ಬೆಂಗಳೂರು: ಹೊಟ್ಟೆಪಾಡಿಗಾಗಿ ಚಿಲ್ಲರೆ ಅಂಗಡಿ ಇಟ್ಟುಕೊಂಡ ಮಹಿಳೆಯೊಬ್ಬರಿಗೆ ಆರ್‍ಟಿಒ ಅಧಿಕಾರಿ ಬೆದರಿಸಿ ಜೀವ ಭಯ ತಂದಿರೋ ಘಟನೆ ನೆಲಮಂಗಲದಲ್ಲಿ ನಡೆದಿದೆ.
ಭಾರತಿ ಎಂಬ ಮಹಿಳೆ ತನ್ನ ಗಂಡನ ಸಾವಿನ ಬಳಿಕ ಇಬ್ಬರು ಮಕ್ಕಳನ್ನು ಸಾಕಲು ಆರ್‍ಟಿಓ ಕಚೇರಿ ಮುಂದೆ ಚಿಲ್ಲರೆ ಅಂಗಡಿ ಇಟ್ಟುಕೊಂಡಿದ್ದಾರೆ. ಆದರೆ ನೆಲಮಂಗಲದ ಆರ್‍ಟಿಓ ಲಿಂಗರಾಜು ಭಾರತಿ ಅವರ ಮನೆಗೆ ನುಗ್ಗಿ ಬೆದರಿಸಿದ್ದಾರೆ. ಅಂಗಡಿ ಮತ್ತು ಮನೆ ಸರ್ಕಾರಿ ಜಾಗದಲ್ಲಿದೆ. ಹೀಗಾಗಿ ಜೆಸಿಬಿ ಮೂಲಕ ಡೆಮಾಲಿಷನ್ ಮಾಡ್ತೀನಿ ಅಂತಾ ಬೆದರಿಸಿದ್ದಾರೆ.
ಇದೇ ಜಾಗದಲ್ಲಿ ಆರ್‍ಟಿಓ ಕಚೇರಿ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಆದರೆ ಕನಿಕರದ ಆಧಾರದ ಮೇಲೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಉತ್ತರ ತಹಶೀಲ್ದಾರ್ ಈ ವಿಧವೆಗೆ 2 ಗುಂಟೆ ನಿವೇಶನ ನೀಡಿದ್ದಾರೆ. ಆದ್ರೂ ಈ ದಾಖಲೆಯನ್ನು ಆರ್‍ಟಿಓ ಅಧಿಕಾರಿಗಳು ನೋಡ್ತಿಲ್ಲ. ನೊಂದ ಮಹಿಳೆ ಮಾದನಾಯಕನಹಳ್ಳಿ ಪೊಲೀಸರಿಗೆ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ.
ಇತ್ತ ಮಹಿಳೆಯ ಮಕ್ಕಳು ಸಹ ಅಧಿಕಾರಿಗಳ ಕಿರುಕುಳದಿಂದ ಮನನೊಂದಿದ್ದಾರೆ.