ರಾಯಚೂರು: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 1.60 ಲಕ್ಷ ಕ್ಯೂಸೆಕ್‍ಗೂ ಅಧಿಕ ಪ್ರಮಾಣದ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಒಂದೆಡೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದರೆ ಇನ್ನೊಂದೆಡೆ ರಾಯಚೂರು ತಾಲೂಕಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್‍ನ 104 ಗೇಟ್‍ಗಳು ಓಪನ್ ಆಗದೇ ಪ್ರವಾಹ ಭೀತಿ ಹೆಚ್ಚಾಗಿದೆ.
Advertisement
ರಾಯಚೂರು ತಾಲೂಕಿನ ಗುರ್ಜಾಪುರ ಬಳಿ ಆರ್‌ಟಿಪಿಎಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕಾಗಿ ನಿರ್ಮಿಸಿರುವ 1.5 ಟಿಎಂಸಿ ಸಾಮಥ್ರ್ಯದ ಬ್ರಿಡ್ಜ್ ಕಂ ಬ್ಯಾರೇಜ್‍ನ ಕ್ರಸ್ಟ್ ಗೇಟ್‍ಗಳನ್ನು ತೆಗೆಯುವುದು ಅಸಾಧ್ಯವಾಗಿರುವ ಹಿನ್ನೆಲೆ ಹಿನ್ನೀರಿನಿಂದ ಗುರ್ಜಾಪುರ, ಅರಷಿಣಿಗಿ, ತಿಮ್ಮಾಪುರ ಸೇರಿ ಹಲವು ಗ್ರಾಮಗಳು ಹಾಗೂ ಜಮೀನಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ಕೆಪಿಸಿ, ಆರ್‍ಟಿಪಿಎಸ್ ಅಧಿಕಾರಿಗಳ ಉಸ್ತುವಾರಿಯಲ್ಲಾದ ಯಡವಟ್ಟಿನಿಂದ ಪ್ರವಾಹ ಪರಿಸ್ಥಿತಿ ಬಂದಿದೆ. ಇದನ್ನೂ ಓದಿ: ದ್ರೌಪದಿ ಮುರ್ಮು ಗೌರವಿಸುತ್ತೇವೆ, ಸಿನ್ಹಾರನ್ನು ಬೆಂಬಲಿಸುತ್ತೇವೆ: ಎಎಪಿ
Advertisement
Advertisement
ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆ ಮಾಹಿತಿಯಿದ್ದರು ಗೇಟ್ ತೆರೆಯದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ನೀರಿನ ಒತ್ತಡ ಹೆಚ್ಚಾಗಿದ್ದರಿಂದ ಗೇಟ್‍ಗಳನ್ನು ತೆರೆಯುವುದು ಅಸಾಧ್ಯವಾಗಿದೆ. ಒಟ್ಟು 194 ಗೇಟ್‍ಗಳಲ್ಲಿ 90 ಗೇಟ್ ಮಾತ್ರ ಇದುವರೆಗೆ ತೆರೆದಿದ್ದು, ಇನ್ನೂ 104 ಗೇಟ್ ಬಂದ್ ಆಗಿವೆ. ಹೀಗಾಗಿ ಬ್ರಿಡ್ಜ್ ಕಂ ಬ್ಯಾರೇಜ್‍ನ ಹಿನ್ನೀರು ಗ್ರಾಮಗಳಿಗೆ ನುಗ್ಗುವ ಆತಂಕ ಎದುರಾಗಿದೆ. ಇದನ್ನೂ ಓದಿ: ಸಿನಿಮಾ ನಟನೆಯತ್ತ ಮತ್ತೆ ಮರಳಿದ ಮೇಘನಾ ರಾಜ್ : ಮೇಘನಾಗಾಗಿ ಪನ್ನಗಾಭರಣ ನಿರ್ಮಾಣ
Advertisement
ಕೆಪಿಸಿ ಅಧಿಕಾರಿಗಳು ಕೇರಳದಿಂದ ಡೈವಿಂಗ್ ತಂಡವನ್ನ ಕರೆಸಿದ್ದು ನಾಲ್ಕು ಜೆಸಿಬಿ, ಒಂದು ಹಿಟಾಚಿ ಬಳಸಿ ಗೇಟ್ ತೆರೆಯಲು ಹರಸಾಹಸ ಪಡುತ್ತಿದ್ದಾರೆ. ಗೇಟ್ ತೆರೆಯಲು ಆಗದೇ ಸಿಬ್ಬಂದಿ ಪರದಾಡುತ್ತಿದ್ದಾರೆ.