‘ಸ್ಟಾಕರ್’ ಚಿತ್ರ ನಿರ್ಮಾಣ ಮಾಡಿದ್ದ ಎಸ್‌ಎಂಎಲ್ ಪ್ರೊಡಕ್ಷನ್ ಸಂಸ್ಥೆಯು ’ಪ್ರೊಡಕ್ಷನ್ ನಂ.2’ ಹೆಸರಿನಲ್ಲಿ ಹೊಸ ಚಿತ್ರವನ್ನು ಶುರು ಮಾಡಲು ಸಜ್ಜಾಗಿತ್ತು. ಸೂಕ್ತ ಶೀರ್ಷಿಕೆ (Title) ನೀಡಿದವರಿಗೆ ಇಪ್ಪತ್ತೊಂದು ಸಾವಿರ ಬಹುಮಾನ ನೀಡುವುದಾಗಿ ಹೇಳಿಕೊಂಡಿತ್ತು. ಇದಕ್ಕಾಗಿ ಫಸ್ಟ್ ಲುಕ್ ಪೋಸ್ಟರ್ ಹಾಗೂ ಟೀಸರ್‌ನ್ನು ಬಿಡುಗಡೆ ಮಾಡಿದ್ದರು. ಅದರಂತೆ ನೂರಾರು ಸಿನಿರಸಿಕರು ಹೆಸರುಗಳನ್ನು ನೀಡಿದ್ದಾರೆ.
ಪ್ರೇಕ್ಷಕರು ನೀಡಿದ ಟೈಟಲ್ ನಲ್ಲೇ ಕೊನೆಗೊಂದು ಆಯ್ಕೆ ಮಾಡಿಕೊಂಡಿದ್ದು, ಬೆಂಗಳೂರಿನ ಸುರೇಶ್ (Suresh) ಎಂಬುವರು ನೀಡಿದ ಟೈಟಲ್ ಆಯ್ಕೆಯಾಗಿದೆ. ’ರುದ್ರಪ್ಪ’ (Rudrappa) ಎಂಬ ಟೈಟಲ್ ನೀಡುವ ಮೂಲಕ ಸುರೇಶ್ ಬಹುಮಾನ ಪಡೆದಿದ್ದಾರೆ. ರಮೇಶ್ (Ramesh) ನಾಯಕನಾಗಿ ಎರಡನೇ ಅನುಭವ. ಇದನ್ನೂ ಓದಿ:ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ
ಹೇಮಂತ್ (Hemant) ನಿರ್ದೇಶನದಲ್ಲಿ ಭರತ್.ಹೆಚ್.ಎಸ್ ಸಂಗೀತ ಮತ್ತು ಸುಧೀರ್ ಛಾಯಾಗ್ರಹಣ ಇರಲಿದೆ. ನಾಯಕಿ, ಮಿಕ್ಕಂತೆ ಕಲಾವಿದರುಗಳನ್ನು ಅಡಿಷನ್ ಮೂಲಕ ಆಯ್ಕೆ ಮಾಡಲಿದ್ದು, ಪ್ರಕ್ರಿಯೆ ಶುರುವಾಗಿದೆ. ಇನ್ನರೆಡು ತಿಂಗಳಲ್ಲಿ ಶೂಟಿಂಗ್ ಪ್ರಾರಂಭಿಸಲು ತಂಡವು ಯೋಜನೆ ರೂಪಿಸಿಕೊಂಡಿದೆ.