ಮಂಗಳೂರು | ಮದುವೆಯ ವಿಚಾರಕ್ಕೆ ಕಿರಿಕ್ – ಸಂಧಾನಕ್ಕೆ ಬಂದಿದ್ದ ನೆಂಟನ ಬರ್ಬರ ಹತ್ಯೆ

Public TV
1 Min Read
Salman

ಮಂಗಳೂರು: ಮದುವೆ (Marriage) ವೇಳೆ ನಡೆದ ಗಲಾಟೆಯ ವಿಚಾರವಾಗಿ ಸಂಧಾನಕ್ಕೆ ಬಂದಿದ್ದ ವ್ಯಕ್ತಿಯನ್ನು ಹತ್ಯೆಗೈದಿರುವ ಘಟನೆ ಮಂಗಳೂರು (Mangaluru) ಹೊರವಲಯದ ವಳಚ್ಚಿಲ್ ಎಂಬಲ್ಲಿ ನಡೆದಿದೆ.

ಹತ್ಯೆಯಾದ ವ್ಯಕ್ತಿಯನ್ನು ವಾಮಂಜೂರು ನಿವಾಸಿ ಸುಲೈಮಾನ್ (50) ಎಂದು ಗುರುತಿಸಲಾಗಿದೆ. ಹತ್ಯೆಗೈದ ಆರೋಪಿಯನ್ನು ಮುಸ್ತಫಾ (30) ಎಂದು ಗುರುತಿಸಲಾಗಿದೆ. ಕೊಲೆ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಕೊಲೆಯಾದ ಸುಲೈಮಾನ್, ಸಂಬಂಧಿ ಮುಸ್ತಫಾನ ಮದುವೆ ನೆರವೇರಿಸಿದ್ದರು. ಮದುವೆ ವೇಳೆ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಗಲಾಟೆ ವಿಚಾರವಾಗಿ ಮಾತುಕತೆ ನಡೆಸಲು ಸುಲೈಮಾನ್, ತನ್ನ ಇಬ್ಬರು ಪುತ್ರರಾದ ರಿಯಾಬ್ ಮತ್ತು ಸಿಯಾಬ್ ಜೊತೆಗೆ ಬಂದಿದ್ದರು. ಈ ವೇಳೆ ಮುಸ್ತಫಾ ಚಾಕು ಇರಿದಿದ್ದಾನೆ. ಅಲ್ಲದೇ ಸಹೋದರರ ಮೇಲೂ ದಾಳಿ ಮಾಡಿ ಪರಾರಿಯಾಗಿದ್ದಾನೆ.

ಗಂಭೀರವಾಗಿ ಗಾಯಗೊಂಡ ಸುಲೈಮಾನ್, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಗಾಯಗೊಂಡ ರಿಯಾಬ್ ಮತ್ತು ಸಿಯಾಬ್‍ರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Share This Article