ಹಾವೇರಿ: ರಾಜ್ಯದಲ್ಲಿ ಬರಗಾಲ ತಂಡವವಾಡ್ತಾ ಇದ್ರೂ ಮಿನಿಸ್ಟರ್‍ಗಳು ಫಾರಿನ್ ಟೂರ್ ಚಟ ಬಿಟ್ಟಿಲ್ಲ. ಜವಳಿ ಸಮಾವೇಶದ ಸೋಗಿನಲ್ಲಿ ಜವಳಿ ಮಂತ್ರಿ ರುದ್ರಪ್ಪ ಲಮಾಣಿ ಒಂದು ವಾರ ಫಾರಿನ್ ಟೂರ್ ಹೊರಟ್ಟಿದ್ದಾರೆ.
ರಷ್ಯಾದ ಪೀಟರ್ಸ್‍ಬರ್ಗ್‍ನಲ್ಲಿ ಜವಳಿ ಕುರಿತು ಸಮಾವೇಶ ನಡೆಯುತ್ತದೆ. ಹಾಗಾಗಿ ಇಂದು ಸಂಜೆ ಫಾರಿನ್ ಪ್ರವಾಸಕ್ಕೆ ಹೊರಟಿದ್ದೇವೆ ಎಂದು ಸಚಿವಾಲಯ ಹೇಳಿದೆ. ರುದ್ರಪ್ಪ ಲಮಾಣಿಗೆ ಕುಟುಂಬ ಸದಸ್ಯರು ಕೂಡ ಸಾಥ್ ಕೊಡುತ್ತಿದ್ದಾರೆ ಎನ್ನಲಾಗಿದೆ.
Advertisement
ಜವಳಿ ಮಂತ್ರಿ ನಾನೊಬ್ಬನೇ ಹೋಗೋದು ಸರಿ ಇಲ್ಲ ಅಂತ ಸರ್ಕಾರಿ ದುಡ್ಡಿನಲ್ಲಿ ಕುಟುಂಬ ಸದಸ್ಯರಿಗೂ ಫಾರಿನ್ ದರ್ಶನ ಮಾಡಿಸೋಕೆ ಹೊರಟಿದ್ದಾರೆ. ಇದರ ಜೊತೆಯಲ್ಲಿ ಸಚಿವರ ಆಪ್ತ ಕಾರ್ಯದರ್ಶಿಗೂ ಪ್ರವಾಸ ಭಾಗ್ಯ ಕೊಟ್ಟಿದ್ದಾರಂತೆ. ಮಿನಿಸ್ಟರ್ ಓಕೆ ಅಂದ ಕೂಡಲೇ ಆಪ್ತ ಸಹಾಯಕ ಕೃಷ್ಣನಾಯಕ್, ಡೈರಕ್ಟರ್ ರಮೇಶ್, ಕೈಮಗ್ಗ ನಿಗಮದ ಎಂ.ಡಿ. ಶ್ರೀನಿವಾಸ್‍ಮೂರ್ತಿ, ಜಂಟಿ ನಿದೇರ್ಶಕ ಪ್ರಕಾಶ್ ಎಲ್ಲರೂ ಲಗೇಜ್ ಪ್ಯಾಕ್ ಮಾಡಿಕೊಂಡು ಇಂದು ಸಂಜೆ ವಿಮಾನ ಹತ್ತೋಕೆ ಸಿದ್ದವಾಗಿದ್ದರೆ.
Advertisement
ಸರ್ಕಾರಿ ದುಡ್ಡಿನಲ್ಲಿ ತಮ್ಮ ಕುಟುಂಬಸ್ಥರಿಗೂ ವಿದೇಶದ ದರ್ಶನ ಮಾಡಿಸುತ್ತಿದ್ದಾರೆ ಎಂಬುವುದಾಗಿ ತಿಳಿದುಬಂದಿದೆ.