ದೇಶರಕ್ಷಣೆ – ಪ್ರಧಾನಿ ಮೋದಿ ಒಳಿತಿಗಾಗಿ ಅಡ್ವೆ ಗ್ರಾಮದಲ್ಲಿ ಋಕ್ ಸಂಹಿತಾ ಯಾಗ

Public TV
2 Min Read
udupi 2 2

ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಅಡ್ವೆಯಲ್ಲಿ ಋಕ್ ಸಂಹಿತಾ ಮಹಾಯಾಗದ ಪೂರ್ಣಾಹುತಿಯಾಗಿದೆ. ಕಳೆದ ಎರಡು ವರ್ಷಗಳಿಂದ ನಿರಂತರ ಯಾಗ ನಡೆದಿದ್ದು, ಈ ಬಾರಿ ದೇಶದ ಶ್ರೇಯೋಭಿವೃದ್ಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಒಳಿತಿಗಾಗಿ ಯಾಗ ನಡೆಸಲಾಗಿದೆ.

ಅಡ್ವೆ ಗ್ರಾಮದ ವಿದ್ವಾನ್ ಅಡ್ವೆ ಲಕ್ಷ್ಮೀಶಾಚಾರ್ಯರು ನಡೆಸಿರುವ ಋಕ್ ಸಂಹಿತಾ ಯಾಗ ಇದಾಗಿದ್ದು, ಪೂರ್ಣಾಹುತಿಯಲ್ಲಿ ಮೂರು ಮಠಾಧೀಶರು ಭಾಗಿಯಾದರು. ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪಲಿಮಾರು ವಿದ್ಯಾಧೀಶ, ವಿದ್ಯಾರಾಜೇಶ್ವರ ತೀರ್ಥರು ಪೂರ್ಣಾಹುತಿಯಲ್ಲಿ ಭಾಗಿಯಾದರು. ಆಚಾರ್ಯರು ಈವರೆಗೆ ಒಟ್ಟು 10 ಸಲ ಋಕ್ ಸಂಹಿತಾ ಯಾಗ ಮಾಡಿದ್ದಾರೆ. ಯಾಗದ ಪೂರ್ಣಾಹುತಿ ಸಂದರ್ಭದಲ್ಲಿ ಕೊರೊನಾ ಮಹಾಮಾರಿ ದೂರಾಗಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.

NARENDRA MODI 1 4

ಅಡ್ವೆ ಎಂಬ ಪುಟ್ಟ ಹಳ್ಳಿಯಲ್ಲಿ ತಮ್ಮ ಮನೆಯಲ್ಲೇ ಕಳೆದೆರಡು ವರ್ಷಗಳಿಂದ ಯಾವ ಪ್ರಚಾರವೂ ಇಲ್ಲದೇ ನರೇಂದ್ರ ಮೋದಿಯವರಿಗೆ ಮತ್ತು ದೇಶಕ್ಕೆ ಕ್ಷೇಮ ಸುಭಿಕ್ಷೆ ಸಮೃದ್ಧಿ ಶಾಂತಿಗಾಗಿ ಪ್ರಾರ್ಥಿಸಿ ಪ್ರತಿನಿತ್ಯ ಅತ್ಯಂತ ಶ್ರದ್ಧೆಯಿಂದ ಋಗ್ವೇದ ಸಂಹಿತಾ ಯಾಗ ನಡೆಸುತ್ತಿದ್ದಾರೆ. ಇದನ್ನೂ ಓದಿ: ವಿಶಾಖಪಟ್ಟಣಂ-ದೆಹಲಿ, ಆಂಧ್ರಪ್ರದೇಶ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೊಗೆ – ಪ್ರಯಾಣಿಕರಲ್ಲಿ ಆತಂಕ

ವಿದ್ವಾನ್ ಅಡ್ವೆ ಲಕ್ಷ್ಮೀಶಾಚಾರ್ಯರು ಈ ಯಾಗದ ಕರ್ತೃವಾಗಿದ್ದು ಈಗಾಗಲೇ ಲೋಕದ ಒಳಿತಿಗಾಗಿ ಒಂಭತ್ತು ಬಾರಿ ಋಕ್ ಸಂಹಿತಾಯಾಗವನ್ನು ನಡೆಸಿದ್ದು, ಈ ಬಾರಿ ಹತ್ತನೇ ಸಲದ ಯಾಗವನ್ನು ಪೂರ್ಣಗೊಳಿಸಿದ್ದು ಅಪೂರ್ವ ಸಂಗತಿ. ಪ್ರಸ್ತುತ ದೇಶದಲ್ಲಿರುವ ತೀರಾ ಬೆರಳೆಣಿಕೆಯ ಅಗ್ನಿಹೋತ್ರಿಗಳಲ್ಲಿ ಇವರೂ ಒಬ್ಬರೂ. ಕಳೆದ ಅನೇಕ ವರ್ಷಗಳಿಂದ ತಮ್ಮ ಮನೆಯಲ್ಲಿ ಅಗ್ನಿಯನ್ನು ಪ್ರತಿಷ್ಠಾಪಿಸಿ ಒಂದು ದಿನವೂ ಬಿಡದೇ ಪ್ರತೀನಿತ್ಯ ಮೂರು ಹೊತ್ತು ಅಗ್ನಿಯ ಉಪಾಸನೆಯನ್ನು ಮಾಡುತ್ತಿರುವುದು ಈ ಕಾಲದಲ್ಲಿ ಅತ್ಯಂತ ಅಚ್ಚರಿಯ ಸಂಗತಿಯಾಗಿದೆ ಎಂದು ಪೆರಂಪಳ್ಲಿ ವಾಸುದೇವ ಭಟ್ ಹೇಳಿದ್ದಾರೆ.

udupi 1 2

ಸ್ಥಳೀಯ ಶ್ರೀ ಯೋಗದೀಪಿಕಾ ಗುರುಕುಲದಲ್ಲಿ ಪ್ರಾಚಾರ್ಯರಾಗಿ ಕರ್ತವ್ಯ ನಿರ್ವಹಿಸುತ್ತಾ ಅದರ ಜೊತೆಗೆ ಆಸುಪಾಸಿನಲ್ಲೇ ಅಗ್ನಿಯ ಉಪಾಸನೆ, ಕೆಲವು ಕಡೆಗಳಲ್ಲಿ ಪ್ರವಚನ ಇತ್ಯಾದಿಗಳಿಂದ ಸೀಮಿತ ಆದಾಯವನ್ನು ಪಡೆಯುತ್ತಿದ್ದಾರೆ. ಆದಾಯದ ಬಹುಪಾಲನ್ನು ಲೋಕ ಹಿತಕ್ಕಾಗಿ ವಿನಿಯೋಗಿಸುತ್ತಿದ್ದಾರೆ. ಕೊರೊನಾ ವಿಪತ್ತಿನ ಸಂದರ್ಭದಿಂದ ಆರಂಭಿಸಿ ಎರಡು ವರ್ಷಗಳಿಂದ ಯಾಗ ಮಾಡುತ್ತಿರುವುದು ದೇವರಿಗೆ ಮೆಚ್ಚಿಗೆಯಾಗಿದೆ.

ಪರಮಪೂಜ್ಯ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮತ್ತು ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹಾಗೂ ಶಾಸಕರುಗಳಾದ ಲಾಲಾಜಿ ಆರ್ ಮೆಂಡನ್ , ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಅನೇಕ ವೈದಿಕ ವಿದ್ವಾಂಸರು ಉಪಸ್ಥಿತರಿದ್ದರು. ಇದನ್ನೂ ಓದಿ: ಪ್ರಿಯತಮೆ ತಾಯಿಗಾಗಿ ಕಿಡ್ನಿ ಕೊಟ್ಟ- ಒಂದೇ ಕಿಡ್ನಿಯವ ಬೇಡವೆಂದು ಬೇರೆಯವ್ರ ಕೈ ಹಿಡಿದ್ಳು!

Share This Article
Leave a Comment

Leave a Reply

Your email address will not be published. Required fields are marked *