ಬೆಂಗಳೂರು: ಕೋಟಿ ಕೋಟಿ ತೆರಿಗೆ ವಂಚಿಸಿ ನಗರದಲ್ಲಿ ಓಡಾಡಿಕೊಂಡಿದ್ದ ಐಷಾರಾಮಿ ಕಾರು (Car) ಮಾಲೀಕನಿಗೆ ಆರ್‌ಟಿಓ ಅಧಿಕಾರಿಗಳು (RTO Officers) ಬಿಸಿ ಮುಟ್ಟಿಸಿದ್ದಾರೆ. 1.58 ಕೋಟಿ ಬಾಕಿ ತೆರಿಗೆ ಪಾವತಿಸಲು ಇಂದು ಸಂಜೆ ವರೆಗೆ ಡೆಡ್‌ಲೈನ್ ಫಿಕ್ಸ್ ಮಾಡಿದ್ದಾರೆ.
ಹೌದು. ಸುಮಾರು ಏಳುವರೆ ಕೋಟಿ ಮೌಲ್ಯದ ಫೆರಾರಿ ಕಾರು (Ferrari Car) ಖರೀಸಿದಿದ್ದ ಮಾಲೀಕನೊಬ್ಬ ತೆರಿಗೆ ಪಾವತಿಸದೇ ಓಡಾಡಿಕೊಂಡಿದ್ದ. ಮಹಾರಾಷ್ಟ್ರ ರಿಜಿಸ್ಟ್ರೇಷನ್ ಹೊಂದಿದ ಕಾರು ಇದಾಗಿದೆ. ಮಹಾರಾಷ್ಟ್ರದಲ್ಲಿ 20 ಲಕ್ಷ ರೂ. ತೆರಿಗೆ ಪಾವತಿಸಿ 2023ರ ಸೆಪ್ಟೆಂಬರ್‌ನಿಂದಲೂ ರಾಜ್ಯದಲ್ಲಿ ಅನಧಿಕೃತವಾಗಿ ಓಡಾಟ ನಡೆಸುತ್ತಿದ್ದ. ಕಾರಿನ ಅನಧಿಕೃತ ಓಡಾಟದ ಬಗ್ಗೆ ಆರ್‌ಟಿಓಗೆ ಟ್ರಾಫಿಕ್ ಪೊಲೀಸರು (Bengaluru Traffic Police) ಮಾಹಿತಿ ನೀಡಿದ್ದರು. ಬುಧವಾರ (ಜು.2) ಬೆಂಗಳೂರಿನ ಲಾಲ್ ಬಾಗ್ ಬಳಿ ಕಾರನ್ನು ತಡೆಹಿಡಿದ ಆರ್‌ಟಿಓ ಅಧಿಕಾರಿಗಳು ತಪಾಸಣೆ ನಡೆಸಿದಾಗ ತೆರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿತ್ತು. ಇದನ್ನೂ ಓದಿ: ಪಂಜಾಬ್ | ನಕಲಿ ದಾಖಲೆ ಸೃಷ್ಟಿಸಿ 2ನೇ ಮಹಾಯುದ್ಧದಲ್ಲಿ ಬಳಸಿದ್ದ ವಾಯುನೆಲೆ ಮಾರಾಟ – 28 ವರ್ಷಗಳ ಬಳಿಕ ಎಫ್‌ಐಆರ್
ನಂತರ ಕಾರನ್ನು ವಶಕ್ಕೆ ಪಡೆದ ಅಧಿಕಾರಿಗಳು ಜಯನಗರ 5ನೇ ಬ್ಲಾಕ್‌ನಲ್ಲಿರುವ ಮಾಲೀಕನ ನಿವಾಸದ ಮುಂದೆಯೇ ಮನೆ ಮುಂದೆಯೇ ಕಾರು ನಿಲ್ಲಿಸಿದ್ದಾರೆ. ಅಧಿಕಾರಿಗಳು ಸ್ಥಳದಲ್ಲೇ ಇದ್ದು ತೆರಿಗೆ ಪಾವತಿಸಲು ಸಂಜೆ ವರೆಗೆ ಕಾಲಾವಕಾಶ ನೀಡಲಾಗಿದೆ. ಇದನ್ನೂ ಓದಿ: ಕೈಕೊಟ್ಟು ಬೇರೆ ಮದುವೆಯಾಗಲು ನಿರ್ಧರಿಸಿದ ಪ್ರೇಯಸಿ – ಲಾಡ್ಜ್‌ಗೆ ಕರೆಸಿ 20 ಬಾರಿ ಇರಿದು ಕೊಂದ ಪಾಗಲ್ ಪ್ರೇಮಿ
ಟ್ಯಾಕ್ಸ್ ಕಟ್ಟಲು ಕಾರು ಮಾಲೀಕರು ಸಮಯಾವಕಾಶ ಕೇಳಿದ ಹಿನ್ನೆಲೆ ಸಂಜೆ ವರೆಗೆ ಡೆಡ್‌ಲೈನ್ ಕೊಟ್ಟಿದ್ದಾರೆ. ಅಷ್ಟರಲ್ಲಿ 1.58 ಕೋಟಿ ತೆರಿಗೆ ಕಟ್ಟದೇ ಇದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಲ್ಲಿಯ ತನಕ ಕಾರು ಆರ್‌ಟಿಓ ಅಧಿಕಾರಿಗಳ ಸುಪರ್ದಿಯಲ್ಲೇ ಇರಲಿದೆ ಎಂದು ಆರ್‌ಟಿಓ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: UP | ರಾಂಗ್ ರೂಟ್‌ಲ್ಲಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದ ಟ್ರಕ್ – ತಂದೆ, 4 ಮಕ್ಕಳು ಸೇರಿ ಐವರು ದುರ್ಮರಣ