ನ್ಯೂಯಾರ್ಕ್: ಹಿರಿಯ ರಾಜತಾಂತ್ರಿಕ ಅಧಿಕಾರಿ ರುಚಿರಾ ಕಾಂಬೋಜ್ ಅವರನ್ನು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿ ಇಂದು ನೇಮಕ ಮಾಡಲಾಗಿದೆ.
ಭಾರತೀಯ ವಿದೇಶಾಂಗ ಸೇವೆಯ (ಐಎಫ್‌ಎಸ್) 1987ರ ಬ್ಯಾಚ್‌ನ ಅಧಿಕಾರಿಯಾಗಿರುವ ರುಚಿರಾ ಅವರು ಪ್ರಸ್ತುತ ಭೂತಾನ್‌ನಲ್ಲಿ ಭಾರತೀಯ ರಾಯಭಾರಿಯಾಗಿದ್ದರು. ಇದೀಗ ಟಿ.ಎಸ್.ತಿರುಮೂರ್ತಿ ಅವರ ನಿವೃತ್ತಿ ನಂತರ ವಿಶ್ವಸಂಸ್ಥೆಯ ಭಾರತೀಯ ರಾಯಭಾರಿಯಾಗಲಿದ್ದಾರೆ. ಅವರು ಶೀಘ್ರ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಮಾವೋವಾದಿಗಳ ದಾಳಿಗೆ 3 CRPF ಸಿಬ್ಬಂದಿ ಹುತಾತ್ಮ
Advertisement
Advertisement
ಅಲ್ಲದೆ ರುಚಿರಾ ಅವರು 1991-96ರ ಅವಧಿಯಲ್ಲಿ ಪಶ್ಚಿಮ ಯೂರೋಪ್‌ನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಈ ವೇಳೆ ಫ್ರಾನ್ಸ್, ಯುಕೆ, ಬೆನೆಲಕ್ಸ್ ದೇಶಗಳು, ಇಟಲಿ, ಸ್ಪೇನ್ ಮತ್ತು ಪೋರ್ಚುಗಲ್ ದೇಶಗಳೊಂದಿಗೆ ವ್ಯವಹರಿಸಿದ್ದರು. ಕಾಮನ್‌ವೆಲ್ತ್ ದೇಶಗಳೊಂದಿಗಿನ ಸಂಬಂಧವನ್ನೂ ನಿರ್ವಹಿಸಿದ್ದರು. 2011-14ರ ಅವಧಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಶಿಷ್ಟಾಚಾರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಇದನ್ನೂ ಓದಿ: ಆಳ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿರುವ ಹಡಗು- 15 ಮಂದಿಯ ರಕ್ಷಣೆ
Advertisement
Advertisement
ಪ್ರಸಕ್ತ ವರ್ಷದಲ್ಲಿ ವಿದೇಶಾಂಗ ಕಾರ್ಯದರ್ಶಿ ಹುದ್ದೆಗೆ ನೇಮಗೊಂಡ ಐಎಫ್‌ಎಸ್ ಅಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ.