೆ ತೆಲುಗಿನಲ್ಲಿ ನಟಿಸುವೆ ಎಂದು ರುಕ್ಮಿಣಿ ಕೂಡ ಖುಷಿಯಿಂದ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ತೆಲುಗಿನಲ್ಲಿ ಮೊದಲೇ ಕನ್ನಡದ ನಟಿಮಣಿಯರ ದರ್ಬಾರ್ ಜೋರಾಗಿದೆ. ರಶ್ಮಿಕಾ ಮಂದಣ್ಣ(Rashmika Mandanna), ಶ್ರೀಲೀಲಾ (Sreeleela), ಪೂಜಾ ಹೆಗ್ಡೆ, ಕೃತಿ ಶೆಟ್ಟಿ ಹಾವಳಿ ಮಾಡುತ್ತಿರುವ ಬೆನ್ನಲ್ಲೇ ಇದೀಗ ರುಕ್ಮಿಣಿ ವಸಂತ್ ಕೂಡ ಅದೇ ಹಾದಿಯಲ್ಲಿ ಹೆಜ್ಜೆ ಇಡ್ತಿದ್ದಾರೆ. ಕನ್ನಡದ ನಟಿಯರ ನಡುವೆಯೇ ರುಕ್ಮಿಣಿ ಗೆದ್ದು ಬೀಗುತ್ತಾರಾ ಕಾಯಬೇಕಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]


